ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜಿಗೆ 7 ರ್‍ಯಾಂಕ್‌ಗಳು!

Upayuktha
0

 ಬಂಗಾರದ ಪದಕ, ನಗದು ಬಹುಮಾನಕ್ಕೂ ಭಾಜನರಾದ ವಿದ್ಯಾರ್ಥಿಗಳು

ಮಂಗಳೂರು : ಸ್ನಾತಕೋತ್ತರ ವಿಭಾಗದಲ್ಲಿ ಮೂರು ಪ್ರಥಮ ರ್‍ಯಾಂಕ್‌ಗಳು ಸೇರಿದಂತೆ, ಮಂಗಳೂರು ವಿಶ್ವದ್ಯಾನಿಲಯ 2021-22ರ ಸಾಲಿನಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಏಳು ವಿದ್ಯಾರ್ಥಿಗಳು ರ್‍ಯಾಂಕ್‌ ಪಡೆದುಕೊಂಡಿರುತ್ತಾರೆ. 


ಪದವಿ ಪರೀಕ್ಷೆಗಳಲ್ಲಿ, ಲಿಖಿತಾ ಜಿ ಎನ್, ಬಿಎ ಪದವಿಯಲ್ಲಿ ಒಂಬತ್ತನೇ ರ್‍ಯಾಂಕ್‌ ಅನ್ನು ಪಡೆದುಕೊಂಡಿದ್ದಾರೆ. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಪ್ರಜ್ಞಾ ಪಿ ನಾಯಕ್ ಮೊದಲ ರ್‍ಯಾಂಕ್‌ನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ತ್ವ ವಿಭಾಗದ ಸಾಯಿ ಸೂರ್ಯ ಕೆ ಪಿ ಹಾಗೂ ಸ್ನಾತಕೋತ್ತರ ಹಿಂದಿ ವಿಭಾಗದ ಡಿಂಪಲ್ ಮಿಷಲ್ ತೌವುರೊ ಕೂಡ ಮೊದಲ ರ್‍ಯಾಂಕ್‌ನ್ನು ಬಾಚಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಸ್ನಾತಕೋತ್ತರ ರಸಾಯನಶಾಸ್ತ್ರ ವಿಭಾಗದ ಅಶ್ವಿನಿ ಜಿ ದ್ವಿತೀಯ ರ್‍ಯಾಂಕ್‌ ಮತ್ತು ಎಂ.ಕಾಂ ನ ಐ ಪ್ರಿಯದರ್ಶಿನಿ ಎಂಟನೇ ರ್‍ಯಾಂಕ್‌ ಪಡೆದುಕೊಂಡಿದ್ದಾರೆ. ಎಂ.ಕಾಂನ ವಾಣಿಶ್ರೀ ಹತ್ತನೇ ರ್‍ಯಾಂಕ್‌ ಪಡೆದಿದ್ದಾರೆ. 


ಬಿ.ಎಸ್ಸಿ ಮೈಕ್ರೋಬಯೋಲಜಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಹಿಳಾ ಅಭ್ಯರ್ಥಿ ಸುಶ್ಮಿತಾ ಕೆ, ಶ್ರೀಮತಿ ಕಾರ್ಮೈನ್ ಲೋಬೋ ಬಂಗಾರದ ಪದಕ ಪಡೆದಿದ್ದಾರೆ.  ಸುಶ್ಮಿತಾ ಕೆ ಅವರು ಭಾರತೀಯ ಸೂಕ್ಷ್ಮಾಣು ಜೀವಶಾಸ್ತ್ರಜ್ಞರ ಸಂಘ ಕೊಡಮಾಡುವ ಪ್ರೊ. ಜೆ.ವಿ. ಭಟ್ ಸ್ಮರಣಾರ್ಥ ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ. ಅಂತಿಮ ಬಿ.ಕಾಂ ವಿದ್ಯಾರ್ಥಿನಿ ರುಷಾಲಿ ಐದು ಮತ್ತು ಆರನೇ ಸೆಮಿಸ್ಟರ್ ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ಪ್ರಾಯೋಜಿಸಿರುವ ಡಾ. ಟಿ.ಎಂ.ಎ ಪೈ ನಗದು ಬಹುಮಾನವನ್ನು ಪಡೆದಿದ್ದಾರೆ.  


ಅಂಜಲಿ ಬಾಬು ಜುಬ್ರೆ, ಪದವಿ ಪರೀಕ್ಷೆಯ ಹಿಂದಿ ಭಾಷೆಯಲ್ಲಿ ಗರಿಷ್ಠ ಅಂಕ ಪಡೆದು ಶ್ರೀಮತಿ ಜಯಂತಿ ಟೆಕ್ಸ್‌ಟೈಲ್ಸ್‌ ಕಂಪನಕಟ್ಟ ಇವರು ಪ್ರಾಯೋಜಿಸಿರುವ ವನಮಾಲೀದಾಸ್, ಗೋಕುಲ್‌ದ ಸ್ಚಾರಿಟೇಬಲ್ ಟ್ರಸ್ಟ್‌ ನಗದು ಬಹುಮಾನ ಪಡೆದಿದ್ದಾರೆ. 


ಸಂಸ್ಥೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಡಾ.ಅನಸೂಯ ರೈ ಹಾಗೂ ಪ್ರಾಧ್ಯಾಪಕ ವರ್ಗ ಅಭಿನಂದಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top