ಅಂದು ಮೂಡಿತು ಆ ಪ್ರಶ್ನೆ: ಎಲ್ಲಿದ್ದಾನೋ ಆ ಹರಿ....!

Upayuktha
0

ಒಂದು ದಿನ ನಾನು ಹೋಟೆಲ್ ನಲ್ಲಿ ಬಿಸಿ ಬಿಸಿ ಪಲಾವ್ ತಿನ್ನುತ್ತಾ ಕುಳಿತಿದ್ದೆ. ಮುಂದೆ ಒಂದು ಮಗು ಅದರ ಪೋಷಕರೊಂದಿಗೆ ಆಡುತಿತ್ತು, ಅದನ್ನು ಕಂಡ ಹಾಸ್ಟೆಲ್ ನಲ್ಲಿದ್ದ ನನಗೆ ನನ್ನ ತಂದೆ ತಾಯಿಯೊಂದಿಗೆ ಕಳೆದ ಕ್ಷಣಗಳು ನೆನಪಿಗೆ ಬಂದು ಕಣ್ತುಂಬಿ ಕೊಂಡಿತ್ತು. ಆಚೆಯಿಂದ ಟಿಪ್ಪರ್ ಗಾಡಿ ರಭಸವಾಗಿ ಬರುವುದನ್ನು ಆ ಮಗು ನೋಡದೆ ರಸ್ತೆಯ ಮಧ್ಯದಲ್ಲಿ ನಿಂತಿತ್ತು. ಅದನ್ನು ಕಂಡ ಮಗುವಿನ ತಂದೆ ಮಗುವನ್ನು ಕಾಪಾಡಲೆಂದು ರಸ್ತೆಗೆ ಇಳಿದ ಅಷ್ಟರಲ್ಲಿ ಆ ಟಿಪ್ಪರ್ ಗಾಡಿಯ ಚಾಲಕ ಯಮದೂತನಂತೆ ಬಂದು ಇಬ್ಬರ ಪ್ರಾಣವನ್ನು ತೆಗೆದುಕೊಂಡನು. ಅಲ್ಲಿದ್ದ ನನಗೆ ಅವರ ಪ್ರೀತಿಗೆ ನನ್ನ ಕಣ್ಣೇ ಬಿದ್ದಿತ್ತೇನೋ ಎಂದು ಅಳಲಾರಂಭಿಸಿದೆ. ಅದರಲ್ಲಿ ಉಳಿದದ್ದು ಒಬ್ಬಳೇ ಹೆಣ್ಣು ಮಗಳು. ಅವಳು ಆತಂಕದಲ್ಲಿ ಅಲ್ಲಿಯೇ ಕುಸಿದು ಬಿದ್ದಳು. ಅಲ್ಲಿದ್ದ ಆಸುಪಾಸಿನ ಜನ  ಆಂಬುಲೆನ್ಸ್ ಗೆ ಕಾಲ್ ಮಾಡಿದರು.


ಕೆಲವರು ಅಲ್ಲಲ್ಲಿ "ಪಾಪ ಇವ್ಳಿಗೆ ಹೀಗಾಗಬಾರದಿತ್ತು, ದೇವ್ರು ಕೆಲವರ ಜೀವನದಲ್ಲಿ ಎಷ್ಟು ಕಟುಕ ಅಲ್ವಾ, ಈಚೆ ತಂದೆ ತಾಯಿನೂ ಇಲ್ಲ ಆಚೆ ಗಂಡು ಮಗುವು ಇಲ್ಲ" ಅಂತ ಮಾತಾಡ್ಕೊಳ್ತಿದ್ರು. ನನಗೆ ಕುತೂಹಲ ತಾಳಲಾರದೆ ಏನಾಯ್ತು ಅಂತ ಕೇಳಿಯೇ ಬಿಟ್ಟೆ, ಆಗ ತಿಳಿದದ್ದು ಅವಳು ಒಂದು ಮುಸ್ಲಿಂ ಸಮುದಾಯದ ಹುಡುಗಿ, ಅವಳ ಗಂಡ ಹಿಂದೂ ಧರ್ಮದವನು ಇಬ್ಬರು ಕಾಲೇಜಿನಲ್ಲಿ ಪ್ರೀತಿಸಿದರು. ಅದನ್ನು ಮನೆಯವರು ಒಪ್ಪಿಕೊಳ್ಳದೆ ಇವರು ಓಡಿಹೋಗಿ ವಿವಾಹವಾದರೂ ಇದರಿಂದ ಇಬ್ಬರ ಮನೆಯಲ್ಲಿಯೂ ತಲ್ವಾರ್ ಹಿಡಿದು ಜಗಳವೇಯಾಯಿತು. ಇವರಿಬ್ಬರು ಈ ಗಲಾಟೆಯನ್ನು ತಪ್ಪಿಸಿ ಅವರೆಲ್ಲರಿಂದ ದೂರ ಹೋದರು. ಇದರಿಂದ ಹೊರಬರಲಾರದೆ ಗಂಡ ಕುಡಿಯುವ ಚಟ ಬೆಳೆಸಿಕೊಂಡನು, ಕುಡಿದು ಕುಡಿದು ಮನೆಗೆ ಬಂದು ಹೆಂಡತಿಯನ್ನು ಹೊಡೆಯುತ್ತಿದ್ದ. ಇವಳು ಅದನ್ನು ತಪ್ಪಿಸಿಕೊಳ್ಳಲು ಆಚೆ ಈಚೆ ಮನೆಗೆ ಓಡಿ ಹೋಗುತ್ತಿದ್ದಳು, ಆದರೂ ಅವನು ಹುಡುಕಿಕೊಂಡು ಬಂದು ಹೊಡೆಯುತ್ತಿದ್ದ.


ಐದು ವರ್ಷಗಳ ನಂತರ ಒಂದು ಮಗುವಾಯಿತು, ಈ ಮಗುವಿನಲ್ಲಿ ಇಬ್ಬರು ಸಂತೋಷ ಕಂಡರು, ಅವಳ ಗಂಡನು ಕುಡಿಯುವುದನ್ನು ನಿಲ್ಲಿಸಿದ, ಇದೇ ಖುಷಿಯಲ್ಲಿ ಮೂರು ವರ್ಷ ಕಳೆದರೂ ಆದರೆ ಆ ದೇವರು ಅವಳ ಸಂತೋಷವನ್ನು ಕಸಿದುಕೊಂಡ ಇಂಥವರ ಪರಿಸ್ಥಿತಿ ಕಂಡಾಗ "ಎಲ್ಲಿದ್ದಾನೆ ಆ ಹರಿ" ಎನಿಸುತ್ತದೆ.

-ನೇಹಾ ಕೊಠಾರಿ

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top