ಡಾ.ದಾಮ್ಲೆ, ಡಾ.ದೀಪಾ ಫಡ್ಕೆ, ಸ್ಮಿತಾ ಅಮೃತರಾಜ್, ಡಾ.ಚೂಂತಾರು ಅವರ ಕೃತಿಗಳಿಗೆ ಕಸಾಪ ದತ್ತಿ ಪ್ರಶಸ್ತಿ

Upayuktha
0

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಆವರಣದ ಶ್ರೀ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಮಾರ್ಚ್ 12 ರಂದು ನಡೆದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ 2021ನೇ ಸಾಲಿನ ವಿವಿಧ ಕೃತಿಗಳಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ದತ್ತಿ ಪ್ರಶಸ್ತಿಗಾಗಿ 49 ವಿಭಾಗಕ್ಕೆ 53 ಕೃತಿಗಳನ್ನು ಆಯ್ಕೆ ಮಾಡಲಾಗಿದ್ದು, ದತ್ತಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.


ಸುಳ್ಯದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ದಾಮ್ಲೆ, ಬರಹಗಾರ್ತಿ ಡಾ. ದೀಪಾ ಫಡ್ಕೆ, ಲೇಖಕಿ ಸ್ಮಿತಾ ಅಮೃತರಾಜ್, ಡಾ. ಮುರಲೀಮೋಹನ್ ಚೂಂತಾರು, ಬಿ. ಸತ್ಯವತಿ ಎಸ್. ಭಟ್ ಕೊಳಚಿಪ್ಪು, ರಾಜಶ್ರೀ ರೈ ಪೆರ್ಲ, ಡಾ. ಎಚ್.ಜೆ. ಶ್ರೀಧರ್ ಅವರ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿದೆ.


ಸಮಾರಂಭವನ್ನು ಬೆಂಗಳೂರು ಬೆಂಗಳೂರು ಉತ್ತರ ವಿವಿ ಕುಲಪತಿ ಡಾ. ನಿರಂಜನ ವಾನಳ್ಳಿ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರಾದ ನಾಡೋಜ, ಡಾ. ಮಹೇಶ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಂ ರಾಯಪುರ, ಹಿರಿಯ ಸಾಹಿತಿ ಪ್ರೊ. ಕಾಳೇ ಗೌಡ ನಾಗವಾರ ಉಪಸ್ಥಿತರಿದ್ದರು.


ಡಾ. ಚಂದ್ರಶೇಖರ ದಾಮ್ಲೆ ಅವರ ‘ನನ್ನ ಮಗಳು ತುಂಟಿ ಅಲ್ಲಾ’ ಕೃತಿಗೆ ಡಾ. ಎ.ಎಸ್. ಧರಣೇಂದ್ರಯ್ಯ-ಮನೋ ವಿಜ್ಞಾನ ದತ್ತಿ ಪ್ರಶಸ್ತಿ, ಡಾ.  ದೀಪಾ ಫಡ್ಕೆ ಅವರ ‘ಮುಂದಣ ಹೆಜ್ಜೆ’ ಕೃತಿಗೆ ಡಾ. ವೀಣಾ ಶಾಂತೇಶ್ವರ ದತ್ತಿ ಪ್ರಶಸ್ತಿ, ಸ್ಮಿತಾ ಅಮೃತ್‍ರಾಜ್ ಸಂಪಾಜೆ  ಅವರ 'ನೆಲದಾಯ ಪರಿಮಳ' ಕೃತಿಗೆ ಗೌರಮ್ಮ ಹರ್ನಳ್ಳಿ ಕೆ. ಮಂಜಪ್ಪ ದತ್ತಿ ಪ್ರಶಸ್ತಿ, ಡಾ. ಮುರಲೀಮೋಹನ್ ಚೂಂತಾರು ಅವರ 'ಸಂಗಾತಿ' ಕೃತಿಗೆ  ಬಿಸ್ಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿ ದೊರೆತಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top