ಮಂಗಳೂರು: ಫೆಬ್ರವರಿ 11, 12ರಂದು ಉಡುಪಿಯಲ್ಲಿ ಜರಗಲಿರುವ ಯಕ್ಷಗಾನ ಸಮ್ಮೇಳನಕ್ಕೆ ಬಪ್ಪನಾಡು ಮೇಳದ ಆಡಳಿತ ವರ್ಗ, ಕಲಾವಿದರು, ಸಿಬ್ಬಂದಿಗಳು ಶುಭ ಕೋರುವ ಬಪ್ಪನಾಡು ಮೇಳದ ಬ್ಯಾನರ್ ಅನಾವರಣ ಮಂಗಳೂರಿನ ಕೋಡಿಕಲ್ ಕಟ್ಟೆಯಲ್ಲಿ ಜರಗಿತು.
ಸಮ್ಮೇಳನ ಸಮಿತಿಯ ಕದ್ರಿ ನವನೀತ ಶೆಟ್ಟಿ ಅವರು ಮೇಳದ ಸಂಚಾಲಕ ವಿನೋದ್ ಕುಮಾರ್ ಬಜ್ಪೆ ಅವರಿಗೆ ಸಮ್ಮೇಳನಕ್ಕೆ ಆಹ್ವಾನ ನೀಡಿದರು.
ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ನಮ್ಮೂರ ಆಟ ಕೂಟದ ಮೂಲ್ಕಿ ಕರುಣಾಕರ ಶೆಟ್ಟಿ, ಕಾರ್ಪೊರೇಟರ್ ಕಿರಣ್ ಕುಮಾರ್, ಕೋಡಿಕಲ್ ಯಕ್ಷಗಾನ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


