ಪುತ್ತೂರು: ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟ- ಅಲ್ಟಿಮೇಟ್ ಸ್ಫೋರ್ಟ್ಸ್‌ ಕ್ಲಬ್‍ಗೆ ಪ್ರಥಮ ಪ್ರಶಸ್ತಿ

Upayuktha
0

 


ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಖೊ-ಖೊ ಅಸೋಸಿಯೇಷನ್ ಇದರ ಸಹಕಾರದೊಂದಿಗೆ ಅಲ್ಟಿಮೇಟ್ ಸ್ಪೋರ್ಟ್ಸ್‌ ಕ್ಲಬ್ ಪುತ್ತೂರು ಮತ್ತು ವಿವೇಕಾನಂದ ಕಾಲೇಜು ಸ್ವಾಯತ್ತ ಪುತ್ತೂರು, ದೈಹಿಕ ಶಿಕ್ಷಣ ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ)  ಇದರ ಸಹಯೋಗದೊಂದಿಗೆ ಮಾರ್ಚ್ ಭಾನುವಾರದಂದು ವಿವೇಕಾನಂದ ಕಾಲೇಜು ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಮತ್ತು ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪುರುಷರ ಲೀಗ್ ಮಾದರಿಯ ಖೊ ಖೊ ಚಾಂಪಿಯನ್‌ಶಿಪ್ ಸೀಸನ್ 1 2023 ನಡೆಯಿತು.


ಈ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 12 ತಂಡಗಳು ಭಾಗವಹಿಸಿದ್ದು, ಪ್ರಥಮ ಬಹುಮಾನವನ್ನು ಅಲ್ಟಿಮೇಟ್ ಸ್ಪೋರ್ಟ್ಸ್‌ ಕ್ಲಬ್ ಪುತ್ತೂರು ತಂಡ ಪಡೆದುಕೊಂಡಿದ್ದಾರೆ. ದ್ವಿತೀಯ ಬಹುಮಾನ ಜಿ ಎಫ್ ಜಿ ಸಿ ವಾಮದ ದವು ತಂಡ ಪಡೆದುಕೊಂಡಿದ್ದಾರೆ. ತೃತೀಯ ಬಹುಮಾನ ವಿವೇಕಾನಂದ ಕಾಲೇಜು ಪುತ್ತೂರು ತಂಡ ಪಡೆದಿದ್ದು, ಚತುರ್ಥ ಬಹುಮಾನವನ್ನು ಮಂಗಳೂರು ತಂಡ ಪಡೆದುಕೊಡಿದ್ದಾರೆ. 5ನೇ ಸ್ಥಾನ ಜಿ ಎಫ್ ಜಿ ಸಿ ಉಪ್ಪಿನಂಗಡಿ ತಂಡ, 6 ನೆ ಸ್ಥಾನ ಕೋಟಿ ಚೆನ್ನಯ ಕೊಕ್ಕೆಡಿ,7 ನೆ ಸ್ಥಾನ ಎಸ್‍ಆರ್ ಸಿ ರಾಮಕುಂಜ, 8ನೇ ಸ್ಥಾನ ಪೋಲ್‍ ಅಟ್ಟಾಕರ್ಸ್ ಪುತ್ತೂರು ತಂಡ ಗಳಿಸಿದ್ದಾರೆ.


"ವೈಯಕ್ತಿಕ ಬಹುಮಾನ ಗರಿಮೆ"

ಅತ್ಯುತ್ತಮ ಚೇಸರ್ ಬೆಂಗಳೂರು ತಂಡದ ಚಂದು, ಅತ್ಯುತ್ತಮ ರಕ್ಷಣಾ ಆಟಗಾರ ಅಲ್ಟಿಮೇಟ್  ಸ್ಫೋರ್ಟ್ಸ್‌ ಕ್ಲಬ್ ಪುತ್ತೂರಿನ ಕಾರ್ತಿಕ್‍ ಎನ್, ಅತ್ಯುತ್ತಮ ಆಲ್ರೌಂಡರ್ ಜಿಎಫ್‍ಜಿಸಿ ವಾಮದ ಪದವು ತಂಡದ ಸುಹಾಸ್, ಪಂದ್ಯಾವಳಿಯ ಶಿಸ್ತಿನ ಆಟಗಾರನಾಗಿ ವಿವೇಕಾನಂದ ಕಾಲೇಜ್ ಪುತ್ತೂರು ತಂಡದ ಪುನೀತ್ ಮುಡಿಗೇರಿಸಿಕೊಂಡಿದ್ದಾರೆ. 


ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪುತ್ತೂರಿನ ಖೋ-ಖೋ ಕ್ರೀಡೆಯನ್ನು ಬೆಳೆಸಿದ ಶಿಕ್ಷಕರಾದ ಮಾಧವಗೌಡ, ಜಗನ್ನಾಥರೈ, ವಸಂತಕುಮಾರ್, ಬಿ.ಕೆ ಮಾಧವ, ಗೀತಾಮಣಿ,ದಾಮೋದರ್, ಹರಿಣಾಕ್ಷಿ, ಎಸ್.ಡಿ. ರತ್ನಾವತಿ, ಡಾ.ಜ್ಯೋತಿಕುಮಾರಿ ಸೇಸಪ್ಪಗೌಡ, ರವಿಶಂಕರ್ ವಿ.ಎಸ್ ಮತ್ತು ಯತೀಶ್‍ ಕುಮಾರ್ ಬಿ ಇವರನ್ನು ಸನ್ಮಾನಿಸಲಾಯಿತು.


ಸಮಾರೋಪ ಸಮಾರಂಭದ ಅದ್ಯಕ್ಷತೆಯನ್ನು ವಿವೇಕಾನಂದ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್ ವಹಿಸಿ ಮಾತನಾಡಿ ವಿವೇಕಾನಂದ ಕಾಲೇಜು ಹಲವಾರು ವರುಷಗಳಿಂದ ಖೋ ಖೋ ಸೇರಿದಂತೆ ಹಲವಾರು ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದೆ ಅದರಲ್ಲೂ ಗ್ರಾಮೀಣ ಭಾಗದ ಕ್ರೀಡೆಗಳಿಗೆ ಹೆಚ್ಚಿನ ಆಸಕ್ತಿಯನ್ನು ನೀಡಿ ಕಾಲೇಜು ಪ್ರೋತ್ಸಾಹಿಸಿದೆ ಎಂದರು. 


ಕಾರ್ಯಕ್ರಮದಲ್ಲಿ ಪುತ್ತೂರಿನ ಶಾಸಕ ಸಂಜೀವ ಮಠಂದೂರು, ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಭಜರಂಗದಳದ ಪ್ರಾಂತ್ಯ ಸಹ ಸಂಯೋಜಕ ಮುರಳಿ ಕೃಷ್ಣ ಹಂಸತಡ್ಕ, ಪುತ್ತೂರು ವಕೀಲ ಮಚ್ಚಿಮಲೆ ವಿರೂಪಾಕ್ಷ, ಮುಳಿಯ ಜಿಮ್‍ನ ಫಿಟ್ನೆನೆಸ್‍ಟ್ರೈನರ್ ಶ್ರೀ ಕೃಷ್ಣ, ರಾಣಿಬೆನ್ನೂರಿನ ಸ.ಪ.ಪೂ ಕಾಲೇಜಿನ ಉಪನ್ಯಾಸಕ ಚಂದು ನಾಯ್ಕ, ಬೆಟ್ಟಂಪಾಡಿ ಸ.ಪ್ರ.ದ ಕಾಲೇಜಿನ ದೈ.ಶಿ.ನಿ ಡಾ.ಪೊಡಿಯ, ಮುಡಿಪು ಸ.ಪ್ರ.ದ ಕಾಲೇಜಿನ ದೈ.ಶಿ.ನಿ ಮಹಮ್ಮದ್‍ರಫೀಕ್ ಕೆ ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಬಾಲಕೃಷ್ಣ ಪೋದ್ರ್ವಾಲ್ ನಿರ್ವಹಿಸಿದರು.


ಉದ್ಘಾಟನೆ

ಬೆಳಿಗ್ಗೆ ಪಂದ್ಯಾಟದ ಉದ್ಘಾಟನೆಯನ್ನು ಉಪ್ಪಿನಂಗಡಿ ಎಸ್.ಬಿ.ಐಯ ನಿವೃತ್ತ ಉದ್ಯೋಗಿ ಜಿ.ಕೆ ಪೂವಪ್ಪ ಮತ್ತು ಹಳೇನೇರಂಕಿಯ ದೈವ ನರ್ತಕ ಓಬಯ್ಯ ಪರವನ್ ದೀಪ ಬೆಳಗಿಸಿ, ತೆಂಗಿನ ಕಾಯಿ ಒಡೆಯುವುದರ ಮೂಲಕ ನೆರವೆರಿಸಿದರು. 


ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರಿನ ಕಾರ್ಯದರ್ಶಿಯಾದ ಡಾ. ಕೆ ಎಂ ಕೃಷ್ಣ ಭಟ್‍ ಅದ್ಯಕ್ಷತೆ ವಹಿಸಿ ಮಾತನಾಡಿ ಈ ಪಂದ್ಯಾಟದ ಕಲ್ಪನೆ ಒಳ್ಳೆಯ ಪ್ರಯತ್ನ. ಈ ಆಟಕ್ಕೆ ಪರಿಶ್ರಮ ಹಾಗೂ ಸಾಮಥ್ರ್ಯಬೇಕು. ಒಗ್ಗಟ್ಟಿನಲ್ಲಿ ಕೆಲಸ ಮಾಡುವ ಮೂಲಕ ಏನನ್ನು ಸಾಧಿಸಬಹುದು ಎಂಬುದನ್ನು ಈ ಆಟದಲ್ಲಿ ನಾವು ಕಾಣಬಹುದು ಎಂದು ಹೇಳಿದರು.


ಉದ್ಘಾಟನಾ ಸಮಾರಂಭಕ್ಕೆ  ಮುಖ್ಯ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ವಿಷ್ಣು ಗಣಪತಿ ಭಟ್ ಮಾತನಾಡಿ ಖೊ ಆಕರ್ಷಣೀಯ ಆಟ. ಇದನ್ನುಆಡುವುದರಿಂದ ನಮ್ಮಲ್ಲಿ ಚಾಕಚಕ್ಯತೆ ಉಂಟಾಗುತ್ತದೆ. ನಾವು ನಮ್ಮ ದೇಶೀಯ ಆಟಗಳಿಗೆ ಹೆಚ್ಚು ಆದ್ಯತೆ ಕೊಡುವುದು ಅಗತ್ಯ. ಹಳ್ಳಿ ಹಳ್ಳಿಗಳಲ್ಲಿ ಈ ಆಟವನ್ನು ಪ್ರಾರಂಭಿಸಬೇಕು ಎಂದರು.


ಈ ಸಂದರ್ಭದಲ್ಲಿ ಖೋ-ಖೋದಲ್ಲಿ ಎನ್.ಎಸ್.ಎನ್.ಐ.ಎಸ್‍ ಕೋಚಿಂಗ್‍ಡಿ ಪ್ಲೋಮೋದಲ್ಲಿ ದೇಶದಲ್ಲಿ ಪ್ರಥಮ ಸ್ಥಾನ ಪಡೆದ ಪುತ್ತೂರಿನ ಕಾರ್ತಿಕ್‍ ಎನ್‍ ರವರಿಗೆ ವಿವೇಕಾನಂದ ಕಾಲೇಜಿನ ಪರವಾಗಿ ಸನ್ಮಾನವನ್ನು ನೆರವೇರಿಸಲಾಯಿತು.


ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿಕುಮಾರಿ, ಯತೀಶ್ ಉಪಸ್ಥಿತರಿದ್ದರು. 

ಈ ಪಂದ್ಯಾಟವನ್ನು ಅಲ್ಟಿಮೇಟ್ ಸ್ಫೋರ್ಟ್ಸ್‌ ಕ್ಲಬ್‍ನ ಕಾರ್ತಿಕ್‍ ಎನ್, ಮತ್ತು ಸರ್ವ ಸದಸ್ಯರು ಸಂಯೋಜಿಸಿದರು. 

ಈ ಕಾರ್ಯಕ್ರಮವನ್ನು ಅಲ್ಟಿಮೇಟ್ ಸ್ಪೋರ್ಟ್ಸ್‌ ಕ್ಲಬ್‍ನ ಸದಸ್ಯರಾದ ವಿನಯ ಕುಂಬ್ರ ಪ್ರಾರ್ಥಿಸಿ, ರಾಘವ ಸ್ವಾಗತಿಸಿ, ಹೇಮಂತ್‍ ವಂದಿಸಿದರು. ಅಜಯ್ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top