ಬೆಂಗಳೂರು: ಕಲಿಕೆಯಲ್ಲಿ ಔನ್ನತ್ಯವನ್ನು ರಾಷ್ಟ್ರಮಟ್ಟದಲ್ಲಿ ಸಾಧಿಸಿರುವ ಒಟ್ಟು 55 ಉನ್ನತ ಶಿಕ್ಷಣ ಸಂಸ್ಥೆಗಳ ಅತ್ಯುತ್ತಮ ವಿದ್ಯಾರ್ಥಿಗಳಿಗೆ ರಾಷ್ಟ್ರೀಕೃತ ಬ್ಯಾಂಕ್- ಬ್ಯಾಂಕ್ ಆಫ್ ಬರೋಡ – ‘ಬ್ಯಾಂಕ್ ಆಫ್ ಬರೋಡ ಸಾಧಕರ ಪ್ರಶಸ್ತಿ-2023’ ನೀಡಿ ಗೌರವಿಸಿದೆ.
ಈ ಅಪರೂಪದ ಪ್ರಶಸ್ತಿಗೆ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಸ್ನೇಹಾ ಟಿ (ವೈಮಾನಿಕ ತಂತ್ರಜ್ಞಾನ), ಪೃಥ್ವಿ (ವೈಮಾನಿಕ ತಂತ್ರಜ್ಞಾನ) ಹಾಗೂ ಗುರುದತ್ತ ಬಿ.ಎಂ. (ಸಂವಹನ ತಂತ್ರಜ್ಞಾನ) ಕೂಡ ಪಾತ್ರರಾಗಿದ್ದಾರೆ. ಖುದ್ದು ಸಂಸ್ಥೆಗೇ ಭೇಟಿ ನೀಡಿ ಬ್ಯಾಂಕ್ ಆಫ್ ಬರೋಡಾದ ಹಿರಿಯ ಶಾಖಾ ವ್ಯವಸ್ಥಾಪಕಿ ಆರ್. ನಿವೇದಿತಾ ಹಾಗೂ ಬ್ಯಾಂಕ್‍ನ ಅಧಿಕಾರಿಗಳು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಅವರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ನಗದು ಪುರಸ್ಕಾರಗಳನ್ನು ವಿತರಿಸಿದರು.
ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್, ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀಧರ್, ಅಂತರಾಷ್ಟ್ರೀಯ ವ್ಯವಹಾರಗಳ ಡೀನ್ ಡಾ. ಸುಧೀರ್ ರೆಡ್ಡಿ, ಸಂವಹನ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎ.ಸಿ. ರಾಮಚಂದ್ರ, ವೈಮಾನಿಕ ತಂತ್ರಜ್ಞಾನ ಮುಖ್ಯಸ್ಥ ಡಾ. ಶ್ರೀಕಾಂತ್ ಹೆಚ್.ವಿ, ಸಂಸ್ಥೆಯ ಪರೀಕ್ಷಾ ನಿಯಂತ್ರಣ ವಿಭಾಗದ ಡಾ. ಕಾಂಚನ್ ಗರ್ಗ್, ಡಾ. ವಿದ್ಯಾವತಿ ಹಾಗೂ ಇತರರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ