ಮಲ್ಪೆ ರಾಮದಾಸ ಸಾಮಗರ ಸಂಸ್ಮರಣಾ ಗ್ರಂಥ ಪ್ರಕಟಣೆ: ಯಕ್ಷಾಭಿಮಾನಿಗಳಲ್ಲಿ ವಿನಂತಿ

Upayuktha
0

ಯಕ್ಷಗಾನ ಲೋಕದಲ್ಲಿ‌ ಮರೆಯಲಾಗದ, ಮರೆಯಬಾರದ ಹೆಸರುಗಳಲ್ಲಿ ಒಂದು 'ಮಲ್ಪೆ ರಾಮದಾಸ ಸಾಮಗ'. ಸಾಮಗರ ಜನ್ಮ ಶತಾಬ್ದ ಸನಿಹದಲ್ಲಿದ್ದು, ಸ್ಮರಣ ಗ್ರಂಥವೊಂದು ಸದ್ಯದಲ್ಲೇ‌ ಮುದ್ರಣ ಕಾಣಲಿದೆ. ಪ್ರದೀಪ ಕುಮಾರ ಕಲ್ಕೂರರ ಪ್ರೇರಣೆಯಿಂದ ವಿದ್ವಾಂಸ ಡಾ. ಪ್ರಭಾಕರ ಜೋಷಿಯವರ ಸಂಪಾದಕತ್ವದಲ್ಲಿ ಗ್ರಂಥವು ಸಿದ್ಧವಾಗಿದ್ದು, ಸಾಮಗರ ಬಗ್ಗೆ ಮೌಲಿಕವಾದ ಲೇಖನಗಳನ್ನು ಒಳಗೊಂಡಿದೆ.

 

ಇದರಲ್ಲಿ ಚಿತ್ರಸಂಪುಟವನ್ಮೂ ಸೇರಿಸಬೇಕೆಂಬ ಉದ್ದೇಶವಿದ್ದು, ಯಕ್ಷಾಭಿಮಾನಿಗಳು, ಸಂಗ್ರಹ ಕಾರರಲ್ಲಿ ಸಂಪಾದಕ ಮಂಡಳಿಯ ಪರವಾಗಿ‌ ವಿಜ್ಞಾಪಿಸುವುದೇನೆಂದರೆ,

ದಯವಿಟ್ಟು ತಮ್ಮಲ್ಲಿರುವ ರಾಮದಾಸ ಸಾಮಗರ ಅಮೂಲ್ಯ ಫೋಟೋಗಳನ್ನು ತಾವು ನೀಡಿದಲ್ಲಿ, ಫೋಟೋ ಕ್ರೆಡಿಟ್ ನೊಂದಿಗೆ ಪ್ರಕಟಿಸಲಾಗುವುದು.


ಫೋಟೋಗಳನ್ನು ಪ್ರಕಟಣ ಯೋಗ್ಯ ಸ್ಥಿತಿಯಲ್ಲಿ ಸ್ಕ್ಯಾನ್ ಮಾಡಿ ನನ್ನ ವಿಳಾಸ (pvsamagaa@gmail.com) ಕ್ಕೆ ಕಳುಹಿಸಬಹುದು. ಅಥವಾ ನನ್ನ ವಾಟ್ಸಪ್ ಸಂಖ್ಯೆ 8660970791 ಇದಕ್ಕೂ attachment ಮಾಡಿ ಕಳುಹಿಸಬಹುದು.


ಜೊತೆಗೆ, ರಾಮದಾಸ ಸಾಮಗರ ಬಗ್ಗೆ ತಮಗೆ ತಿಳಿದ ರಂಜನೀಯ ಪ್ರಸಂಗಗಳು ಅಥವಾ ವಿಷಯಗಳನ್ನೂ ಕಳುಹಿಸಬಹುದು (Specific, authentic, first hand informations are needed). ಸಂಪಾದಕರಿಂದ ಆಯ್ಕೆಗೊಂಡವುಗಳನ್ನು ಗ್ರಂಥದಲ್ಲಿ ಬಳಸಿಕೊಳ್ಳಲಾಗುವುದು. 

-ಪ್ರದೀಪ್ ಸಾಮಗ, ಮಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top