ರೋಗಿಗಳಿಗೆ ಹಣ್ಣುಹಂಪಲು, ಬೇವು-ಬೆಲ್ಲ ವಿತರಣೆ
ಚಿಕ್ಕಬಳ್ಳಾಪುರ: ಇಂದು ಭಾವೈಕ್ಯ ಯುವಜನ ಸಂಘ ಚಿಕ್ಕಬಳ್ಳಾಪುರ, ಸಮಾಜ ಸೇವಾ ಮತ್ತು ಅಭಿವೃದ್ಧಿ ಇಲಾಖೆ ಕರ್ನಾಟಕ ಮತ್ತು ಯೂಥ್ ಫಾರ್ ಸೇವಾ ಬೆಂಗಳೂರು ವತಿಯಿಂದ ಚಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಯಲಹಂಕದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಅರೋಗ್ಯ ದೃಷ್ಟಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಬೇವು ಬೆಲ್ಲ ನೀಡಿ ಹಬ್ಬವನ್ನು ಆಚರಿಸಲಾಯಿತು.
ಜೊತೆಗೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗೂ ಹಣ್ಣು ಹಂಪಲುಗಳನ್ನು ನೀಡಿ ಬೇವು ಬೆಲ್ಲವನ್ನು ನೀಡಿ ಯುಗಾದಿಯನ್ನು ಆಚರಿಸಲಾಯಿತು. ಭಾವೈಕ್ಯ ಯುವಜನ ಸಂಘ ಚಿಕ್ಕಬಳ್ಳಾಪುರದ ಸ್ವಯಂ ಸೇವಕರು ಸಂಯೋಜಕರು ಗಿರೀಶ್ ರವರು ಮತ್ತು ಯೂಥ್ ಫಾರ್ ಸೇವಾ ಬೆಂಗಳೂರಿನ ಸತ್ಯರವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ