ಮಂಗಳೂರು: ಕನ್ನಡ ಬಳಗ ಮಂಗಳೂರು, ಮಾರ್ಪಳ್ಳಿ ಪ್ರಕಾಶನ ಮಂಗಳೂರು ಮತ್ತು ಸುಬ್ರಹ್ಮಣ್ಯ ಸಭಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 22ರ ಬುಧವಾರದಂದು ಬೆಳಗ್ಗೆ 10 ಗಂಟೆಯಿಂದ ಕೊಡಿಯಾಲಬೈಲ್ ನಲ್ಲಿರುವ ಸುಬ್ರಹ್ಮಣ್ಯ ಸದನದಲ್ಲಿ ಯುಗಾದಿ ಸಾಹಿತ್ಯೋತ್ಸವ ಏರ್ಪಡಿಲಾಗಿದೆ.
ಹಿರಿಯ ಕವಿ - ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಸಾಹಿತ್ಯೋತ್ಸವವನ್ನು ಉದ್ಘಾಟಿಸುವರು. ಕವಿ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ವಿಶ್ರಾಂತ ನಿರ್ದೇಶಕ ಎಂ. ಆರ್. ವಾಸುದೇವ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರಾದ ಹರಿಕೃಷ್ಣ ಪುನರೂರು ಮತ್ತು ಲಯನ್ಸ್ ಮಾಜಿ ಗವರ್ನರ್ ಕವಿತಾ ಶಾಸ್ತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಡಿಜಿಟಲ್ ಯುಗ ಮತ್ತು ಸಾಹಿತ್ಯ ಹಾಗೂ ರಾಷ್ಟ್ರೀಯ ಚಿಂತನೆಯ ಸಾಹಿತ್ಯ ಎಂಬ ವಿಚಾರವಾಗಿ ವಿಚಾರ ಸಂಕಿರಣ ನಡೆಯಲಿದ್ದು ಬ್ರಹ್ಮಾವರದ ಪ್ರಾಂಶುಪಾಲೆ ಅಭಿಲಾಷಾ ಎಸ್. ಮತ್ತು ಉಡುಪಿಯ ಡಾ. ಪ್ರಜ್ಞಾ ಮಾರ್ಪಳ್ಳಿ ವಿಚಾರ ಮಂಡನೆ ಮಾಡುವರು. ಪುತ್ತೂರಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸುವರು.
ಅನಂತರ ಶ್ರೀಕೃಷ್ಣಯ್ಯ ಅನಂತಪುರ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರಗಲಿದ್ದು ಕವಿಗಳಾದ ರಾಮ್ ಎಲ್ಲಂಗಳ, ಎನ್. ಸುಬ್ರಾಯ ಭಟ್, ಸಾವಿತ್ರಿ ಪೂರ್ಣಚಂದ್ರ, ರಾಯಿ ರಾಜಕುಮಾರ್, ಬೆಳ್ಳಾಲ ಗೋಪಿನಾಥ ರಾವ್, ಶಾಂತಾ ಪುತ್ತೂರು, ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಡಾ. ವೀಣಾ ಎನ್. ಸುಳ್ಯ, ಶ್ಯಾಮಲಾ ರವಿರಾಜ್ ಕುಂಬಳೆ, ಕೊಳಚಪ್ಪೆ ಗೋವಿಂದ ಭಟ್, ಶಶಿಧರ ಹಾಲಾಡಿ, ಗೀತಾ ಪುತ್ತೂರು ಮೊದಲಾದ ಕವಿಗಳು ಭಾಗವಹಿಸಲಿರುವರು ಎಂದು ಕನ್ನಡ ಬಳಗದ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ