ಮಂಗಳೂರು : ಜೆಸಿಐ ಮಂಗಳ ಗಂಗೋತ್ರಿಯಿಂದ LDMT ತರಬೇತಿ

Upayuktha
0

 

ಮಂಗಳೂರು : ಜೆಸಿಐ ಮಂಗಳಗಂಗೋತ್ರಿ,ಕೊಣಾಜೆ ಸಂಸ್ಥೆಯ ವತಿಯಿಂದ LDMT (LOM Development and Management Training) ತರಬೇತಿ ಶಿಬಿರವನ್ನು ಇತ್ತೀಚೆಗೆ ಅಸೈಗೋಳಿಯಲ್ಲಿ ಏರ್ಪಡಿಸಲಾಗಿತ್ತು. 


ಜೆಸಿಐ ಇಂಡಿಯಾದ ವಲಯ  15ರ ಉಪಾಧ್ಯಕ್ಷ ಜೆಸಿ. ಭರತ್‌ ಶೆಟ್ಟಿ ಶಿಬಿರಾರ್ಥಿಗಳಿಗೆ ಜೆಸಿಐ ಯ ಮ್ಯಾನೇಜ್‌ಮೆಂಟ್ ಬಗ್ಗೆ ತರಬೇತಿ ನೀಡಿದರು. ತರಬೇತಿಯಲ್ಲಿ 20ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಸಿ ಡಾ.ನರಸಿಂಹಯ್ಯ ಎನ್‌ಜೆಸಿಐನ ಕಾರ್ಯ ಯೋಜನೆಗಳನ್ನು ವಿವರಿಸಿದರು. 


ಕಾರ್ಯಕ್ರಮದ ಪ್ರಾಜೆಕ್ಟ್ ನಿರ್ದೇಶಕ ಜೆಸಿ ಡಾ.ಪ್ರಶಾಂತ ನಾಯಕ್ ಉಪಸ್ಥಿತರಿದ್ದರು. ಸ್ಥಾಪಕಾಧ್ಯಕ್ಷ ಜೆಸಿ ತ್ಯಾಗಮ್ ಹರೇಕಳ, ಪೂರ್ವಾಧ್ಯಕ್ಷ ಜೆಸಿ ಕಮಲಾಕ್ಷ ಶೆಟ್ಟಿಗಾರ್ ಮತ್ತು ಜೆಸಿ ಫ್ರಾನ್ಸಿಸ್ ಫ್ಯ್ರಾಂಕಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜೆಸಿ. ಕವಿತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜೆಸಿ ಆರಿಫ್‌ ಕಲಕಟ್ಟ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top