ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಹಾಗೂ ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಕುಮಾರಸ್ವಾಮಿ ಎಂ. ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿ ಸ್ವಯಂಸೇವಕರು ದಾನಿಗಳಿಂದ ಶುಭ್ರ ವಸ್ತ್ರಗಳನ್ನು ಸಂಗ್ರಹಿಸಿ ಅದನ್ನು ವೆನ್ ಲಾಕ್ ಮತ್ತು ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೆ ಬರುವ ಬಡ ಮತ್ತು ನಿರಾಶ್ರಿತ ರೋಗಿಗಳಿಗೆ ಒದಗಿಸಿದರು. ಈ ಮೂಲಕ ರೋಗಿಗಳು ಎದುರಿಸುವ ದೈನಂದಿನ ಉಡುಗೆಗಳ ಕೊರತೆಯನ್ನು ನೀಗಿಸುವ ಸದುದ್ದೇಶದ 'ಅಕ್ಷಯ ಅಂಬರʼ ಯೋಜನೆಗೆ ಚಾಲನೆ ನೀಡಿದರು.
ವಿಶ್ವವಿದ್ಯಾಲಯ ಕಾಲೇಜಿನ ಯುವರ್ ರೆಡ್ ಕ್ರಾಸ್ ಘಟಕದ ಸ್ವಯಂಸೇವಕರಾದ ಕ್ಷಮ್ಯ, ಸಾನಿಧ್ಯ, ಸಾಹಿತ್ಯ, ಅಶ್ಮಿತಾ, ಸ್ನೇಹ, ಸುನೀತಾ, ಭಾಗ್ಯಲಕ್ಷ್ಮಿ, ನಮ್ರತಾ, ವರ್ಷಿತ, ಧನುಷ್, ಧರ್ಮರಾಜ್ ಮೊದಲಾದವರು ವಿವಿಧ ಪ್ರದೇಶಗಳಿಂದ ಸುಮಾರು 10 ಬಾಕ್ಸ್ ಗಳಲ್ಲಿ ವಸ್ತ್ರಗಳನ್ನು ಸಂಗ್ರಹಿಸಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಕ್ಷಿಣ ಕನ್ನಡ ಇದರ ಪ್ರಭಾಕರ ಶರ್ಮ ಎಸ್ ಎ ಮತ್ತು ಸಚೇತ್ ಸವರ್ಣ ಇವರ ಮೂಲಕ ನಿರಾಶ್ರಿತ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ