ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ 27ನೇ ಪ್ರತಿಷ್ಠಾ ವಾರ್ಷಿಕೋತ್ಸವ ಸಂಪನ್ನ

Upayuktha
0



ದೇಲಂಪಾಡಿ: ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ 27ನೇ ಪ್ರತಿಷ್ಠಾ ವಾರ್ಷಿಕೋತ್ಸವ ಮಾ.22ರಂದು ವಿವಿಧ ಧಾರ್ಮಿಕ ವಿಧಿ ವಿಧಾನದೊಂದಿಗೆ ನೆರವೇರಿತು.  ಶ್ರೀ ಗಣಹೋಮ ನಡೆದು ಆ ಬಳಿಕ ನಾಗಬ್ರಹ್ಮ ಸ್ಥಾನದಲ್ಲಿ ತಂಬಿಲ ಸೇವೆ ಹಾಗೂ ರಕ್ತೇಶ್ವರಿ ದೈವಸ್ಥಾನದಲ್ಲಿ ತಂಬಿಲ ಸೇವೆ ನಡೆದು ಮಹಾಲಿಂಗೇಶ್ವರ ದೇವರಿಗೆ ಮಹಾಪೂಜಾ ಮಹೋತ್ಸವ ನಡೆದು ವೈಭವದಿಂದ ಸಂಪನ್ನಗೊಂಡಿತು.


ಕ್ಷೇತ್ರ ತಂತ್ರಿವರ್ಯರಾದ ವೇದಮೂರ್ತಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರ ಮಾರ್ಗದರ್ಶನದಲ್ಲಿ ತಾಂತ್ರಿಕ ಸದನದ ಬ್ರಹ್ಮಶ್ರಿ ವಾಸುದೇವ ತಂತ್ರಿ ಸಂಗಡಿಗರು ಹಾಗೂ ಕ್ಷೇತ್ರದ ಪುರೋಹಿತ ನಾಗರಾಜ ಭಟ್ ಪೂಜಾ ವಿಧಿವಿಧಾನವನ್ನು ನೆರವೇರಿಸಿದರು.


ಕಾರ್ಯಕ್ರಮದಂಗವಾಗಿ ದೇವತಾ ಪ್ರಾರ್ಥನೆ, ಶ್ರೀ ಗಣಪತಿ ಹೋಮ, ರುದ್ರ ಪಾರಾಯಣ, ಸಾಮೂಹಿಕ ಪ್ರಾರ್ಥನೆ, ಗೌರವಾರ್ಪಣೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನೆರವೇರಿತು.


ಆಗಮಿಸಿದ ಭಕ್ತಾಧಿಗಳನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಡಿ.ರಾಮಭಟ್ ಹಾಗೂ ಸಹೋದರರಾದ ಡಿ. ಮಹಾಲಿಂಗೇಶ್ವರ ಭಟ್ ಮತ್ತು  ಡಿ. ವೆಂಕಪ್ಪಯ್ಯ ಭಟ್, ಸುರೇಶ್ ಕುಮಾರ್ ದೇಲಂಪಾಡಿ, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಸ್ವಾಗತಿಸಿ ಬರಮಾಡಿಕೊಂಡರು.


 

ಉತ್ಸವದಲ್ಲಿ ಸೂರ್ಯನಾರಾಯಣ ಬೃಂದಾವನ, ಕೆ. ವಿಶ್ವವಿನೋದ ಬನಾರಿ, ತಿರುಮಲೇಶ್ವರ ಭಟ್ ದೇಲಂಪಾಡಿ, ದೇರ್ಕಜೆ ಶ್ರೀರಾಮ ಭಟ್, ವಸಂತ ಭಟ್ ನಾಚಿಕೇರಿ, ಶಿವಪ್ರಸಾದ್ ಚೂಂತಾರು, ರವಿಕುಮಾರ್ ಕುತ್ಯಾಳ, ಸತ್ಯಶಂಕರ ಭಟ್ ಚೂಂತಾರು, ದಿನೇರ್ಶ ಕಾಟೂರಾಯ, ಕೋಟಿಗದ್ದೆ ಗೋಪಾಲಯ್ಯ, ಬಿ. ಬಾಲಕೃಷ್ಣ ಗೌಡ ದೇಲಂಪಾಡಿ, ಡಿ. ರಮೇಶ ಟೈಲರ್ ದೇಲಂಪಾಡಿ, ಚೆಂಡೆಮೂಲೆ ಶಿವಪ್ಪ ಗೌಡ, ದಯಾನಂದ ಗೌಡ ಬಂದ್ಯಡ್ಕ, ಲಂಬೋದರ ಶೆಟ್ಟಿ ಮಣಿಯೂರು ಬಂದ್ಯಡ್ಕ, ಚಿದಾನಂದ ಗೌಡ, ಮಾಧವ ರೈ ದೇಲಂಪಾಡಿ, ಕೇಶವ ಗೌಡ ಕುತ್ತಿಮುಂಡ, ಹರೀಶ್ ಗೌಡ ಮುದಿಯಾರು ಮೊದಲಾದ ಪ್ರಮುಖರು ಉಪಸ್ಥಿತರಿದ್ದು, ಸರ್ವ ವಿಧದ ಸಹಕಾರ ನೀಡಿದರು.


ನೆರೆದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಶ್ರೀಮತಿ ಈಶ್ವರಿ ರಾಮಭಟ್, ಶ್ರೀಮತಿ ಸವಿತಾ ಭಟ್, ಶ್ರೀಮತಿ ಗಂಗಾದೇವಿ, ಶ್ರೀಮತಿ ಸಹನಾ ದೇಲಂಪಾಡಿ, ಶ್ರೀಮತಿ ವೀಣಾ ಭಟ್ ದೇಲಂಪಾಡಿ, ಭಕ್ತ ಜನರ ಸಭಾ ವ್ಯವಸ್ಥೆಯ ಉಸ್ತುವಾರಿ ನೋಡಿಕೊಂಡಿದ್ದರು. ಧಾರ್ಮಿಕ ಮುಂದಾಳು ಬೆಳ್ಳಿಪ್ಪಾಡಿ ಸದಾಶಿವ ರೈ ಕಾರ್ಯಕ್ರಮ ನಿರೂಪಿಸಿ, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ನೆರೆದ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು.


ವರದಿ: ಬೆಳ್ಳಿಪ್ಪಾಡಿ ಸದಾಶಿವ ರೈ

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top