|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪ್ರತಿದಿನವೂ ಪರಿಸರ ಸ್ನೇಹಿಯಾಗಿ ಬದುಕೋಣ: ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ

ಪ್ರತಿದಿನವೂ ಪರಿಸರ ಸ್ನೇಹಿಯಾಗಿ ಬದುಕೋಣ: ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ

 


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ  ಭೂಗೋಳಶಾಸ್ತ್ರ ವಿಭಾಗ ಮತ್ತು ಮಂಗಳ ಯೋಜನೆ –ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮದಡಿಯಲ್ಲಿ ವಿಶ್ವವಿದ್ಯಾನಿಲಯದ ಭೂಗೋಳಶಾಸ್ತ್ರ ವಿಭಾಗದಲ್ಲಿ ಮಂಗಳವಾರ "ಅಂತಾರಾಷ್ಟ್ರೀಯ ಅರಣ್ಯ ದಿನ" ಮತ್ತು "ವಿಶ್ವ ಜಲ ದಿನಾಚರಣೆ” ಆಯೋಜಿಸಲಾಗಿತ್ತು.  


ಮುಖ್ಯ ಅತಿಥಿಯಾಗಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಕೆ.ಸಿ.ಡಿ.ಸಿ.    ನಿಗಮ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಎಸ್. ನೆಟಲ್‍ಕರ್  ತಮ್ಮ ದಿಕ್ಸೂಚಿ ಭಾಷಣದಲ್ಲಿ, ಪ್ರಪಂಚದಾದ್ಯಂತ  1.6 ಶತ ಕೋಟಿಗೂ ಹೆಚ್ಚು ಜನರು ಉಸಿರು, ಆಹಾರ ಅಥವಾ ಬದುಕಿಗಾಗಿ  ಅರಣ್ಯಗಳನ್ನೇ   ಅವಲಂಬಿಸಿದ್ದಾರೆ. ಅರಣ್ಯಗಳು  ಮಣ್ಣಿನ  ಸವೆತವನ್ನು ತಡೆಗಟ್ಟಲು,  ಮಣ್ಣನ್ನು ಸಮೃದ್ಧಗೊಳಿಸಲು ಮತ್ತು ಸಂರಕ್ಷಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ.  ಭೂಕುಸಿತಗಳು ಮತ್ತು ಪ್ರವಾಹಗಳಿಂದ ಸಮುದಾಯಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಜಾಗತಿಕ ಜಲಚಕ್ರದಲ್ಲಿ ಅರಣ್ಯಗಳು ಪ್ರಮುಖ ಪಾತ್ರವಹಿಸುತ್ತವೆ. ಕಾಡುಗಳ ನಾಶವು ಹವಾಗುಣ ಬದಲಾವಣೆ, ಕೃಷಿಯ ಮೇಲೂ ಪರಿಣಾಮ ಬೀರುತ್ತದೆ. ಅರಣ್ಯ ಸಂರಕ್ಷಣೆಯ ಜೊತೆಗೆ ಅರಣ್ಯೀಕರಣ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸುವುದು ತುರ್ತು ಅಗತ್ಯ' ಎಂದರು. 


ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ  ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ,  ವಿಶ್ವ ಜಲ ದಿನ,  ಅಂತಾರಾಷ್ಟ್ರೀಯ ಅರಣ್ಯ ದಿನ ಅಥವಾ ಇನ್ನಿತರ ಯಾವುದೇ ಪರಿಸರ ಸಂರಕ್ಷಣಾ ದಿನಾಚರಣೆಗಳನ್ನು ಕೇವಲ ಆಯಾಯ ದಿನಗಳಿಗೆ ಮಾತ್ರ ಸೀಮಿತಗೊಳಿಸದೇ  ಪ್ರತಿದಿನವು ನಾವು   ಪರಿಸರ ಸ್ನೇಹಿಯಾಗಿ ಬದುಕಬೇಕು. ‘ಬದಲಾವಣೆಯನ್ನು ವೇಗಗೊಳಿಸುವುದು’  ಎಂಬ ಕೇಂದ್ರ  ವಿಷಯದೊಂದಿಗೆ 2023ರ ವಿಶ್ವ ಜಲ ದಿನವನ್ನು  ಆಚರಿಸಲಾಗುತ್ತಿದೆ. ಖಂಡಿತವಾಗಿಯೂ, ನೀರಿನ ಸಂರಕ್ಷಣೆಯ ಕಾರ್ಯತಂತ್ರಗಳನ್ನು  ಇನ್ನಷ್ಟೂ ವೇಗಗೊಳಿಸುವ ಅವಶ್ಯಕತೆಯಿದೆ. ವೈಯಕ್ತಿಕ, ಸಂಘಟನೆ, ಮತ್ತು ಸರ್ಕಾರ ಮಟ್ಟದಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ, ಎಂದರು. 


ಮಂಗಳಾ ಯೋಜನೆಯ ಸಂಯೋಜಕ ಪ್ರೊ. ಪ್ರಶಾಂತ ನಾಯ್ಕ ಅವರು ಪ್ರಾಸ್ತಾವಿಕ ಭಾಷಣದಲ್ಲಿ, ಪರಿಸರ ಮಾಲಿನ್ಯದಿಂದ ಕ್ಯಾನ್ಸರ್ ಮತ್ತು  ಉಸಿರಾಟ-ಸಮಸ್ಯೆಗೆ ಬಲಿಯಾಗುತ್ತಿರುವವರ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ. ಇಷ್ಟು ಮಾತ್ರವಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಉಂಟಾಗುತ್ತಿರುವ ಅಕಾಲಿಕ ಮಳೆ, ನೆರೆ, ಕ್ಷಾಮ, ಸಮುದ್ರ ಕೊರೆತ, ಬರಗಾಲದಂತಹ ದುಸ್ಥಿತಿಗಳಿಂದ ಅನೇಕ ಕಷ್ಟನಷ್ಟ, ಸಾವು ನೋವುಗಳನ್ನು ಅನುಭವಿಸುತ್ತಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಪರಿಸರದ ನೈರ್ಮಲ್ಯವನ್ನು ಕಾಪಾಡಲು ಮತ್ತು ಸಂರಕ್ಷಿಸಲು ಕಾರ್ಯಪ್ರವೃತ್ತರಾಗುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ, ಎಂದರು. 


ಕಾರ್ಯಕ್ರಮದ ಅಂಗವಾಗಿ  ಕ್ಯಾಂಪಸ್‌ನಲ್ಲಿ  ಪಕ್ಷಿಗಳಿಗೆ ನೀರಿನ ಬಟ್ಟಲುಗಳನ್ನು ಇಡಲಾಯಿತು.  ಸಾರ್ವಜನಿಕರು  ಮತ್ತು ವಿದ್ಯಾರ್ಥಿಗಳಿಗೆ  ಹಣ್ಣು ಹಂಪಲು  ನೀಡುವ ಗಿಡಗಳನ್ನು ವಿತರಿಸಲಾಯಿತು. ಅರಣ್ಯ ಮತ್ತು ನೀರಿನ ಸಂರಕ್ಷಣೆಯಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳ ಕೈಪಿಡಿಯನ್ನು ಬಿಡುಗಡೆಮಾಡಲಾಯಿತು. ಸಸಿಗಳನ್ನು ನೆಡಲಾಯಿತು. 


ಭೂಗೋಳಸಾಸ್ತ್ರ ವಿಭಾಗದ ಸಂಯೋಜಕ ಪ್ರೊ. ದಶರಥ ಪಿ.ಅಂಗಡಿ ಅವರು ಸ್ವಾಗತಿಸಿ ವಿಶ್ವ ಜಲ ದಿನ ಮತ್ತು  ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆಯ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ಹೇಳಿದರು. 


ಪೂಜಿತ್‌ಕುಮಾರ್ ಡಿ.ಪಿ. ಅವರು ವಂದನಾರ್ಪಣೆ ಗೈದರು.  ಡಾ.ಅನುಶ್ರೀ ಎಂ ಮತ್ತು ಡಾ.ಲವೀನಾ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post