ಜೆಸಿಐನಿಂದ ಮಹಿಳೆಯರಿಗೆ ಮಿನಿ ಮ್ಯಾರಥ್ಯಾನ್

Upayuktha
0

ಮಂಗಳೂರು: ಜೆಸಿಐ ಮಂಗಳಗಂಗೋತ್ರಿ ಕೊಣಾಜೆ, ವಲಯ 15 ವತಿಯಿಂದ ಇತ್ತೀಚೆಗೆ ಬೆಲ್ಮೋತ್ಸವ, ಬೆಲ್ಮ ಇವರ ಸಹಯೋಗದಲ್ಲಿ ಮಹಿಳೆಯರಿಗೆ ಮಿನಿ ಮ್ಯಾರಥ್ಯಾನ್ ಏರ್ಪಡಿಸಲಾಗಿತ್ತು. ಮ್ಯಾರಥ್ಯಾನ್ ಓಟವನ್ನು ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚಂಚಲಾಕ್ಷ್ಮಿ ಉದ್ಘಾಟಿಸಿ ಶುಭಾಶಯ ಕೋರಿದರು.


ಕರ್ನಾಟಕ ರಾಜ್ಯ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೋಟ್ಟು ಕ್ರೀಡಾಕೂಟ ಭಾಗವಸಿ ಜೆಸಿಐ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ಬೆಲ್ಮ ಉತ್ಸವದ ಆಯೋಜಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಅಧ್ಯಕ್ಷ ಜೆಸಿ ಡಾ. ನರಸಿಂಹಯ್ಯ ಎನ್, ಕಾರ್ಯದರ್ಶಿ ಜೆಸಿ ಆರೀಫ್ ಕಲ್ಕಟ, ಜೆಸಿಐ ಸ್ಥಾಪಕ ಅಧ್ಯಕ್ಷ ತ್ಯಾಗಮ ಹರೇಕಳ, ಜೆಸಿ ಮೋಹನ್ ಶೀರ್ಲಾಲ್ ಭಾಗವಹಿಸಿ ಕಾರ್ಯಕ್ರಮ ನಿರ್ವಹಿಸಿದರು. ಜೆಸಿಐ ಎಲ್ಲಾ ಸದಸ್ಯರು ಭಾಗವಸಿದ್ದರು. ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top