ವಾಕ್ಚಾತುರ್ಯ ಎಂಬುದು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬಹು ಮುಖ್ಯ: ಹೇಮ ಸುಭಾಷಿಣಿ

Upayuktha
0

 


ಪುತ್ತೂರು: ಭಾಷಾ ಚಾತುರ್ಯತೆ ಎಂಬುದು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬಹುಮುಖ್ಯವಾದ ಅಂಶ ಮತ್ತು ಅತಿಮುಖ್ಯವಾಗಿ  ಮಾತಿನಲ್ಲಿ ಸ್ಪಷ್ಟತೆಯನ್ನು  ಹೊಂದಿರಬೇಕು ಅದರೊಂದಿಗೆ  ವಿದ್ಯಾರ್ಥಿಗಳು ಪ್ರಾಯೋಗಿಕ ಕಲಿಕೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು  ವಿದ್ಯಾರ್ಥಿಗಳಿಗೆ  ಗಣಕಶಾಸ್ತ್ರ ವಿಭಾಗದ ಉಪನ್ಯಾಸಕಿ ಹೇಮ ಸುಭಾಷಿಣಿ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ ಕಲಾ, ವಿಜ್ಞಾನ, ವಾಣಿಜ್ಯ (ಸ್ವಾಯತ್ತ)ದ ಐಕ್ಯೂಎಸಿ ಘಟಕ ಹಾಗೂ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಮಾತನಾಡಿದರು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಯು ಬಹಳ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪ್ರಾಯೋಗಿಕ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಅದಕ್ಕೆ ಈ ಪತ್ರಿಕೆ ತುಂಬಾ ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.


ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಹವ್ಯಶ್ರೀ ಪಾಲ್ತಾಡಿ, ಮಣಿಕರ್ಣಿಕ ಕಾರ್ಯಕ್ರಮದ ಜೊತೆ ಕಾರ್ಯದರ್ಶಿ ಮಂಜುನಾಥ್ ಜೋಡುಕಲ್ಲು ಉಪಸ್ಥಿತರಿದ್ದರು. 


ಕಾರ್ಯಕ್ರಮವನ್ನು ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಅರಹಂತ್ ಜೈನ್ ಸ್ವಾಗತಿಸಿ, ನಮನ್ ಶೆಟ್ಟಿ ವಂದಿಸಿ, ಕೃತಿ ಬಲ್ಯಾಯ ನಿರೂಪಿಸಿದರು.


ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿಗಳು ರೂಪಿಸಿದ ಪ್ರಾಯೋಗಿಕ 'ಇ-ಪತ್ರಿಕೆ' ವಿವೇಕ ವಿಚಾರವನ್ನು ಕಾರ್ಯಕ್ರಮದ ಮುಖ್ಯ ಅತಿಥಿ  ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್  ಬಿಡುಗಡೆಗೊಳಿಸಿದರು.

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top