ಉರ್ವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಗೆ ಬೆಳ್ತಂಗಡಿ ಎಲ್‌ಐಸಿಯಿಂದ ಶಾಲಾ ಬಸ್ ಕೊಡುಗೆ

Upayuktha
0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದ ಉರ್ವಾಲಿನಲ್ಲಿರುವ ಶ್ರೀ ಭಾರತೀ ವಿದ್ಯಾ ಸಂಸ್ಥೆಗೆ ಎಲ್‌ಐಸಿ ತನ್ನ ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ ಶಾಲಾ ಬಸ್ಸನ್ನು ಇಂದು ಕೊಡುಗೆಯಾಗಿ ನೀಡಿದೆ.


ಎಲ್‌ಐಸಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ರಾಜೇಶ್ ಮುಧೋಳ್ ಅವರು ಶಾಲಾ ವಾಹನದ ಕೀಯನ್ನು ವಿದ್ಯಾ ಸಂಸ್ಥೆ ಅಧ್ಯಕ್ಷ ದಿವಾಕರ ಶಾಸ್ತ್ರೀಯವರಿಗೆ ಹಸ್ತಾಂತರಿಸಿ ಮಾತಾಡುತ್ತಾ, ನಿಗಮದ ವಿವಿಧ ವಿಮಾ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.


ಮಾರುಕಟ್ಟೆ ಅಧಿಕಾರಿ ರಮೇಶ್ ಭಟ್ ಮಾತಾಡುತ್ತಾ, ಎಲ್‌ಐಸಿಯ ವಿವಿಧ ಸೇವಾ ಕಾರ್ಯಗಳನ್ನು ವಿವರಿಸಿದರಲ್ಲದೆ ವಿಮಾ ಗ್ರಾಮ, ವಿಮಾ ಶಾಲೆ, ಸ್ಕಾಲರ್ಶಿಪ್ ಪ್ರಯೋಜನ ಪಡೆಯುವಂತೆ ಪೋಷಕರಿಗೆ ಮನವಿ ಮಾಡಿದರು.


ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿಗಳಾದ ರಾಜೇಶ್ ಮುಧೋಳ್, ಎಂ.ಎಂ ರಮೇಶ್ ಭಟ್ (ಮ್ಯಾನೇಜರ್ ಸೇಲ್ಸ್), ಸದಾಶಿವ ಭಟ್, (ಬಂಟ್ವಾಳ ಚೀಫ್ ಮ್ಯಾನೇಜರ್), ನಾರಾಯಣ ಗೌಡ, ಉಡುಪಿ ವಿಭಾಗದ ಮ್ಯಾನೇಜರ್ (ಕ್ಲೈಮ್ಸ್), ಆರ್. ಎಸ್. ಸಾಮಗ- ಬೆಳ್ತಂಗಡಿ ಶಾಖಾಧಿಕಾರಿ ವಿ.ಎಸ್ ಕುಮಾರ್, ಬೆಳ್ತಂಗಡಿ ಎಲ್‌ಐಸಿ ಅಭಿವೃದ್ಧಿ ಅಧಿಕಾರಿಗಳಾದ ಎಂ.ವಿ ಶೆಟ್ಟಿ, ರಾಘವೇಂದ್ರ ಟಿ.ಡಿ, ಉದಯಶಂಕರ್ ಭಾಗವಹಿಸಿದ್ದರು.


ರಾಮಚಂದ್ರಾಪುರ ಮಠದ ಆಡಳಿತ ಖಂಡ ಸಂಚಾಲಕ ನಾರಾಯಣ ಭಟ್ ಹಾರಕೆರೆ, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ದಿವಾಕರ ಶಾಸ್ತ್ರೀ, ಕಾರ್ಯದರ್ಶಿ ಪ್ರೊ. ಗಣಪತಿ ಭಟ್ ಕುಳಮರ್ವ, ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಿತಾ ಕೆ ಆರ್, ಶಾಲಾ ಪೋಷಕರು ಉಪಸ್ಥಿತರಿದ್ದರು.


ಶಾಲಾ ಕಾರ್ಯದರ್ಶಿ ಪ್ರೊ. ಗಣಪತಿ ಭಟ್ ಕುಳಮರ್ವ ಸ್ವಾಗತಿಸಿದರು. ಅಧ್ಯಾಪಿಕೆ ಹರ್ಷಿತಾ ಧನ್ಯವಾದ ಸಮರ್ಪಿಸಿದರು. ಅಧ್ಯಾಪಿಕೆ ದಿವ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top