ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಇವಿಎಂ, ವಿವಿಪ್ಯಾಟ್‍ಗಳ ಪ್ರದರ್ಶನ

Upayuktha
0


ಪುತ್ತೂರು:
ದೇಶದ ಪ್ರಗತಿಯನ್ನು ನಿರ್ಧರಿಸುವುದು ಮತದಾನವಾಗಿರುತ್ತದೆ. ಆದ್ದರಿಂದ ಮತ ಹಾಕುವುದು ಪ್ರತಿಯೊಬ್ಬರ ಪ್ರಜೆಯ ಕರ್ತವ್ಯ. ಚುನಾವಣೆಯ ಗೆಲುವನ್ನು ನಿರ್ಧರಿಸುವಲ್ಲಿ ಪ್ರತಿಯೊಂದು ಅಭ್ಯರ್ಥಿಯ ಮತದಾನ ಮುಖ್ಯವಾಗಿರುತ್ತದೆ ಎಂದು ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಜಿ ಶ್ರೀಧರ್ ಹೇಳಿದರು.


ಇವರು ಮತದಾರರ ಸಾಕ್ಷರತಾ ಘಟಕ, ತಾಲೂಕು ಕಛೇರಿ ಪುತ್ತೂರು ಹಾಗೂ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಮತದಾನ ಸಾಕ್ಷರತಾ ಸಮಿತಿ, ಪೊಲಿಟಿಕಲ್ ಫಾರಂ, ಎನ್.ಎಸ್.ಎಸ್, ಎನ್ ಸಿ ಸಿ, ರೋವರ್ಸ್‍- ರೇಂಜರ್ಸ್, ಮತ್ತು ರೆಡ್‍ಕ್ರಾಸ್‍ ಇದರ ಸಹಯೋಗದಲ್ಲಿ ಹಮ್ಮಿಕೊಂಡ ಇವಿಎಂ ಮತ್ತು ವಿವಿ ಪ್ಯಾಟ್‍ಗಳ ಭೌತಿಕ ಪ್ರದರ್ಶನ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಅತಿ ಹೆಚ್ಚು ಜನರು ಚುನಾವಣೆ ಮಾಡಬೇಕು ಎನ್ನುವುದು ಚುನಾವಣಾ ಆಯೋಗದ ಅಭಿಲಾ‌‌ಷೆ ಅದಕ್ಕೆ ನಾವೆಲ್ಲ ಕೈ ಜೋಡಿಸಬೇಕು. ಮತದಾನದಲ್ಲಿ ಯುವ ಜನಾಂಗದ ಪಾತ್ರ ಬಹಳ ಮುಖ್ಯವಾಗಿದ್ದು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಚುನಾವಣೆ ಶಾಖೆಯ ಉಪ ತಹಶೀಲ್ದಾರ್ ಸುಲೋಚನ ವಿದ್ಯಾರ್ಥಿಗಳಿಗೆ ಚುನಾವಣೆಯ ಬಗ್ಗೆ ತಿಳಿಸಿ ಇವಿಎಂ ಮತ್ತು ವಿವಿ ಪ್ಯಾಟ್‍ ಕಾರ್ಯ ನಿರ್ವಹಿಸುವುದರ ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಚುನಾವಣಾ ಶಾಖಾ ಸಿಬ್ಬಂದಿ ಬಾಲಕೃಷ್ಣ ಗೌಡ ಮತ್ತು ರಾಧಾಕೃಷ್ಣ ಗೌಡ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್ ಬಿ ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಕವಿತಾ ವಂದಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ವಿಷ್ಣುಕುಮಾರ್ ಎ ಕಾರ್ಯಕ್ರಮವನ್ನು ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top