ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 21ನೇ ಪದವು ಪಶ್ಚಿಮ ವಾರ್ಡಿನ ನಾಲ್ಯಪದವು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 8 ಕೊಠಡಿಗಳು ಮತ್ತು ಸರಕಾರಿ ಪ್ರೌಢ ಶಾಲೆಯಲ್ಲಿ 2 ಕೊಠಡಿಗಳು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಕೊಠಡಿಗಳು ಸೇರಿದಂತೆ ಒಟ್ಟು 12 ಕೊಠಡಿಗಳ ನಿರ್ಮಾಣಕ್ಕೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಶಿಲಾನ್ಯಾಸ ನೆರವೇರಿಸಿದರು.
ಒಟ್ಟಾರೆ 2.60 ಕೋಟಿ ರೂ ವೆಚ್ಚದಲ್ಲಿ ನಾನಾ ಕಾಮಗಾರಿಗಳು ನಡೆಯಲಿದ್ದು, ಅವುಗಳಿಗೆ ಶಾಸಕರು ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ 21ನೇ ಪದವು ಪಶ್ಚಿಮ ವಾರ್ಡಿನ ದತ್ತನಗರ ರಸ್ತೆ ಅಭಿವೃದ್ಧಿ, ಪೂರ್ವ ವಾರ್ಡಿನ ಪಾರ್ಕ್ ಅಭಿವೃದ್ಧಿ, ಪಶ್ಚಿಮ ವಾರ್ಡಿನ ಸೌಜನ್ಯ ರಸ್ತೆಯಿಂದ ಯೆಯ್ಯಾಡಿ ರಸ್ತೆ ತನಕ ರಸ್ತೆ ಅಭಿವೃದ್ಧಿ, ಕುಂಟಲ್ಪಾಡಿ ಮುಂದುವರಿದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೂ ಶಾಸಕರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ತಮ್ಮ ದೈನಂದಿನ ಕಾರ್ಯದೊತ್ತಡ, ಅವಿರತ ಶ್ರಮದ ಬಗ್ಗೆಯೂ ಶಾಸಕರು ನೆನಪಿಸಿಕೊಂಡರು. ಜನಸಾಮಾನ್ಯರ ನಿರೀಕ್ಷೆಗಳು ಮತ್ತು ಜನಪ್ರತಿನಿಧಿಗಳ ಕಾರ್ಯಶೈಲಿ, ಇತ್ಯಾದಿ ವಿಚಾರಗಳನ್ನು ಜನರ ಮುಂದಿರಿಸಿದರು.
ಪಿಯು ಕಾಲೇಜು ಪ್ರಾಂಶುಪಾಲರಾದ ಜಯಾನಂದ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ, ಜಿ.ಪಂ. ಕೊಠಡಿಗಳ ಅನುಷ್ಠಾನ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು, ರವಿಚಂದ್ರ, ಪ್ರಸಾದ್, ವಿಜಯ್ ಶೆಣೈ, ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸ್ಥಳೀಯ ಕಾರ್ಪೊರೇಟರ್ ವನಿತಾ ಪ್ರಸಾದ್, ಪುರುಷೋತ್ತಮ್ ಭಟ್, ರಾಜೇಂದ್ರ ಕುಲರವಾಡ, ರವಿಚಂದ್ರ, ವಿಜಯ ಶೆಣೈ, ಪುರುಷೋತ್ತಮ ಜೋಗಿ, ಪದ್ಮನಾಭ, ವಿಜಯ ಶೆಟ್ಟಿ, ಅಶೋಕ, ರಘು ಆಚಾರ್ಯ, ಕುಶಲ್ ಕುಮಾರ್, ಪ್ರಶಾಂತ, ಬಾಲಕೃಷ್ಣ ಜಿ, ಶೋಭಾ ಶೇಖರ, ನಾಗೇಶ, ಮಾಲತಿ, ಲತಾ, ಪುಷ್ಪ, ವಿನಯ, ಅಮೃತ, ರಮೇಶ್ ಬಿಜೂರು, ಚಂದ್ರಹಾಸ, ಗಾಯತ್ರಿ, ಸುಶೀಲಾ, ನಾರಾಯಣ ಡಿ, ಸುಂದರ ಡಿ, ಗಣೇಶ್ ಪ್ರಭು, ರಾಜೇಶ್ ಕೆ. ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ