ಮಲ್ಲೇಶ್ವರಂ ಶ್ರೀ ರಾಮ ಮಂದಿರದಲ್ಲಿ ರಾಮನವಮಿ ಉತ್ಸವ: ಮಾ.22ರಿಂದ ಏ.9ರ ವರೆಗೆ

Upayuktha
0

 


ಬೆಂಗಳೂರು: ಇತ್ತೀಚೆಗೆ ಶತಮಾನೋತ್ಸವವನ್ನು ಆಚರಿಸಿಕೊಂಡ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀರಾಮ ನವಮಿ ಉತ್ಸವವನ್ನು ಮಾರ್ಚ್ 22 ರಿಂದ ಏಪ್ರಿಲ್ 9ರ ವರೆಗೆ ಆಚರಿಸಲಿದ್ದು ಕಾರ್ಯಕ್ರಮಗಳು ಈ ರೀತಿ ಇವೆ :


ಮಾರ್ಚ್ 22, ಬೆಳಗ್ಗೆ 7 ಗಂಟೆಗೆ ಸೂರ್ಯ ನಮಸ್ಕಾರ, ರಾಮಾಯಣ ಪಾರಾಯಣ, ಶ್ರೀ ರಾಮ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು. ಸಂಜೆ 5 ಗಂಟೆಗೆ ಪಂಚಾಂಗ ಶ್ರವಣ. ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6-30ಕ್ಕೆ  


ಮಾರ್ಚ್ 22-ವಿ|| ಸೀತಾ ಸತ್ಯನಾರಾಯಣ ಮತ್ತು ಸಂಗಡಿಗರಿಂದ "ಸಂಗೀತ ಕಾರ್ಯಕ್ರಮ", ಮಾರ್ಚ್ 23-ವಿ|| ಹರಿಣಿ ಶ್ರೀಧರ್ ಮತ್ತು ಸಂಗಡಿಗರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ", ಮಾರ್ಚ್ 24-ಮೈಸೂರು ಶ್ರೀ ವಿ. ರಾಜೇಶ್ ಮತ್ತು ಸಂಗಡಿಗರಿಂದ "ಪಿಟೀಲು ವಾದನ", ಮಾರ್ಚ್ 25-ವಿ||  ಜಯರಾಮ್ ಮತ್ತು ಸಂಗಡಿಗರಿಂದ "ಗಾಯನ", ಮಾರ್ಚ್ 26-ನೃತ್ಯ ಲಹರಿ ಕಲಾ ಕೇಂದ್ರ ಟ್ರಸ್ಟ್ ನ ವಿದ್ಯಾರ್ಥಿಗಳಿಂದ "ಭರತನಾಟ್ಯ" ನಿರ್ದೇಶನ :  ರೂಪಾ ಗಿರೀಶ್, ಮಾರ್ಚ್ 27-ಡಾ. ಗೀತಾ ಆರ್. ಭಟ್ ಮತ್ತು ಸಂಗಡಿಗರಿಂದ "ವೀಣಾ ವಾದನ", ಮಾರ್ಚ್ 28-ನಾಟ್ಯಾರಾಧನ ಸ್ಕೂಲ್ ಆಫ್ ಭರತನಾಟ್ಯ ಸಂಸ್ಥೆಯ ಕಲಾವಿದರಿಂದ "ನೃತ್ಯ ಪ್ರದರ್ಶನ" ನಿರ್ದೇಶನ :  ವೀಣಾ ಶ್ರೀಧರ್ ಮೊರಬ್, ಮಾರ್ಚ್ 29-ಡಾ. ಎಂ.ವಿ. ಶ್ರೀನಿವಾಸ ಮೂರ್ತಿ ಮತ್ತು ಸಂಗಡಿಗರಿಂದ "ಗಾಯನ",  ಮಾರ್ಚ್ 30-ಶ್ರೀರಾಮ ನವಮಿ ಪ್ರಯುಕ್ತ ಬೆಳಗ್ಗೆ 9 ಗಂಟೆಗೆ : ಪಂಚಾಮೃತ ಅಭಿಷೇಕ, ತೊಟ್ಟಿಲು ಸೇವೆ, ಪಾನಕ ಸೇವೆ. ಸಂಜೆ 6-30ಕ್ಕೆ ಸ್ತುತಿ ವಾಹಿನಿ ತಂಡದವರಿಂದ "ಭಜನಾಮೃತ", ಮಾರ್ಚ್ 31-ಡಾ. ಅರ್ಚನಾ ಕುಲಕರ್ಣಿ ಮತ್ತು ಸಂಗಡಿಗರಿಂದ "ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ".


ಏಪ್ರಿಲ್ 1-ಕೃತಿಕಾ ಶ್ರೀನಿವಾಸನ್ ಮತ್ತು ಸಂಗಡಿಗರಿಂದ "ಗಾಯನ", ಏಪ್ರಿಲ್ 2-ವಿ|| ಚಿಂತಲಪಲ್ಲಿ ಶ್ರೀನಿವಾಸ್ ಮತ್ತು ಸಂಗಡಿಗರಿಂದ "ಸಂಗೀತ", ಏಪ್ರಿಲ್ 3-ಕು|| ಮನಸ್ವಿ ಕಶ್ಯಪ್, ಕು|| ದೀಪ್ತಿ ಶ್ರೀನಿವಾಸನ್ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ", ಏಪ್ರಿಲ್ 4- ಭವಾನಿ ಭುವನ್,ಸುಮಲತಾ ಮಂಜುನಾಥ್ ಮತ್ತು ಸಂಗಡಿಗರಿಂದ "ಹರಿದಾಸ ವೈಭವ", ಏಪ್ರಿಲ್ 5-ವಿ|| ಶಂಕರ್ ರಾಜನ್ ರಿಂದ "ಪಿಟೀಲು ವಾದನ" ವಿ|| ಭಾರ್ಗವ (ಮೃದಂಗ), ಏಪ್ರಿಲ್ 6-ಜಪಮಾಲಸರ ನೃತ್ಯ-ಸಂಗೀತ ಶಾಲೆಯ ತಂಡದವರಿಂದ "ಭರತನಾಟ್ಯ", ಏಪ್ರಿಲ್ 7-ಕು|| ವಸುಧಾ ಶ್ರೀಕಾಂತ್ ಕಟ್ಟೆ  ಮತ್ತು ಸಂಗಡಿಗರಿಂದ "ಗಾಯನ", ಏಪ್ರಿಲ್ 8-'ಸಂಗೀತ ಕಲಾರತ್ನ' ವಿ|| ಎಸ್. ಶಂಕರ್ ಮತ್ತು ಸಂಗಡಿಗರಿಂದ "ಸಂಗೀತ", ಏಪ್ರಿಲ್ 9-ಬೆಳಗ್ಗೆ 7 ಗಂಟೆಗೆ : ಪ್ರಾಕಾರದ ಮೂಲದೇವರಿಗೆ ಮಹಾಭಿಷೇಕ, ಪಟ್ಟಾಭಿಷೇಕ, ಮಹಾಮಂಗಳಾರತಿ, ಅನ್ನ ಸಂತರ್ಪಣೆ. ಸಂಜೆ 7 ಗಂಟೆಗೆ : ಶ್ರೀರಾಮ ದೇವರ ಪಟ್ಟಾಭಿಷೇಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ರಾಮಮಂದಿರದ ಗೌರವ ಅಧ್ಯಕ್ಷರಾದ ಶ್ರೀ ದಕ್ಷಿಣಾಮೂರ್ತಿ (ದತ್ತು) ಮತ್ತು ಗೌರವ ಕಾರ್ಯದರ್ಶಿಗಳಾದ  ಸಿ. ಚಂದ್ರಶೇಖರ್ ಅವರು ವಿನಂತಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top