ಕೊಪ್ಪ: ಪೊಳಲಿ ಶಾಸ್ತ್ರೀ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ದಿ. ಎಂ.ಎಲ್ ರಾಮಚಂದ್ರರಾವ್ ಅವರ ನೆನಪಿನಲ್ಲಿ ಮನೆಯಂಗಳದಲ್ಲಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಮಾ.23ರಂದು ಜಿ.ಆರ್. ಅಶೋಕ, ಕುಮರಿಗದ್ದೆ (ಸಿಗದಾಳು) ಇವರ ಮನೆಯಂಗಳದಲ್ಲಿ ನಡೆಯಲಿದೆ.
ಅಪರಾಹ್ನ 3:00ಕ್ಕೆ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಮೃದಂಗ ವಿದ್ವಾನ್ ಗಣೇಶ ಮೂರ್ತಿ ಸೂರಳಿ ಅವರು ದೀಪ ಪ್ರಜ್ವಲನದೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಬಳಿಕ ಶ್ರೀರಂಗ ತುಲಾಭಾರ- ಪ್ರಸಂಗದ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸನ್ನ ಭಟ್ ಬಾಳಕಲ್, ಮದ್ದಲೆಯಲ್ಲಿ ಅಕ್ಷಯ ಆಚಾರ್, ಬಿದ್ಕಲ್‌ಕಟ್ಟೆ, ಚಂಡೆಯಲ್ಲಿ ಎಚ್.ಎಸ್. ಗಣೇಶಮೂರ್ತಿ ಹುಲುಗಾರು ಸಹಕರಿಸಲಿದ್ದಾರೆ.
ಮುಮ್ಮೇಳದಲ್ಲಿ ವಿದ್ವಾನ್ ಗಣಪತಿ ಭಟ್ ಸಂಕದಗುಂಡಿ, ವಾಸುದೇವ ರಂಗಾ ಭಟ್ ಉಡುಪಿ, ಪವನ್ ಕಿರಣಕೆರೆ, ಸೀತಾರಾಮಚಂದು ಹೆಗಡೆ ಶಿರಸಿ, ರಜನೀಶ್ ಹೊಳ್ಳ ಕೆಂಪನಮಕ್ಕಿ, ವಿದ್ಯಾಧರ ಮೇಲುಕೊಪ್ಪ, ಅಭಿರಾಮ ಸಿಗದಾಳು ಭಾಗವಹಿಸಲಿದ್ದಾರೆ.
ಮನೆಯ ಹಿರಿಯರಾದ ಗ.ರಾ ಅರವಿಂದ ಸಿಗದಾಳ್, ಮೇಲುಕೊಪ್ಪ ಮತ್ತು ಜಿ.ಆರ್. ಅಶೋಕ ಸಿಗದಾಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ