ಹ್ಯಾಕೋವರ್ ಫ್ಲೋ 1.0 ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ ನಿಟ್ಟೆ ತಂಡಕ್ಕೆ ಪ್ರಥಮ ಬಹುಮಾನ

Upayuktha
0

ನಿಟ್ಟೆ: ಇತ್ತೀಚೆಗೆ ನವಿಮುಂಬಯಿಯ ಪಿ.ಎಚ್.ಸಿ.ಇ.ಟಿ ಕಾಲೇಜಿನಲ್ಲಿ ನಡೆದ ಹ್ಯಾಕೋವರ್ ಫ್ಲೋ 1.0 ಎಂಬ 3 ದಿನಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 'ಟಿ 3 ಟ್ರೈಬ್' ಎಂಬ ತಂಡವು ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಈ 'ಟಿ 3 ಟ್ರೈಬ್' ತಂಡವನ್ನು ಕಾಲೇಜಿನ ವಿದ್ಯಾರ್ಥಿಗಳಾದ ಸ್ವಸ್ತಿಕ್ ಶೆಟ್ಟಿ, ನಾಗರಾಜ್ ಪಂಡಿತ್ ಮತ್ತು ತನಿಶ್ಕಾ ರಾವ್ ಪ್ರತಿನಿಧಿಸಿದ್ದರು. ಈ ತಂಡಕ್ಕೆ ಪ್ರಶಸ್ತಿಯೊಂದಿಗೆ ರೂ.30,000/- ನಗದು ಬಹುಮಾನ ಲಭಿಸಿದೆ.


ದೇಶದ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ 66 ತಂಡಗಳ ಪೈಕಿ 22 ತಂಡಗಳನ್ನು ಕೊನೆಯ ಸುತ್ತಿನ ಪ್ರೆಸೆಂಟೇಶnffಗೆ ಆಯ್ಕೆ ಮಾಡಲಾಗಿತ್ತು. ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದ ತಂಡಗಳ ಪೈಕಿ ನಿಟ್ಟೆ ತಾಂತ್ರಿಕ ಕಾಲೇಜಿನದ್ದೇ 3 ತಂಡಗಳು ಇದ್ದವು ಎನ್ನುವುದು ನಿಟ್ಟೆ ಕಾಲೇಜಿಗೆ ಹೆಮ್ಮೆಯ ವಿಚಾರವಾಗಿದೆ. ಈ ತಂಡಗಳು ಕಾಲೇಜಿನ ಫೈನೈಟ್ ಲೂಪ್ ಕ್ಲಬ್ ನ ಮಾರ್ಗದರ್ಶನದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top