ಮಂಗಳೂರು: ಕಲೆಯ ತುಡಿತ ಇದ್ದವ ಮಾತ್ರ ಶ್ರೇಷ್ಠ ಕಲಾವಿದನಾಗಿ ಬೆಳೆಯಬಲ್ಲ. ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಆರೋಗ್ಯಕರ ಸಮಾಜ ನಿರ್ಮಾಣದ ಕನಸು ಹೊತ್ತ ಕಲಾಭಿಯ ಈ ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯ ಎಂದು ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಹೇಳಿದರು.
ಅವರು ನಗರದ ಕ್ರಿಯಾಶೀಲ ಸಂಸ್ಥೆ ಕಲಾಭಿ(ರಿ.) ಮಂಗಳೂರು, ಕಲಾಭಿ ಥಿಯೇಟರ್ ಆಶ್ರಯದಲ್ಲಿ ಹಮ್ಮಿಕೊಂಡ' ಎ ಪಪೆಟ್ ಜರ್ನಿ' ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನೀನಾಸಂ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ನುಡಿದಂತೆ ‘ಪ್ರತಿಯೊಬ್ಬನೂ ಮೊದಲು ತಾನಿದ್ದ ಜಾಗದಿಂದಲೇ ತನ್ನ ರಂಗಕಾಯಕವನ್ನು ಆರಂಭಿಸಬೇಕು ಎಂದರು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕರಾದ ಭರತ್ ಶೆಟ್ಟಿ ಶುಭ ಹಾರೈಸಿದರು. ಕಲಾಭಿಯ ಅಧ್ಯಕ್ಷ ಸುರೇಶ್ ಬಿ. ಸ್ವಾಗತಿಸಿದರು.
ದೇವಿ ದಯಾಲ್ ಅರ್ಥ್ ಮೂವರ್ಸ್ ಮಾಲಕರಾದ ಜಗದೀಶ್ ಶೆಟ್ಟಿ, ಕಲಾ ಪೋಷಕ ಉಮೇಶ್, ಕಲಾಭಿ ಉಪಾಧ್ಯಕ್ಷ ಸುಮನ್ ಕದ್ರಿ, ಪಪೆಟ್ ಕಾರ್ಯಾಗಾರದ ನಿರ್ದೇಶಕ ಶ್ರವಣ್ ಹೆಗ್ಗೋಡು, ಕಳರಿ ಪಟು ಗಣೇಶ್ ಕೆ.ವಿ., ಕಾರ್ಯದರ್ಶಿ ಉಜ್ವಲ್ ಯು.ವಿ. ಉಪಸ್ಥಿತರಿದ್ದರು.
ಇದೇ ಸಂದರ್ಭ ಕಳರಿ ಪಯಟ್ ಮೂಲ ಪಟ್ಟುಗಳ ಕಾರ್ಯಾಗಾರಕ್ಕೂ ಚಾಲನೆ ನೀಡಲಾಯಿತು. ಕಾರ್ಯಾಗಾರವು ಪೂ. 5.00 ಗಂಟೆಯಿಂದ ರಾತ್ರಿ 9.00ರ ವರೆಗೆ ನಡೆದು ಮಾ. 29ಕ್ಕೆ ಸಮಾರೋಪಗೊಳ್ಳಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ