ಮಂಗಳೂರು: ಸಾಧಕಿಯರಿಗೆ ಸನ್ಮಾನ

Upayuktha
0

ಮಂಗಳೂರು: ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಗರದ ಕುತ್ತಾರ್ ಪದವಿನಲ್ಲಿರುವ ಬಾಲಸಂರಕ್ಷಣಾ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.


ಕಾರ್ಯಕ್ರಮಕ್ಕೆ ವಲಯ 15 ರ ವಲಯ ನಿರ್ದೇಶಕಿ ಸೆನೆಟರ್ ಅಕ್ಷತಾ ಗಿರೀಶ್ ಐತಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳೆಯರು ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕು, ಎಂದು ಅಭಿಪ್ರಾಯಪಟ್ಟರು. 

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಅಧ್ಯಕ್ಷ ಜೆ ಸಿ ಡಾ. ನರಸಿಂಹಯ್ಯ ಎನ್, ಮಹಿಳಾ ದಿನಾಚರಣೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿ, ಜೆಸಿಐ ಕಾರ್ಯಯೋಜನೆಗಳ ಬಗ್ಗೆ ತಿಳಿಸಿದರು. ಮತ್ತೋರ್ವ ಅತಿಥಿ ಕೆ. ರವೀಂದ್ರ ರೈ ಕಲ್ಲಿಮಾರ್ ಮಾತನಾಡಿ, ಜೆಸಿಐ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. 

ಈ ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿಸಂಘಟನೆಗಳ ಸದಸ್ಯರಿಗೆ ʼಸಾವಯವ ಕೃಷಿ ಮತ್ತು ತಾರಸಿ ಹೂತೋಟದ ಮೂಲಕ ಮಹಿಳಾ ಸಬಲೀಕರಣʼಎಂಬ ವಿಷಯದಲ್ಲಿ ವಿಶೇಷ ತರಬೇತಿ ಏರ್ಪಡಿಸಲಾಗಿತ್ತು. ಸ್ತ್ರೀ ಶಕ್ತಿಸಂಘದ ಸದಸ್ಯರಿಗೆ ಆಟೋಟಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶ್ರೀಮತಿ ಜಯವಂತಿ ಸೋನ್ಸ್,  ಜೆಸಿಜಿ. ಜಯಲಕ್ಷ್ಮಿ, ಶ್ರೀಮತಿ ರೂಖಿಯ ದೇಬ್ಬೆಲಿ, ಶ್ರೀಮತಿ ಸ್ನೇಹಭಟ್ ಅವರಿಗೆ "ಜೆಸಿ ಸಾಧನಾ ಶ್ರೀ" ಪ್ರಶಸ್ತಿ ನೀಡಿ ಗೌರವಿಸಲಾಯಿತು. 


ಜೆಸಿ ತ್ಯಾಗಮ್ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಸಿ. ಕವಿತಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಜೆಸಿ ಅರಿಫ್ ಕಲ್ಲಕಟ್ಟ ವಂದಿಸಿದರು, ನಿಕಟಪೂರ್ವ ಅಧ್ಯಕ್ಷ ಜೆಸಿ ಕಮಲಾಕ್ಷ ಶೆಟ್ಟಿಗಾರ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top