ಪುತ್ತೂರು : ಜೀವನದಲ್ಲಿ ಮಾನಸಿಕ ಹಾಗೂ ದೈಹಿಕ ದೃಢತೆಯನ್ನು ಸಾಧಿಸಲು ಈಜು ಅಥವಾ ಇನ್ನಿತರ ಕ್ರೀಡಾ ಚಟುವಟಿಕೆಗಳು ತುಂಬಾ ಸಹಕಾರಿಯಾಗುತ್ತವೆ ಎಂದು ಪ್ರಖ್ಯಾತ ಈಜು ಪಟು, ಈಜು ತರಬೇತುದಾರ ಹಾಗೂ ಸರ್ಫ್ ಲೈವ್ ಸೇವಿಂಗ್ ಇಂಡಿಯಾದ ನಿರ್ದೇಶಕ ಪಾರ್ಥ ವಾರಣಾಸಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು. ನರಗಳ ಪುನಶ್ಚೇತನದ ಮೂಲಕ ಜೀವ ಉಳಿಸುವ ಕೌಶಲ್ಯ ಎನ್ನುವ ವಿಷಯದ ಬಗ್ಗೆ ಮಾತನಾಡಿದ ಇವರು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹೆಚ್ಚಿಸಲು ಅಗತ್ಯವಾದ ವಿವಿಧ ವೈಜ್ಞಾನಿಕವಾದ ಚಟುವಟಿಕೆಗಳನ್ನು ತಿಳಿಸಿದರು. ಸಕಾಲದಲ್ಲಿ ನೀಡುವ ಪ್ರಥಮ ಚಿಕಿತ್ಸೆಗಳು ವ್ಯಕ್ತಿಯೊಬ್ಬನ ಜೀವವನ್ನೇ ಉಳಿಸಬಲ್ಲದು ಇದನ್ನು ಎಲ್ಲರೂ ತಿಳಿದುಕೊಳ್ಳುವುದ ಆವಶ್ಯಕ ಎಂದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ರೋಹಿತ್ ಪ್ರಕಾಶ್ ಅವರು ಜಾಗತಿಕ ಸ್ವಾಸ್ಥ್ಯಕ್ಕಾಗಿ ವಿಜ್ಞಾನದ ಮಹತ್ವವನ್ನು ಸಾಬೀತುಪಡಿಸುವ ಚಟುವಟಿಕೆಗಳನ್ನು ಪ್ರದರ್ಶಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ ಮಾತನಾಡಿ ಪ್ರತಿಯೊಂದು ವಿಷಯದ ಬಗ್ಗೆಯೂ ಅದು ಯಾಕೆ, ಏನು, ಹೇಗೆ ಎನ್ನುವ ಬಗ್ಗೆ ಪ್ರಶ್ನೆ ಗಳನ್ನು ಹಾಕುತ್ತಾ ಹೋದಾಗ ವಿಷಯದ ಬಗ್ಗೆ ತಿಳುವಳಿಕೆ ದೊರಕುವ ಜತೆಯಲ್ಲಿ ಮೆದುಳಿನ ಬೆಳವಣಿಗೆಗೂ ಸಹಕಾರಿಯಾಗುತ್ತದೆ ಎಂದರು. ಸಮಾಜದ ಉನ್ನತಿಗಾಗಿ ವಿಜ್ಞಾನವನ್ನು ಬಳಸಿಕೊಂಡು ದೇಶದ ಪ್ರಜ್ಞಾವಂತ ನಾಗರಿಕರಾಗುವಂತೆ ಕರೆ ನೀಡಿದರು.
ಮೂಲ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ರಮಾನಂದ ಕಾಮತ್ ಹಾಗೂ ಕಾರ್ಯಕ್ರಮ ಸಂಯೋಜಕಿ ಡಾ.ಶ್ವೇತಾಂಬಿಕಾ.ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಮಹೇಶ್ ಪ್ರಸ್ತಾವನೆಗೈದರು. ಮೇಘನಾ ಅತಿಥಿಗಳನ್ನು ಪರಿಚಯಿಸಿದರು. ನಿಶಿತಾ ಸ್ವಾಗತಿಸಿ, ತೇಜಸ್ವಿ ವಂದಿಸಿದರು. ವೈಷ್ಣವಿ.ಎಮ್.ಎಸ್ ಮತ್ತು ಸನ್ಮಿತ್ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ