ಮೈಸೂರು ಉತ್ತರಾದಿ ಮಠ: ಮಾ. 20 ರಿಂದ ಶ್ರೀ ಸತ್ಯಸಂತುಷ್ಟ ತೀರ್ಥರ ಆರಾಧನಾ ಮಹೋತ್ಸವ

Upayuktha
0

ಮೈಸೂರು: ಅಗ್ರಹಾರದ ಉತ್ತರಾದಿ ಮಠದ ಶ್ರೀ ಧನ್ವಂತರಿ ಸನ್ನಿಧಾನದಲ್ಲಿ ಶ್ರೀಸತ್ಯ ಸಂತುಷ್ಟ ತೀರ್ಥರ ಆರಾಧನಾ ಮಹೋತ್ಸವದ ಅಂಗವಾಗಿ ಮಾ. 20 ರಿಂದ 22 ರವರೆಗೆ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.


ಮಾ. 20ರ ಬೆಳಗ್ಗೆ 7 ಕ್ಕೆ ಧಾನ್ಯಪೂಜೆ ಮತ್ತು  ಗೋಪೂಜೆಯೊಂದಿಗೆ ಮಹೋತ್ಸವಕ್ಕೆ ಚಾಲನೆ ದೊರಕಲಿದೆ. ಬೆಳಗ್ಗೆ 8ಕ್ಕೆ 108 ಭಕ್ತರಿಂದ 108 ಬಾರಿ ಗುರುಗಳ ಸ್ತೋತ್ರ ಪಾರಾಯಣ, ಶ್ರೀಸೂಕ್ತ ಹೋಮ, ವಿದ್ವಾಂಸರಿಂದ ವಿಶೇಷ ಪ್ರವಚನ, 11.30ಕ್ಕೆ ಗುರುಗಳ ಪಾದುಕೆಗಳ ರಜತ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 6.30ಕ್ಕೆ ಪಂಡಿತ ಫಣೀಂದ್ರಾಚಾರ್ಯ ಮಲಪನಗುಡಿ ಅವರಿಂದ ಅಖಲ ಭಾರತ ಮಟ್ಟದ ಭಗವದ್ಗೀತೆ ಪ್ರವಚನ ಅಭಿಯಾನ ಉಪನ್ಯಾಸ 4 ನೇ ಸರಣಿ ಮಂಗಳ ಮಹೋತ್ಸವವಿದೆ.


ಮಾ. 21ರಂದು ಮಧ್ಯಾರಾಧನೆ ಅಂಗವಾಗಿ ಬೆಳಗ್ಗೆ 8.30ಕ್ಕೆ ಶ್ರೀಸತ್ಯಸಂತುಷ್ಟ ತೀರ್ಥರ ಮೂಲ ವೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ, ಲಕ್ಷ ಪುಷ್ಪಾರ್ಚನೆ, ವಿಶೇಷ ಪೂಜೆ, 10ಕ್ಕೆ ಗಣಹೋಮ, ರಜತ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಸಾವಿರಾರು ಭಕ್ತರು ಸಂಗಮಿಸಲಿದ್ದಾರೆ. ಸಂಜೆ 6ಕ್ಕೆ ವಿವಿಧ ವಿದ್ವಾಂಸರಿಂದ ದಾಸವಾಣಿ ಆಯೋಜನೆಗೊಂಡಿದೆ.


ಮಾ. 22 ರಂದು ಯುಗಾದಿ ಮತ್ತು ಉತ್ತರಾರಾಧನೆ ನಿಮಿತ್ತ ಬೆಳಗ್ಗೆ 5.30ಕ್ಕೆ ಗುರುಗಳ ವೃಂದಾವನಕ್ಕೆ ತೈಲ ಸಮರ್ಪಣೆ, ಅಭ್ಯಂಗ ಸೇವೆ, 9.30ಕ್ಕೆ ಚೈತ್ರ ಮಾಸದ ಪರ್ವಕಾಲದ ಸಂದರ್ಭ ಮನ್ಯುಸೂಕ್ತ ಪುನಶ್ಚರಣ ಹೋಮ, ಯುಗಾದಿ ಮಹತ್ವ ಕುರಿತು ಪಂಡಿತರಿಂದ ಪ್ರವಚನ, 11.30ಕ್ಕೆ ರಥೋತ್ಸವ ಸಂಪನ್ನಗೊಳ್ಳಲಿದೆ. ಸಂಜೆ 6.30ಕ್ಕೆ ಪಂಚಾಂಗ ಶ್ರವಣ, ಸ್ವಸ್ತಿವಾಚನ ಹಮ್ಮಿಕೊಳ್ಳಲಾಗಿದೆ ಎಂದು ಮಠದ ವ್ಯವಸ್ಥಾಪಕ ವಿದ್ವಾನ್ ಅನಿರುದ್ಧಾಚಾರ್ಯ ಪಾಂಡುರಂಗಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top