ನಾಸಾ ಪಾರ್ಟಿಕಲ್ ಪಾರ್ಟಿಶನ್ ಚಾಲೆಂಜ್: ನಾಲ್ಕನೇ ಸ್ಥಾನ ಗಳಿಸಿದ ಆಳ್ವಾಸ್ ವಿದ್ಯಾರ್ಥಿನಿ

Upayuktha
0

ಮೂಡುಬಿದಿರೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ `ನಾಸಾ ಪಾರ್ಟಿಕಲ್ ಪಾರ್ಟಿಶನ್ ಚಾಲೆಂಜ್'ನಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ ಪ್ರಕೃತಿ ಹಾಗೂ ಅವರ ತಂಡ ನಾಲ್ಕನೇ ಸ್ಥಾನ ಗಳಿಸಿದೆ. 


2022ನೇ ಅಕ್ಟೋಬರ್‍ನಲ್ಲಿ ಆರಂಭಗೊಂಡ ಈ ಚಾಲೆಂಜ್‍ನಲ್ಲಿ ಪ್ರಪಂಚದಾದ್ಯಂತ ಸುಮಾರು 640 ತಂಡಗಳು ಭಾಗವಹಿಸಿದ್ದು, ಪ್ರಕೃತಿ ಅವರು ಏರೋಸ್ಪೇಸ್ ವಿಷಯದಲ್ಲಿ 3 ಚಾಲೆಂಜ್‍ಗಳನ್ನು ಪೂರ್ಣಗೊಳಿಸಿ ಈ ಸ್ಥಾನನ್ನು ಗಳಿಸಿದ್ದಾರೆ. ಒಟ್ಟು 2500 ಡಾಲರ್ ಬಹುಮಾನ ಪಡೆದುಕೊಂಡಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ವಿದ್ಯಾರ್ಥಿನಿಗೆ ನಾಸಾ ಸಂಸ್ಥೆಯಲ್ಲಿ ಇಂಟರ್ನ್‍ಶಿಪ್ ಪಡೆದುಕೊಳ್ಳಲು ಅವಕಾಶವಿದೆ. ವಿದ್ಯಾರ್ಥಿನಿಯ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ,  ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಅಭಿನಂದಿಸಿದ್ದಾರೆ.   


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top