ಗಾಯಕರು ಸಾಹಿತ್ಯಕ್ಕೆ ಗಮನ ಕೊಡಿ: ಶಶಿಧರ್ ಕೋಟೆ

Upayuktha
0

 ಮಂಗಳೂರು ವಿವಿಯಲ್ಲಿ ‘ಕನಕಪುರಸ್ಕಾರ' ಕಾರ್ಯಕ್ರಮ

ಮುಡಿಪು : ಕಲಾವಿದನಾಗಲಿ ಗಾಯಕನಾಗಲಿ ಸಂಗೀತದ ಎಲ್ಲಾ ಪ್ರಕಾರಗಳನ್ನು ಒಂದೇ ರೀತಿ ಇಷ್ಟಪಡಬೇಕು.  ಸಂಗೀತ ಕ್ಷೇತ್ರದಲ್ಲಿ ಸ್ವರಗಳ ಜ್ಞಾನ ಅರಿತುಕೊಂಡು ಬೆಳೆದರೆ ಯಶಸ್ಸು ಸಾಧ್ಯ. ಸಂಗೀತ ಮತ್ತು ಸಾಹಿತ್ಯ ಎನ್ನುವಂತದ್ದು ಸಾಗರ. ಅದರಲ್ಲಿಯೂ ಕನಕದಾಸರು ಹಾಗೂ ಪುರಂದರ ದಾಸರ ರಚನೆಗಳು ಅಪೂರ್ವ.

 

ಗಾಯಕರು ಸಾಹಿತ್ಯಕ್ಕೆ ಗಮನ ಕೊಟ್ಟು ಹಾಡಿದರೆ ಅದರ ಚಂದವೇ ಬೇರೆ ಎಂದು ಬೆಂಗಳೂರಿನ ಖ್ಯಾತ ಗಾಯಕರು, ಗಾನಗಂಧರ್ವ ಶಶಿಧರ್ ಕೋಟೆ ಅವರು ಹೇಳಿದರು.


ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಮಂಗಳ ಗಂಗೋತ್ರಿಯ ಡಾ. ಯು.ಆರ್. ರಾವ್ (ಹಳೆಯ ಸೆನೆಟ್) ಸಭಾಂಗಣದಲ್ಲಿ ಶುಕ್ರವಾರ ನಡೆದ ಕನಕ ಪುರಸ್ಕಾರ ಕಾರ್ಯಕ್ರಮದಲ್ಲಿ ‘ಕನಕದಾಸರ ಕೀರ್ತನೆಗಳಲ್ಲಿ ಸಂಗೀತಾಂಶಗಳು’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.


ಭಾರತೀಯ ಸಂಸ್ಕೃತಿಗೆ, ಕನ್ನಡ ಸಂಸ್ಕೃತಿಗೆ ಹರಿದಾಸರು ನೀಡಿದ ಕೊಡುಗೆ ಭವ್ಯವಾದದ್ದು. ಆಧ್ಯಾತ್ಮದ ದರ್ಶನ, ಭಕ್ತಿಯ ಜಾಗೃತಿ, ಸಾಮಾಜಿಕ ಸುದಾರಣೆ, ಮಾನವೀಯ ಮೌಲ್ಯಗಳು ಈ ಎಲ್ಲಾ ಅಂಶಗಳು ಹರಿದಾಸರ ಕೀರ್ತನೆಗಳು ಒಳಗೊಂಡಿದೆ. ಭಕ್ತಿ ಶಕ್ತಿ ಅದರಿಂದಲೇ ಮುಕ್ತಿ ಎಂದು ಸಾರಿದವರು ಹರಿದಾಸರು.  ಭಕ್ತಿಯ ಮೂಲಕ ಬದುಕಿನಲ್ಲಿ ಸಾರ್ಥಕತೆಯನ್ನು ಧನ್ಯತೆಯನ್ನು ಕನಕದಾಸರು ಕಂಡಿದ್ದಾರೆ ಎಂದರು.


ಮಂಗಳೂರು ವಿವಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,   ಕನಕ ಸಾಹಿತ್ಯದಲ್ಲಿ ಸತ್ವ ಇದೆ ಸತ್ಯ ಇದೆ.  ಕಾರ್ಯಕ್ರಮ ನಮ್ಮ ಜ್ಞಾನವನ್ನು ವೃದ್ಧಿಗೊಳಿಸುವುದರ ಜೊತಗೆ ಆತ್ಮಸಂತೋಷಕ್ಕೆ ಕಾರಣವಾಗುತ್ತದೆ ಎಂದರು.


ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶ್ರೀ ನಾರಾಯಣಗುರು ಅಧ್ಯಯನ ಪೀಠದ ಸಂಯೋಜಕ ಡಾ.ಗಣೇಶ್ ಅಮೀನ್ ಸುಕುಮಾರ್‍ ನ ಕದಾಸರು ಮತ್ತು ನಾರಾಯಣ ಗುರುಗಳ ಚಿಂತನೆಗಳಲ್ಲಿ ವಿಶ್ವಮಾನವತೆಯ ಆಶಯಗಳಿವೆ ಎಂದರು. ಕನಕ ದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಸ್ವಾಗತಿಸಿದರು. ಆನಂದ ಎಂ ಕಿದೂರು ವಂದಿಸಿದರು. ವಿದ್ಯಾರ್ಥಿನಿ ರಶ್ಮಿ ಕನಕ ಪುರಸ್ಕೃತರ ಪಟ್ಟಿ ವಾಚಿಸಿದರು. ಚಂದನ ಕೆ.ಎಸ್ ನಿರೂಪಿಸಿದರು. 


ಸಮಾರಂಭದಲ್ಲಿ ಪ್ರೌಢಶಾಲಾ ವಿಭಾಗದ ಮೇಧಾ ಉಡುಪ ,ಪಂಚಮಿಕೆ. ಪಾಣೆ ಮಂಗಳೂರು, ತನ್ವಿಕಾವೂರು, ಅನ್ವಿತಟಿ. ನೀರ್ಚಾಲ್ ಪದವಿ ಪೂರ್ವವಿಭಾಗದ ಕೀರ್ತನ ನಾಯ್‌ಗೊ ಕೋಟೆಕಾರು, ಸುಧೀಕ್ಷ ಆರ್ ಸುರತ್ಕಲ್, ಶ್ರೀರಕ್ಷ ಎಸ್.ಎಚ್. ಕೊಣಾಜೆ ಪದವಿ ವಿಭಾಗದ ಶರಣ್ಯಕೆ.ಎನ್ ನಿಟ್ಟೆ, ವಿಭಾ ಶ್ರೀಎಂ. ಎಸ್ ಸುಳ್ಯ,  ಸುಶಾನ್ ಸಾಲಿಯಾನ್ ಪಣಂಬೂರು, ರೋಹಿತ್ ಕಾಮತ್ ನಿಟ್ಟೆ ಸ್ನಾತಕೋತ್ತರ ವಿಭಾಗದ ಶರಣ್ಯ ಮಂಗಳೂರು, ಅಭಿರಾಮ್ಎನ್.ಜಿ ಮಂಗಳೂರು ವಿಶ್ವವಿದ್ಯಾನಿಲಯ ಶ್ರಾವ್ಯ ಬಿ., ಪುತ್ತೂರು, ಶ್ರೀವರದಾಪಿ ಮಂಗಳೂರು ವಿಶ್ವವಿದ್ಯಾನಿಲಯ ಅಧ್ಯಾಪಕ-ಅಧ್ಯಾಪಕೇತರ ವಿಭಾಗದ ಡಾ. ಅನಿತಎಸ್. ಸುಳ್ಯ, ಯಶವಂತ ಮಂಗಳೂರು ವಿಶ್ವವಿದ್ಯಾನಿಲಯ, ಸವಿತ ಮಂಗಳೂರು ವಿವಿ, ಸಾರ್ವಜನಿಕ ವಿಭಾಗ (ಕನಕ ಸಮೂಹ ನೃತ್ಯ ಭಜನೆ) ದ ಗೆಳೆಯರ ಬಳಗ, ಗ್ರಂಥಾಲಯ, ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀರಾಮಾಂಜನೇಯ ಭಜನಾ ತಂಡ, ಗುಡ್ಡುಪಾಲ್, ಕೊಣಾಜೆ, ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು, ಬಾಲಿನಿಮತ್ತುತಂಡ, ಮಂಗಳೂರು ವಿಶ್ವವಿದ್ಯಾನಿಲಯ ಇವರಿಗೆ ಕನಕ ಪುರಸ್ಕಾರ ನೀಡಿ ಗೌರವಿಸಲಾಯಿತು.


ನಗದು, ಕನಕಪುರಸ್ಕಾರ, ಪ್ರಮಾಣಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಗಾಯಕರಿಂದ ಕನಕ ಕೀರ್ತನ ಪ್ರಸ್ತುತಿ ನಡೆಯಿತು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top