ಉಡುಪಿ : "ಬಂಟರಿಗೆ ಸೇೂಲಿಸುವ ಶಕ್ತಿಯು ಇದೆ ಗೆಲ್ಲಿಸುವ ಶಕ್ತಿಯೂ ಇದೆ" ಇಂದ್ರಾಳಿ ಜಯಕರ ಶೆಟ್ಟಿ.

Upayuktha
0

ಉಡುಪಿ : ಪ್ರಸ್ತುತ ಅಧಿಕಾರದಲ್ಲಿರುವ ಬಿಜೆಪಿ ಆಡಳಿತ ರೂಢ ಪಕ್ಷಕ್ಕೆ ಬಂಟರ ಸಂಘ ಬಹುಕಾಲದಿಂದ ನಿರಂತರವಾಗಿ ಹಿಂದುಳಿದ ಪ್ರವಗ೯ನ2 ಎಕ್ಕೆಮೀಸಲಾತಿ ದೊರಕಿಸಿಕೊಡ ಬೇಕು ಮತ್ತು ಬಂಟರಿಗೊಂದು ನಿಗಮ ಸ್ಥಾಪಿಸಬೇಕೆಂಬ    ಬಹು ಅಗತ್ಯದ ಎರಡು  ಬೇಡಿಕೆಗಳನ್ನು ಜಾಗತಿಕ ಬಂಟರ ವೇದಿಕೆಯ ಅಧ್ಯಕ್ಷ ಐಕ್ಕಳ ಹರೀಶ್ ಶೆಟ್ಟಿಯವರ ಮೂಲಕ ಹಲವು ಬಾರಿ ಮುಖ್ಯ ಮಂತ್ರಿಗಳನ್ನು ಸಚಿವರು ಗಳನ್ನು ಶಾಸಕರುಗಳನ್ನು ನಿವೇದಿಸಿಕೊಂಡು ಮನವಿ ಸಲ್ಲಿಸಲಾಯಿತು.ಅದಕ್ಕೆ ಸಕಾರಾತ್ಮಕ ಸ್ಪಂದಿಸಿದ ಮುಖ್ಯ ಮಂತ್ರಿಗಳು ಸಚಿವರು ಶಾಸಕರುಗಳು ನಿಮ್ಮ ಬೇಡಿಕೆಗಳನ್ನು ಖಂಡಿತವಾಗಿಯೂ ಪೂರೈಸಿಕೊಡುತ್ತೇವೆ ಅನ್ನುವ ಭರವಸೆಯನ್ನು ನೀಡುತ್ತಾ ಬಂದಿದ್ದರು.ಆದರೆ ಬಜೆಟ್ ಅಧಿವೇಶನ ಕಳೆದು ಚುನಾವಣೆ ಹತ್ತಿರ  ಬಂದರು ಕೂಡಾ ಈ ಕುರಿತಾಗಿ ಗಂಭೀರವಾದ ಮೌನ ವಹಿದಿರುವುದು ಬಂಟರಿಗೆ ಅತೀವ ನೇೂವು ತಂದಿದೆ.


ಬಂಟರು ಅಂದರೆ ಎಲ್ಲರೂ ಶ್ರೀಮಂತರಲ್ಲ.ಸುಮಾರು ಶೇ.90ರಷ್ಟು ಬಂಟರು ಬಡತನ ಮಧ್ಯಮ ವಗ೯ದಲ್ಲಿ ಬಹು ಕಷ್ಟದಿಂದ ಬದುಕುತ್ತಿದ್ದಾರೆ.ಶಿಕ್ಷಣ  ಉದ್ಯೋಗ  ವಸತಿ ಆರೇೂಗ್ಯ  ದೃಷ್ಟಿಯಿಂದ ಸಾಕಷ್ಟು ಸಮಸ್ಯೆಗಳಿವೆ.


ಬಂಟರು ಯಾವತ್ತೂ ತಮ್ಮ ಬೇಡಿಕೆಗಳಿಗಾಗಿ ಸರ್ಕಾರವನ್ನು ಒತ್ತಾಯ ಮಾಡಿದವರಲ್ಲ.ಆದರೆ ನಮ್ಮಮುಂದೆ ಎಲ್ಲರಿಗೂ ಸರ್ಕಾರದ ಸವಲತ್ತುಗಳು ಸಿಗುತ್ತಾ ಇರ ಬೇಕಾದರೆ ನಮ್ಮ ಬಂಟರುಮಾತ್ರ ಕೈ ಕಟ್ಟಿ ಸುಮ್ಮನೆ ಇರಬೇಕಾ? 


ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸರಿ ಸುಮಾರು 30 ಲಕ್ಷಕ್ಕೂ ಮಿಕ್ಕಿ ಬಂಟರ ಜನ ಸಂಖ್ಯೆ  ಇದೆ. ಮಾತ್ರವಲ್ಲ ಅವಿಭಜಿತ ದ.ಕ.ಜಿಲ್ಲೆಯ 13 ವಿಧಾನ ಸಭಾ ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶ ಅಡಿಮೇಲುಮಾಡುವಷ್ಟು ಮತದಾರರು ಇದ್ದಾರೆ.ಬಂಟರ ಸಮಾಜಕ್ಕೆ ಸೇರಿದ ಶಾಸಕರು ಸಂಸದರು ಇದ್ದಾರೆ.ಇವರುಕೂಡಾ ಈ ನಿಟ್ಟಿನಲ್ಲಿ ಹೆಚ್ಚು ಆಸ್ಥೆ ವಹಿಸದೇ ಇರುವುದು ಬಂಟರ ಬೇಗುದಿಗೆ ಕಾರಣವಾಗಿದೆ.ಒಂದು ವೇಳೆ ಆಡಳಿತ  ರೂಢ ಬಿಜೆಪಿ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಹೇೂದರೆ ಮುಂಬರುವ ಚುನಾವಣೆಯಲ್ಲಿ ಇದನ್ನೇ ಪ್ರಮುಖ  ಅಸ್ತ್ರವಾಗಿ ಬಳಸಲು ನಾವು ಹಿಂದೆ ಮುಂದೆ ನೇೂಡುವುದಿಲ್ಲ ಅನ್ನುವ ಎಚ್ಚರಿಕೆಯ ಸಂದೇಶವನ್ನು ಆಡಳಿತ ರೂಢ ಪಕ್ಷಕ್ಕೆ ಉಡುಪಿ  ಬಂಟರ ಸಂಘದ ಗೌರವಾಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ  ಇಂದು ಉಡುಪಿಯಲ್ಲಿ ನಡೆದ ಪತ್ರಿಕಾ ಗೇೂಷ್ಠಿಯಲ್ಲಿ ತಿಳಿದಿದರು.ಉಪಾಧ್ಯಕ್ಷ ಸುರೇಶ್  ಶೆಟ್ಟಿ ; ನಿವೃತ್ತ ರಾಜ್ಯ ಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ಸಂಘದ ಉಪಾಧ್ಯಕ್ಷ ಮೇೂಹನ್ ಶೆಟ್ಟಿ  ಮೂಡ ನಿಡಂಬೂರು ತೇೂನ್ಸೆ ವಲಯದ ಬಂಟರ ಸಂಘದ  ಅಧ್ಯಕ್ಷ ಟಿ.ಮನೇೂಹರ್ ಶೆಟ್ಟಿ ಕೊಡವೂರು ಬಂಟರ ಸಂಘದ ಅಧ್ಯಕ್ಷ  ಶಿವಪ್ರಸಾದ್ ಶೆಟ್ಟಿ  ಬಂಟರ ಸಂಘದ ಪ್ರಧಾನ ಕಾರ್ಯದಶಿ೯ ಅಮಿತ್ ಕುಮಾರ್ ಶೆಟ್ಟಿ   ಕೃಷ್ಣ ಕುಮಾರ್ ಶೆಟ್ಟಿ  ಸಂತೋಷ ಶೆಟ್ಟಿ ಪತ್ರಿಕಾ ಗೇೂಷ್ಠಿಯಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
To Top