ಮಂಗಳೂರು : ಇಲ್ಲಿನ ವೆನ್‍ಲಾಕ್ ಜಿಲ್ಲಾ ಸಂಚಾರಿ ನೇತ್ರ ಘಟಕದಿಂದ ವಿವಿಧೆಡೆ ನೇತ್ರ ಪರೀಕ್ಷೆ ನಡೆಯಲಿದೆ.
ಸಂಚಾರಿ ನೇತ್ರ ಘಟಕವು ಮಾ.3ರ ಬೆಳಿಗ್ಗೆ 8 ಗಂಟೆಗೆ ಪುತ್ತೂರು ತಾಲೂಕಿನ ನೆಲ್ಯಾಡಿಯ ಕಾಂಚನ ಸ್ಕೂಲ್‍ನಿಂದ ಹೊರಡುವುದು, ಮಾ.7ರಂದು ಪುತ್ತೂರಿನ ರಾಮ ಕೃಷ್ಣ ಸೇವಾ ಸಮಾಜದಿಂದ ಬೆಳಿಗ್ಗೆ 8 ಗಂಟೆಗೆ ಹೊರಡುವುದು.
ಮಾ.10ರ ಅಪರಾಹ್ನ 2.30ಕ್ಕೆ ಫಲಾನುಭವಿಗಳ ಬಿಡುಗಡೆ, ಮಾ.24ರಂದು ವಿಟ್ಲದ ಕೊಡಂಗಾಯಿಯಲ್ಲಿ ಬೆಳಿಗ್ಗೆ 8ಕ್ಕೆ ಹೊರಡುವುದು, ಮಾ.27ರಂದು ಫಲಾನುಭವಿಗಳ ಬಿಡುಗಡೆ ಹಾಗೂ ಬಂಟ್ವಾಳ ತಾಲೂಕಿನ ಪೆರ್ವಾಯಿ ವಿಟ್ಲದಿಂದ ಬೆಳಿಗ್ಗೆ 8ಕ್ಕೆ ಹೊರಡಲಿದೆ ಎಂದು ವೆನ್‍ಲಾಕ್ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ