ಅಂಬಿಕಾದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ಕೋಚಿಂಗ್

Upayuktha
0


ಪುತ್ತೂರು :
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿನ ಅಂಬಿಕಾ ವಿದ್ಯಾಲಯದ ಆಶ್ರಯದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗಾಗಿ ರಜಾ ಅವಧಿಯ ವಿಶೇಷ ತರಬೇತಿ ತರಗತಿಗಳು ಎಪ್ರಿಲ್ 3ರಿಂದ ಆರಂಭಗೊಳ್ಳಲಿವೆ. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಒಂಬತ್ತನೆಯ ತರಗತಿಯನ್ನು ಪೂರೈಸಿದ ವಿದ್ಯಾಥಿಗಳಿಗೆ ಈ ವಿಶೇಷ ತರಬೇತಿ ತರಗತಿಗಳಿಗೆ ಹಾಜರಾಗುವುದಕ್ಕೆ ಅವಕಾಶವಿದೆ. ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ತರಬೇತಿ ತರಗತಿಗಳು ನಡೆಯಲಿವೆ.

ಒಂಬತ್ತನೆಯ ತರಗತಿಯ ಪರೀಕ್ಷೆಗಳು ಮುಗಿದಿದ್ದು ಹೆಚ್ಚಿನ ವಿದಾರ್ಥಿಗಳು ಅತಿಯಾದ ಮೊಬೈಲ್, ಟಿವಿ ಬಳಕೆಯಿಂದಾಗಿ ಓದಿನ ವಾತಾವರಣದಿಂದ ದೂರ ಸರಿಯುತ್ತಿದ್ದಾರೆ ಎಂಬ ಕೂಗು ಹೆತ್ತವರಿಂದ ಕೇಳಿಬರುತ್ತಿದೆ. ಕೊರೋನಾ ಕಾಲದಲ್ಲಿ ಅನಿವಾರ್ಯವಾಗಿ ಮೊಬೈಲ್ ಮೊರೆ ಹೋಗಿದ್ದ ವಿದ್ಯಾಥಿಗಳಲ್ಲಿ ಹೆಚ್ಚಿನವರು ಈಗ ಮೊಬೈಲ್ ಬಳಕೆಯನ್ನು ಚಟವಾಗಿ ಬೆಳೆಸಿಕೊಂಡಿರುವುದು ಹೆತ್ತವರ ಆತಂಕವನ್ನು ಹೆಚ್ಚಿಸಿದೆ. ಜತೆಗೆ ಹತ್ತನೆಯ ತರಗತಿ ಎಂಬುದು ವಿದ್ಯಾರ್ಥಿಗಳ ಬದುಕಿನಲ್ಲಿ ಅತಿ ಮುಖ್ಯ ಘಟ್ಟವಾಗಿರುವುದರಿಂದ ರಜಾ ಅವಧಿಯಲ್ಲಿನ ತರಗತಿಗಳು ಅತ್ಯಂತ ಪ್ರಾಮುಖ್ಯ ಎನಿಸಿವೆ.

ಹತ್ತನೆಯ ತರಗತಿ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗಳಲ್ಲಿ ಅನೇಕರಿಗೆ ಗಣಿತ ಹಾಗೂ ವಿಜ್ಞಾನ ಕಬ್ಬಿಣದ ಕಡಲೆಯಂತಾಗುತ್ತಿದ್ದು, ಈ ನೆಲೆಯಲ್ಲಿ ಶಾಲಾ ಆರಂಭಕ್ಕೂ ಪೂರ್ವದಲ್ಲಿ ತರಗತಿ, ತರಬೇತಿಗಳು ನಡೆದಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ. ಹೆಚ್ಚಿನ ಮಾಹಿತಿಗಾಗಿ : 08251 233488, 298188, 9071655688 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ





Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top