ಕೃತಿ ಪರಿಚಯ; ಮಾನವ ಜನ್ಮ ದೊಡ್ಡದು

Upayuktha
0

 

ಕೃತಿ - ಮಾನವ ಜನ್ಮ ದೊಡ್ಡದು

ಲೇಖಕರು - ಗೊರೂರು  ಅನಂತರಾಜು 

ಈ ನೆಲ ನಿಶ್ಚಲ, ಜಲ ಚಂಚಲ   ಈ ನಭ ನಿಶ್ಚಲ ಅಭ್ರ ಚಂಚಲ  ಈ ಬಯಲು ನಿಶ್ಚಲ ಗಾಳಿ ಚಂಚಲ   ಶಿಲೆ ನಿಶ್ಚಲ ಅದು ಕೊಡುವ ಕಿಡಿ ಚಂಚಲ  ಸ್ವತಂತ್ರ್ಯಧೀರ ಸಿದ್ಧೇಶ್ವರ ನೀನು ನಿಶ್ಚಲ ನಾನು ಚಂಚಲ 


ಎಂಬ ಕಾವ್ಯಾನಂದರ ವಚನದಲ್ಲಿ ನಿರಂತರ ಚಲನಶೀಲವಾದ ಈ ಸೃಷ್ಟಿಯ ಸಾರ್ಥಕ ತತ್ವದಂತೆ, ನಾವು ಏನೇ ಮಾಡಿದರೂ ಅದು ಸಾರ್ಥಕತೆಯನ್ನು ಕಾಣುವಂತಿರಬೇಕು.ಹಾಗೆಯೇ ನಿತ್ಯ ಜೀವನಕ್ಕೆ ಮಾರ್ಗದರ್ಶಿಯಂತಿದ್ದು ಪ್ರೇರಣೆಗೆ ಪೂರಕವಾಗಿದ್ದಾಗ ಮಾತ್ರವೇ ಬದುಕು ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ನಮ್ಮ ಹಾಸನ ಜಿಲ್ಲೆಯ ಸರಳ ಸಜ್ಜನಿಕೆಯ ಖ್ಯಾತ ಬರಹಗಾರರೂ, ಸಾಹಿತಿಗಳು. ಸದಾ ಕ್ರಿಯಾಶೀಲರೂ ಆಗಿರುವ ಗೊರೂರು ಅನಂತರಾಜು ಸರ್ ರವರ‘ಮಾನವ ಜನ್ಮ ದೊಡ್ಡದು’ಕೃತಿ ಅವರ ರಚನೆಯಲ್ಲಿ ಇತ್ತೀಚಿನದು. ಹಾನಿಮಾಡಬೇಡಿ ಹುಚ್ಚಪ್ಪಗಳಿರಾ..! ಎಂಬ ಎಚ್ಚರಿಕೆಯ ದಾಸರವಾಣಿಯ ಸಾಲಿನಲ್ಲಿ ‘ಮಾನವ ಜನ್ಮ ದೊಡ್ಡದು’ ಎಂಬಶಿರೋನಾಮೆಯಲ್ಲಿಹಲವಾರುಹಿರಿಯ ರಂಗಕಲಾವಿದರಸಾರ್ಥಕಬದುಕುಗಳನ್ನು ಕೃತಿಯಲ್ಲಿ ದಾಖಲಿದ್ದಾರೆ. ನಿತ್ಯ ಜೀವನಕ್ಕೆ ಅಳವಡಿಕೆಯಾಗುವ ವಿಭಿನ್ನ, ವಿಶೇಷ ಮೌಲ್ಯಾಧಾರಿತವಾಗಿ ವೈವಿಧ್ಯಮಯವಾದ ವಿಷಯಸೂಚಿಯಾಗಿ ಕೈಪಿಡಿಯಾಗುವಂತಹ,  ಸರ್ವೋಪಯೋಗಿಯಾಗುವಂತಹ ಕೃತಿ ಇದಾಗಿದೆ. ಕೃತಿಯ ಮೊದಲ ಲೇಖನದಲ್ಲಿ ನಾವು ಬಯಸಿ ಹುಟ್ಟಿದವರಲ್ಲ ಇಚ್ಛಿಸಿ ಹೋಗುವವರೂ ಅಲ್ಲ ಎನ್ನುವ ಮೂಲಕ ಕವಿ ದ.ರಾ. ಬೇಂದ್ರೆಯವರು ಹೇಳಿರುವಂತೆ ಹುಸಿ ನಗುತ ಬಂದೇವ, ನಸುನಗುತ ಬಾಳೋಣ, ತುಸು ನಗುತ ತೆರಳೋಣ, ಯಾಕಾಗಿ ಕೆರಳೋಣ, ಬನ್ನಿ ನಗುನಗುತ ಬಾಳು ಸಾಗಿಸೋಣ., ಬದುಕು ಆನಂದಿಸಲೂ ಇದೆ. ಈ ಚಿಂತನೆ ಮನವನ್ನು ಮಂದಿರವಾಗಿಸಲೂಬಹುದು, ಮುಂದಾರಿ ತೋರಿಸಲೂಬಹುದು..!


 ಜ್ಞಾನದ ಬೆಳಕಿನಲ್ಲಿ ನಮ್ಮೀ ಜೀವನ ಪಯಣ ಸುಖಮಯ ಹಾಗೂ ಸುಗಮವಾಗಿ ಸಾಗ ಬೇಕಾದರೇ ನಮ್ಮ ನೆಲ-ಜಲ ಭಾಷೆ, ಸಂಪ್ರದಾಯ, ಸಂಸ್ಪೃತ ಸಂಸ್ಕಾರ, ಆಚಾರ, ವಿಚಾರ, ನೀತಿ,ನಿಯಮಗಳನ್ನು ಗೌರವಿಸುತ್ತಾ ಅನುಸರಿಸುವುದರೊಂದಿಗೆ ಅನುಷ್ಠಾನಗೊಳಿಸಿಕೊಳ್ಳಬೇಕಾಗುತ್ತದೆ. ಇಂತಹ ಸತ್ವಪೂರ್ಣ ವಿಚಾರಗಳನ್ನೊಳಗೊಂಡಿರುವಉತ್ತಮ  ಕೈಪಿಡಿ ಈ ಪ್ರಬಂಧ ಸಂಕಲನ.  


ಈಗಾಗಲೇ ಸಾಕಷ್ಟು ಅತ್ಯುತ್ತಮವಾದ ಕೃತಿಗಳನ್ನು ಹೊರತಂದಿರುವ ಸಾಹಿತಿ ಗೊರೂರು ಅನಂತರಾಜು ಸರ್, ಮತ್ತೊಂದು ವಿಶೇಷ  ಕೊಡುಗೆಯನ್ನು ಸಾರಸ್ವತ ಲೋಕಕ್ಕೆ ಸಮರ್ಪಿಸು ತ್ತಿರುವುದು ಆಶಾದಾಯಕ ಬೆಳವಣಿಗೆ. ಇವರ ಈ ಕೃತಿಯೂ ಕೂಡ ಎಲ್ಲರ ಕೈಸೇರಿ ಪ್ರಯೋಜನ ಕಾರಿಯಾಗಿ ಇವರ ಸಾಹಿತ್ಯ ಕೃಷಿ ಇನ್ನೂ ಉತ್ತುಂಗಕ್ಕೇರಲಿ ಎಂದು ಆಶಿಸುವೆ.  ಹಾರೈಕೆಗಳೊಂದಿಗೆ...


   

  ಜಿ.ಎಸ್.ಕಲಾವತಿಮಧುಸೂದನ,  ಹಾಸನ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top