ನಾಳೆ ಕದ್ರಿ ಬಾಲಭವನದಲ್ಲಿ 'ಕಥಾಲಾಪ'- ಚಿಣ್ಣರ ಚಿಲಿಪಿಲಿ

Upayuktha
0

ಮಂಗಳೂರು: ನ್ಯಾಯವಾದಿ, ಕವಯತ್ರಿ, ಮಕ್ಕಳ ಸಾಹಿತಿ ಪರಿಮಳ ರಾವ್ ಕೆ. ಸಾರಥ್ಯದ "ಅನಾವರಣ  ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ" (ASSAP) ಆಶ್ರಯದಲ್ಲಿ ರಾಜ್ಯಮಟ್ಟದ ಕಥಾಲಾಪ ಮತ್ತು ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ನಾಳೆ (ಮಾ.12) ಭಾನುವಾರ ಮಂಗಳೂರು ನಗರದ ಕದ್ರಿ ಬಾಲಭವನದಲ್ಲಿ ನಡೆಯಲಿದೆ.


ಈ ಮಹತ್ವಪೂರ್ಣ ಕಾರ್ಯಕ್ರಮದ ಉದ್ಘಾಟನೆಯನ್ನು NSCDF ಅಧ್ಯಕ್ಷ ಗಂಗಾಧರ್ ಗಾಂಧಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು "ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ"ದ (ASSAP) ಅಧ್ಯಕ್ಷೆ ಹಾಗೂ ನ್ಯಾಯವಾದಿ, ಕವಯತ್ರಿ, ಮಕ್ಕಳ ಸಾಹಿತಿ ಪರಿಮಳ ರಾವ್ ಕೆ. ವಹಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ  ಭಾಗವಹಿಸಲಿದ್ದು, ರಾಜ್ಯ  ಮಟ್ಟದ "ಕಥಾಲಾಪ"ದ ಅಧ್ಯಕ್ಷರಾಗಿ ಜನಪ್ರಿಯ ಮುಕ್ತಕ ಕವಿ ಡಾ. ಸುರೇಶ್ ನೆಗಳಗುಳಿ ವಹಿಸಲಿದ್ದು, ಕಾರ್ಯಕ್ರಮದ ಸಂಚಾಲಕಿ ಕವಯತ್ರಿ ಗೀತಾ ಲಕ್ಷ್ಮೀಶ  ಮತ್ತಿತರರು ಭಾಗವಹಿಸುವರು.


ಇದೇ ಸಂದರ್ಭದಲ್ಲಿ ನಡೆಯುವ ಕಥಾಲಾಪದಲ್ಲಿ ವೀಣಾ ಆರ್ ಕಾರಂತ್, ವ. ಉಮೇಶ್ ಕಾರಂತ್, ಅಶ್ವಿಜ ಶ್ರೀಧರ್, ಕೊಳಚಪ್ಪೆ ಗೋವಿಂದ ಭಟ್, ಜಯರಾಮ ಪಡ್ರೆ, ಉಮೇಶ್ ಶಿರಿಯ, ರಾಮಾಂಜಿ ನಮ್ಮ ಭೂಮಿ, ಗೋಪಾಲಕೃಷ್ಣ ಶಾಸ್ತ್ರಿ, ರೇಖಾ ಸುದೇಶ್ ರಾವ್‌, ಶ್ಯಾಮಪ್ರಸಾದ್ ಭಟ್, ದೀಪಾ ಸದಾನಂದ್, ನವೀನ್ ಕುಮಾರ್ ಪೆರಾರ, ಮಾನ್ವಿ ಮಂಗಳೂರು, ಹಿತೇಶ್ ಕುಮಾರ್ ಎ, ಸುಗಂಧಿ ಶ್ಯಾಮ್, ಪದ್ಮನಾಭ ಮಿಜಾರು, ಎಡ್ವರ್ಡ್ ಲೊಬೊ, ಮಲ್ಲೇಶ್ ಜಿ.  ಹಾಸನ್, ದೇವರಾಜ್ ಕುಂಬ್ಳೆ, ಚಿತ್ರಕಲಾ ದೇವರಾಜ್, ಸಿಹಾನ ಬಿ.ಎಂ, ರೇಮಂಡ್ ಡಿಕೂನ ತಾಕೊಡೆ, ಅನುರಾಧಾ ರಾಜೀವ್, ಹರೀಶ್ ಮೆಲ್ಕಾರ್, ದಯಾಮಣಿ ಎಕ್ಕಾರ್, ವಾಣಿ ಲೋಕಯ್ಯ, ಸೌಮ್ಯ ಆರ್ ಶೆಟ್ಟಿ, ರಶ್ಮಿತಾ, ಎ.ಕೆ. ಕುಕ್ಕಿಲ ಭಾಗವಹಿಸಲಿದ್ದಾರೆ. ಬಳಿಕ ಈ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ "ಚಿಣ್ಣರ ಚಿಲಿಪಿಲಿ" ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (ASSAP)ದ ಕಾರ್ಯದರ್ಶಿ ಮಾಲಿನಿ ರಾವ್ ಕೆ. ಉಪಾಧ್ಯಕ್ಷ ಮಹೇಶ್ ಕೆ. ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top