ಬಾಯಿ ಆರೋಗ್ಯ ನಿರ್ಲಕ್ಷ್ಯ ಸಲ್ಲದು: ಡಾ. ಚೂಂತಾರು

Upayuktha
0

 



ಮಂಗಳೂರು: ವಿಶ್ವ ಬಾಯಿ ಆರೋಗ್ಯ ದಿನ ಇದರ ಅಂಗವಾಗಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ(ರಿ) ಮಂಗಳೂರು ಇದರ ವತಿಯಿಂದ  ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನಾರ್ಲ ಪಡೀಲ್ ತಲಪಾಡಿ ಇಲ್ಲಿ ಇಂದು (ಮಾ.31) ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು. ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಡಾ. ಮುರಲೀ ಮೋಹನ ಚೂಂತಾರು ಇವರು ಮಕ್ಕಳಿಗೆ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. 


ಟೂತ್‍ಬ್ರಷ್, ಟೂತ್ ಪೇಸ್ಟಗಳ ಬಗ್ಗೆ ಮಾಹಿತಿ ನೀಡಿ, ಮಕ್ಕಳು ಹೇಗೆ ಮತ್ತು ಯಾವ ರೀತಿ ಹಲ್ಲು ಉಜ್ಜಬೇಕು ಎಂಬುದರ ಬಗ್ಗೆ ಉಪದೇಶ ನೀಡಿದರು. ಆಹಾರ ಮತ್ತು ಹಲ್ಲಿನ ಆರೋಗ್ಯದ ಬಗ್ಗೆ ವಿಶೇಷ ಮಾಹಿತಿ ನೀಡಿದರು ಸುಂದರ, ಸುದೃಡ ಆರೋಗ್ಯವಂತ ಹಲ್ಲುಗಳು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.  ಬಾಯಿಯೇ ನಮ್ಮ ಆರೋಗ್ಯದ ಹೆಬ್ಬಾಗಿಲು ಮತ್ತು ಬಾಯಿಯ ಆರೋಗ್ಯ ದ ನಿರ್ಲಕ್ಷ ಸಲ್ಲದು ಎಂದು ನುಡಿದರು. 


ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ  ಜಯಂತಿ ಹಾಗೂ ಸಹ ಶಿಕ್ಷಕಿ ಶ್ರೀಮತಿ ಇಂದಿರಾ ಉಪಸ್ಥಿತರಿದ್ದರು. ಸುಮಾರು 50 ಮಕ್ಕಳಿಗೆ ಟೂತ್ ಪೇಸ್ಟ್, ಲೇಖನ ಸಾಮಗ್ರಿ ಮತ್ತು ದಂತ ಆರೋಗ್ಯ ಮಾಹಿತಿ ಕರಪತ್ರ ಹಂಚಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top