ಸುರತ್ಕಲ್: “ನಮ್ಮ ಕಾಲೇಜು ಮಕ್ಕಳಲ್ಲಿ ಪಠ್ಯ ಹಾಗೂ ಪಠ್ಯೇತರ ಅಭಿವೃದ್ಧಿಯನ್ನು ಕಾಣಲು ಸಾಕಷ್ಟು ನಿರ್ಣಯಗಳನ್ನು ತೆಗೆದುಕೊಂಡಿದೆ” ಎಂದು ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯರಾದ ಪಿ. ಕೃಷ್ಣಮೂರ್ತಿ ನುಡಿದರು.
ವಿದ್ಯಾವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿ ಇಲ್ಲಿ ನಡೆದ ಗೋವಿಂದ ದಾಸ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾ. 17 ರಿಂದ 23 ರವರೆಗೆ ನಡೆದ ಶಿಬಿರದಲ್ಲಿ, ಉದ್ದೇಶದಂತೆ ಕೊಳುವಾಯಿಲ್ ರಸ್ತೆ ಬಳಿಯಿಂದ ಚಕ್ಲಾಡಿ ಹಳೆಯಂಗಡಿವರೆಗೆ 3 ಫೀಟ್ ಅಗಲದ ಎರಡು ಊರುಗಳನ್ನು ಒಗ್ಗೂಡಿಸುವ ಸುದೀರ್ಘ ತೋಡನ್ನು ಸಮುದ್ರದ ಉಪ್ಪು ನೀರು ಗದ್ದೆಗೆ ಸೇರದಂತೆ ತಯಾರು ಮಾಡಿಕೊಡಲಾಯಿತು ಹಾಗೂ ವಿದ್ಯಾವಿನಾಯಕ ಯುವಕ ಮಂಡಲದ ಕಾಂಪೌಂಡ್ ಗೋಡೆಗೆ ವರ್ಲಿ ಆರ್ಟ್ ಬಿಡಿಸಿ ಚಂದಗಾಣಿಸಲಾಯಿತು.
ವಿದ್ಯಾರ್ಥಿಗಳ ಈ ನಿಸ್ವಾರ್ಥ ಸೇವೆಗೆ ಊರಿನವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರೋಪ ಸಮಾರಂಭವು ಯಶಸ್ವಿಯಾಗಿದ್ದು ಮುಖ್ಯ ಅತಿಥಿಗಳಾಗಿ ವಿದ್ವಾನ್ ಚಂದ್ರಶೇಖರ ನಾವುಡ, ಲಯನ್ಸ್ ವೆಂಕಟೇಶ್ ಹೆಬ್ಬಾರ್, ಲಯನ್ ರಶ್ಮಿ ಆರ್, ಲೀಲಾಧರ್ ಶೆಟ್ಟಿ ಭಾಗವಹಿಸಿದ್ದರು. ಯೋಜನಾಧಿಕಾರಿಗಳಾದ ಶ್ರೀಮತಿ ಅಕ್ಷತಾ ಶೆಟ್ಟಿ ಹಾಗೂ ಶ್ರೀಮತಿ ದಾಯಸುವರ್ಣ ಆಯೋಜಿಸಿದರು. ಸಹ ಶಿಬಿರಾಧಿಕಾರಿಗಳಾದ ಪ್ರಶಾಂತ್ ಎಂ.ಡಿ ಹಾಗೂ ವಿನೋದ್ ಕೃಷ್ಣಾಪುರ ಮತ್ತು ವಿದ್ಯಾರ್ಥಿ ಕಾರ್ಯದರ್ಶಿಗಳಾದ ಸ್ವಾತಿ ಭಟ್, ಯು.ಡಿ. ಅನೀಶಾಶ್ರೀ, ಪ್ರೀತೇಶ್, ಪ್ರಯಾಗ್ ಪಿ ನಾಯ್ಕ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


