ಚುನಾವಣೆ ಸಂದರ್ಭ ಬಂದೂಕು ಠೇವಣಿ ವಿನಾಯಿತಿಗೆ ಒತ್ತಾಯ

Upayuktha
0



ಪುತ್ತೂರು: ಚುನಾವಣೆ ಘೋಷಣೆಯಾದ ಬಳಿಕ ಕೃಷಿ ರಕ್ಷಣೆಗೆಂದು ನೀಡಿದ್ದ ಬಂದೂಕುಗಳನ್ನು ಠಾಣೆಯಲ್ಲಿಡಲು ಪೊಲೀಸ್ ಠಾಣೆಯಿಂದ ಕೃಷಿಕರಿಗೆ ಸೂಚನೆ ಬರುತ್ತಿದೆ. ಅನೇಕ ಸಮಯಗಳಿಂದ ಈ ಪ್ರಕ್ರಿಯೆ ಇದೆ. ಸಮೀಪದ ಕೇರಳ ಸೇರಿದಂತೆ ಇತರ ಕೆಲವು ರಾಜ್ಯಗಳಲ್ಲಿ  ಕೃಷಿಕರು ಬಂದೂಕುಗಳನ್ನು  ಠಾಣೆಯಲ್ಲಿಡಲು ವಿನಾಯತಿ ನೀಡಲಾಗುತ್ತದೆ. ಅದೇ ಮಾದರಿಯಲ್ಲಿ  ರಾಜ್ಯದಲ್ಲೂ ಕೃಷಿ ರಕ್ಷಣೆಗೆ ನೀಡಿದ್ದ ಬಂದೂಕುಗಳನ್ನು ಚುನಾವಣೆಯ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿಡುವುದಕ್ಕೆ ವಿನಾಯಿತಿ ನೀಡಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.


ಸಂಘದ ಮಹಾಸಭೆಯಲ್ಲಿ ಕೃಷಿಕರೆಲ್ಲರೂ ಈ ಬಗ್ಗೆ ಒತ್ತಾಯ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗವು ತಕ್ಷಣವೇ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಅಶೋಕ ಕಿನಿಲ ಮತ್ತು ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಹೇಳಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter





إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top