ಬಿಜೆಪಿ ಮಾಡಿಸಿದ್ದು ಎಂದು ಹೇಳಿದ ಕಾಂಗ್ರೆಸ್ ನಾಯಕರು ಎಲ್ಲಿದ್ದಾರೆ?
ಶಾಸಕ ಡಾ. ಭರತ್ ಶೆಟ್ಟಿ ಪ್ರಶ್ನೆ
ಸುರತ್ಕಲ್: ಮಂಗಳೂರಿನಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕುಖ್ಯಾತ ಉಗ್ರ ಸಂಘಟನೆ ಐಸಿಸ್ ತಾನು ಮಾಡಿದ್ದಾಗಿ ಹೇಳಿದ್ದು ಅತ್ಯಂತ ಆತಂಕದ ವಿಚಾರ. ಅದರೆ ಈ ಹಿಂದೆ ಬಿಜೆಪಿ ಗಿಮಿಕ್ ಎಂದು ಹೇಳಿದ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಈಗೆಲ್ಲಿದ್ದಾರೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತ ಪಡಿಸಿದರು.
ಚುನಾವಣೆ ಬಂದಾಗ ಬಿಜೆಪಿ ಈ ರೀತಿ ಮಾಡುತ್ತದೆಎಂದು ಹೇಳುದ ಕಾಂಗ್ರೆಸ್ ಬೇಷರತ್‌ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿರುವ ಶಾಸಕರು, ತನಿಖೆಯ ಮುನ್ನವೇ ಬಾಲಿಶ ಹೇಳಿಕೆ ನೀಡಿದ ಪಕ್ಷ ಇದೀಗ ನಗೆ ಪಾಟಲಿಗೆ ಒಳಗಾಗಿದೆ.
ಎನ್‌ಐಎ ಈ ಪ್ರಕರಣ ಭೇದಿಸಿ ಸಮರ್ಪಕ ಕ್ರಮ ಕೈಗೊಳ್ಳಲು ಶಕ್ತವಾಗಿದೆ. ಭಯೋತ್ಪಾದಕ ಕೃತ್ಯ ಬುಡ ಸಹಿತ ಕಿತ್ತುಹಾಕಲು ಬಿಜೆಪಿ ಸರಕಾರ ಬದ್ದವಾಗಿದೆ ಎಂದು ಹೇಳಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ