ಅನುಭಾವದಿಂದಲೇ ಸಮಾಜಕ್ಕೆ ಬೆಳಕಾದ ಅಲಕ್ಷಿತ ವಚನಕಾರರು

Upayuktha
0

ಕನ್ನಡ  ಸಂಘ ಕಾಂತಾವರದಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ


ಕಾರ್ಕಳ: 12ನೇ ಶತಮಾನದಲ್ಲಿ ಅಲಕ್ಷಿತ ವಚನಕಾರರೆಂದು  ಗುರುತಿಸಲ್ಪಟ್ಟವರೆಲ್ಲರೂ ಅತ್ಯಂತ ಕೆಳಸ್ತರದಿಂದ ಬಂದವರಾಗಿದ್ದರು. ಇವರೆಲ್ಲ ನಿರಕ್ಷರಕುಕ್ಷಿಗಳಾಗಿದ್ದರೂ ತಮ್ಮ ಅನುಭವ ಅನುಭಾವದಿಂದಲೇ ಸಮಾಜಕ್ಕೆ  ಬೆಳಕಾದರು. ದನಿ ಕಳೆದುಕೊಂಡ ತಳಸಮುದಾಯಗಳ ಜನರ ಸಾಮಾಜಿಕ ಮುಖವಾಣಿಯಾಗಿ ಕಾರ್ಯನಿರ್ವಹಿಸಿದ ಬಸವಣ್ಣನವರು ಆ ಸಮುದಾಯಗಳ ಆತ್ಮಸ್ವರೂಪ ಜಾಗೃತಿಗೆ ಶ್ರಮಿಸಿದರು. ಅದು ಒತ್ತಾಯದ ನೆಲೆಯಿಂದ ಆಗದೆ ಮನೋವಿಕಾಸದಿಂದಾಯಿತು ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕರಾಗಿರುವ  ಡಾ. ಡಿ.ವಿ.ಪ್ರಕಾಶ್ ಅವರು ತಿಳಿಸಿದರು.

ಕನ್ನಡ  ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ  ಸಾಹಿತ್ಯ ಪರಿಷದ್  ಕಾರ್ಕಳ ಇವರ ಜಂಟಿ ಸಹಯೋಗ  ಹಾಗೂ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ  ಇಲಾಖೆಯ  ಆಶ್ರಯದೊಂದಿಗೆ ಕಾರ್ಕಳದ ಸುಂದರ ಪುರಾಣಿಕ ಸ್ಮಾರಕ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಅರಿವು – ತಿಳಿವು ತಿಂಗಳ ಕಾರ್ಯಕ್ರಮದಲ್ಲಿ ಅವರು “ಅಲಕ್ಷಿತ ವಚನಕಾರರ ವಚನಗಳಲ್ಲಿ ಸಾಮಾಜಿಕ ಕಳಕಳಿ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

      

ಬಹುಸಂಖ್ಯಾತ ಉಪೇಕ್ಷಿತ ಜನಸಮುದಾಯ ಸಂಘಟಿತರಾಗಿ ರಾಜಧರ್ಮವನ್ನು ಪ್ರಶ್ನಿಸುವ ಧೈರ್ಯ ತೋರಿದ್ದರಿಂದ  ರಾಜಸತ್ತೆಗೆ  ಅಭ್ರದತೆ ಕಾಡಿತು . ಈ ಕಾರಣಕ್ಕಾಗಿ ಬಸವಣ್ಣ ರಾಜ ಮತ್ತು ಮೇಲ್ವರ್ಗದವರ ಕಿರುಕುಳಕ್ಕೆ ಭಾಜನರಾದರು. ಇದರಿಂದ ಅವರ ನಿರ್ಧಾರಗಳು ಸ್ಥಿರವಾದವೇ ಹೊರತು ದುರ್ಬಲವಾಗಲಿಲ್ಲ. ಹಾಗಾಗಿ ಅಸಂಘಟಿತ ವಲಯದ ಸಮುದಾಯಗಳ ನಮ್ರ ಒಗ್ಗೂಡುವಿಕೆಯೇ ವಚನ ಆಂದೋಲನದ ಯಶಸ್ಸಿಗೆ ಕಾರಣವಾಯಿತು ಎಂದರು.

     

ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷರಾದ ಡಾ.ನಾ.ಮೊಗಸಲೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಲತಿ.ಜಿ.ಪೈಯವರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶ್ರುತಿ ಪ್ರಾರ್ಥಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ವಂದಿಸಿದರು.

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter                                         

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top