ಅಭಿಮತ: ಬಂಟರ ಬೇಡಿಕೆ ನ್ಯಾಯಯುತವಾಗಿದೆ

Upayuktha
0

ಕೆಲವರಿಗೆ ಅನ್ನಿಸಿರಬಹುದು, ಇದುವರೆಗೆ ಯಾವುದಕ್ಕೂ ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸದ ಬಂಟರು ಇದಕ್ಕಿದ್ದ ಹಾಗೆ ಎರಡು ಪ್ರಮುಖ ಬೇಡಿಕೆಗಳನ್ನು ಚುನಾವಣಾ ಸಂದರ್ಭದಲ್ಲಿ ಮುಂದೆ ಇಟ್ಟಿದ್ದಾರಲ್ಲಾ? ಅನ್ನುವ ಪ್ರಶ್ನೆ ಕಾಡುತ್ತಿರ ಬಹುದು. ಈಗ ಮುಂದಿಟ್ಟರುವ ಬೇಡಿಕೆ ಸರಿ ಸುಮಾರು 3 ವರುಷಗಳ ಹಿಂದೇನೆ ಸರ್ಕಾರದ ಮುಂದಿಟ್ಟ ಬೇಡಿಕೆಗಳು. ಅವುಗಳೆಂದರೆ: 1.ಬಂಟರಿಗೆ 2ಎ ವಗ೯ದ ಮೀಸಲಾತಿ ನೀಡ ಬೇಕು. 2.ಬಂಟರಿಗೊಂದು ನಿಗಮ ಸ್ಥಾಪನೆ ಮಾಡಬೇಕು.


ಈ ಎರಡು ಬೇಡಿಕೆಗಳನ್ನು ಜಾಗತಿಕ ಬಂಟರ ಸಂಘ ಮತ್ತು ಜಿಲ್ಲಾ ಮಟ್ಟದ ಬಂಟರ ಸಂಘಗಳು ರಾಜ್ಯದ ಮುಖ್ಯಮಂತ್ರಿಗಳನ್ನು ಸಚಿವರುಗಳನ್ನು ಜಿಲ್ಲಾ ಶಾಸಕರುಗಳನ್ನು ಸಂಸದರನ್ನು ವಿನಂತಿಸಿಕೊಂಡಾಗ ಖಂಡಿತವಾಗಿಯೂ ನಿಮ್ಮ ಬೇಡಿಕೆ ನ್ಯಾಯಯುತ ವಾದದ್ದು ಅನ್ನುವ ಭರವಸೆಯ ಮಾತಿನಲ್ಲಿಯೇ ವಾಪಸು ಕಳುಹಿಸಿದ್ದರು. ಸರ್ಕಾರದ ಭರವಸೆ ಮಾತನ್ನು ನಂಬಿದ ಬಂಟರ ಸಂಘವು ಹತ್ತು ಹಲವು ಬಂಟರ ಸಭೆ ಸಮಾರಂಭದಲ್ಲಿ ಸರ್ಕಾರ ಖಂಡಿತವಾಗಿಯೂ ನಮಗೆ ನ್ಯಾಯ ಒದಗಿಸುತ್ತದೆ  ಅನ್ನುವ ಮಾತುಗಳನ್ನು  ಹೇಳುತ್ತಾ ಬಂದಿದ್ದರು. ಆದರೆ ಭರವಸೆ ನೀಡಿದ ಸರ್ಕಾರದ ಅವಧಿ ಮುಗಿಯುತ್ತಾ ಬಂದರೂ ಇದುವರೆಗೆ ಯಾವುದೇ ಸುದ್ದಿ ಚಕಾರವಿಲ್ಲದೆ ಬಾಗಿಲು ಹಾಕುವ ಪರಿಸ್ಥಿತಿಯಲ್ಲಿ ಸರಕಾರ ಬಂದು ನಿಂತಿದೆ.


ಹಾಗಾದರೆ ಈ ಮೀಸಲಾತಿ ನಮಗೆ ಬೇಡವೇ? ಖಂಡಿತವಾಗಿಯೂ ಬೇಕು. ಈಗ ನನ್ನಂತಹ ಪ್ರಾಯಸ್ಥರಿಗೆ ಇದರ ಅಗತ್ಯವಿಲ್ಲ. ಆದರೆ ಬಂಟರ ಅದೇಷ್ಟೊ ಮಂದಿ ಬಡ ಮಧ್ಯಮ ವಗ೯ದ ವಿದ್ಯಾರ್ಥಿಗಳು ಶಿಕ್ಷಣ ಉದ್ಯೋಗಕ್ಕಾಗಿ ಪಡುವ ಕಷ್ಟ ನಾನು ಕಣ್ಣಾರೆ ನೇೂಡಿದ್ದೇನೆ. ಇಂತಹ ಮೀಸಲಾತಿ ಒಂದು ಸೌಲಭ್ಯ ಸಿಕ್ಕಿ ಬಿಟ್ಟರೆ ಬಂಟರ ಪ್ರತಿಭಾವಂತ ಬಡ ಮಧ್ಯಮ ವಗ೯ದ ಯುವಕ ಯುವತಿರು ಉತ್ತಮ ಕಾಲೇಜುಗಳಲ್ಲಿ ಪ್ರವೇಶಾತಿ ಸಿಗ ಬಹುದು ವಿದ್ಯಾರ್ಥಿ ವೇತನವು ಪಡೆಯಲು ಸಾಧ್ಯವಾಗುತ್ತದೆ. ಮಾತ್ರವಲ್ಲ ಸರ್ಕಾರ ನಡೆಸುವ ಸ್ಪಧಾ೯ತ್ಮಕ ಪರೀಕ್ಷೆಗಳಲ್ಲಿಯೂ ಯಶಸ್ವಿ ಪಡೆಯಲು ಸಾಧ್ಯವಿದೆ. ಈ ಕಾರಣಕ್ಕಾಗಿಯೇ ರಾಜ್ಯದ ವಿವಿಧ ಜಾತಿ ಉಪ ಜಾತಿಗಳು ತಮ್ಮ ಶಾಸಕರ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿ ಪ್ರಯೇೂಜನ ಪಡೆದು ಕೊಳ್ಳುವಲ್ಲಿ ಸಫಲರಾಗಿದ್ದಾರೆ. ಆದರೆ ನಮ್ಮ ಬಂಟರ ಸಮುದಾಯ ಶಾಸಕರು ಮಾತ್ರ ನಾವು ಜಾತ್ಯತೀತರು ಹಿಂದುತ್ವವೇ ನಮ್ಮ ಉಸಿರು ಅಂದುಕೊಂಡು ಬಂಟರನ್ನು ಭ್ರಮಾ ಲೇೂಕದಲ್ಲಿ ತಿರುಗಿಸುತ್ತಿದ್ದಾರೆ.


ಅಂದರೆ ಬಂಟರ ಶಾಸಕರು ಬರೇ ಬಂಟರಿಗಾಗಿ ಕೆಲಸ ಮಾಡ ಬೇಕು ಅನ್ನುವುದು ಶುದ್ಧ ತಪ್ಪು. ಆದರೆ ರಾಜ್ಯದಲ್ಲಿ  ಉಳಿದ ಎಲ್ಲಾ ಜಾತಿಯವರು ಕನಿಷ್ಠ ತಮ್ಮ ಜಾತಿಯವರಿಗೆ ತಮ್ಮಿಂದ ಕೊಡ ಬೇಕಾದ ನ್ಯಾಯಕ್ಕಾಗಿ ಪ್ರಯತ್ನ ಮಾಡುತ್ತಿರುವಾಗ ಅವಿಭಜಿತ ದ.ಕ.ಜಿಲ್ಲಾ 5 ಮಂದಿ ಬಂಟ ಸಮಾಜದ ಶಾಸಕರು ಓವ೯ ಸಂಸದರು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಅನ್ನುವ ಮನಸ್ಥಿತಿ ನೇೂಡಿದರೆ ಇವರಿಗೆ ಬಂಟರ ಮತದಾರರ ಮತ ಬೇಡವೇ ಅನ್ನುವ ಬೇಸರ ಬಂಟರಲ್ಲಿ ಮೂಡುವುದು ಸಹಜ ತಾನೇ. ಚುನಾವಣಾ  ಕಾಲದಲ್ಲಿ ಪ್ರತಿ ಕ್ಷೇತ್ರಗಳಲ್ಲಿ ಜಾತಿ ಲೆಕ್ಕಾಚಾರ ಹಾಕುವ ರಾಜಕೀಯ ಪಕ್ಷಗಳು ಗಳು ಚುನಾವಣೆ ಗೆದ್ದ ಮೇಲೆ ಅವರ ಮೂಲ ಭೂತ ಬೇಡಿಕೆಗಳಿಗೂ ಕಿಂಚಿತ್ತೂ ಧ್ವನಿ ಸೇರಿಸದೇ ಇದ್ದರೆ ಹೇಗೆ? ಒಂದು ವೇಳೆ ಈ ಬಿಜೆಪಿ ಸರ್ಕಾರ ಯಾವುದೇ ಜಾತಿಗೆ ಮೀಸಲಾತಿ ಯಾಗಲಿ ನಿಗಮವಾಗಲಿ ಕೊಟ್ಟಿಲ್ಲ. ಅಥವಾ ಕೊಡುವ ಧೇೂರಣೆ ಹೊಂದಿಲ್ಲ ಅಂದರೆ ಸರಿ. ಆಗ ಬಂಟರಾಗಲಿ ಬಿಲ್ಲವರಾಗಲಿ ಇದನ್ನು ಕೇಳುವ ಪ್ರಶ್ನೆ ಉದ್ಭವಿಸುವುದಿಲ್ಲ. ಜಾತಿ ಲೆಕ್ಕಾಚಾರದಲ್ಲಿ ಜಾಸ್ತಿ ಇರುವ ಜಾತಿಗಳಿಗೆ ಮೀಸಲಾತಿ ನಿಗಮ ವಿಶ್ವವಿದ್ಯಾಲಯ ಎಲ್ಲವನ್ನೂ ರಾತ್ರಿ ಬೆಳಗಾಗುವುದೊರೊಳಗೆ ನೀಡುತ್ತೀರಿ ಅದೇ ಪಾಪದ ಕಡಿಮೆ ಸಂಖ್ಯೆಯ ಬಂಟರು ಕೇಳಿದರೆ ಅದು ಹಿಂದುತ್ವದ ಮತಕ್ಕೆ ಪೆಟ್ಟು ಎಂದು ಬೊಬ್ಬೆ ಹೊಡೆಯುವ ಬಿಜೆಪಿಯ ಅಭಿಮಾನಿಗಳು ಇದ್ದಾರೆ ಅನ್ನುವುದು ಆಶ್ಚರ್ಯದ ಮಾತು.


ಒಂದಂತೂ ಸತ್ಯ ನಮಗೆ ಜಾತಿ ರಾಜಕೀಯ ಮುಖ್ಯವಲ್ಲ ಬದಲಾಗಿ ಬಂಟರ ಬಡಮಧ್ಯಮ ವಗ೯ಕ್ಕೆ ನಮ್ಮ ಸರ್ಕಾರದಿಂದಲೇ ಒಂದಿಷ್ಟು ಪ್ರಯೇೂಜನ ಸಿಗಬೇಕು ಅನ್ನುವುದೇ ಈ ಬಂಟರ ಚುನಾವಣಾ ಕಾಲದ ಪ್ರತಿಧ್ವನಿ ಯಾಗಿ ಹೊರ ಬಂದಿದೆ. ಹೊರತು ಬಂಟರಿಗೆ ಈ ಪಕ್ಷ ರಾಜಕೀಯ ಬೇಡವೇ ಬೇಡ ಅನ್ನುವ ಜಾಯಮಾನದವರು. ಈ ನಿಟ್ಟಿನಲ್ಲಿ ಸವ೯ ವ್ಯಾಪಿಯಾಗಿ ತಮ್ಮ ಸ್ವ ಸಾಮಥ್ಯ೯ದಲ್ಲಿ ಬದುಕನ್ನು ಕಟ್ಟಿ ಕೊಂಡಿರುವ ಬಂಟ ಬಂಧುಗಳು ತಮ್ಮ ಅಂತಸ್ಥು ಸಿರಿವಂತಿಕೆ ಗರಿವಂತಿಕೆ ವೈಮನಸ್ಸು ಬದಿಗಿಟ್ಟು ಈ ಎರಡು ಪ್ರಮುಖ ಬೇಡಿಕೆಗಳನ್ನು ಪಡೆಯುವಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ ಅನ್ನುವುದೇ ನಮ್ಮ ಹೃದಯಾಂತರಾಳದ ಆಶಯದ ಧ್ವನಿ.


- ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top