ತುಳುನಾಡ ಸಂಭ್ರಮ- ಕಂಬಳಕ್ಕೆ ಅಣಿ ಮಾಡುವುದು ಹೇಗೆ ಗೊತ್ತೇ...

Upayuktha
0

ಕಂಬಳ ತುಳುನಾಡಿನ ಜಾನಪದ ಕ್ರೀಡೆ ಕೋಣಗಳನ್ನು ಪ್ರೀತಿಯಿಂದ ಸಾಕಿ ಕಂಬಳದಲ್ಲಿ ಭಾಗವಹಿಸುತ್ತಾರೆ. ನೇಗಿಲು ಕಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ, ಹಗ್ಗ ಹಿರಿಯ,  ಅಡ್ಡ ಹಲಗೆ, ಕನಹಲಗೆ ಹೀಗೆ ವಿವಿಧ ಬಗೆಯ ಸ್ಪರ್ಧೆಗಳಿರುತ್ತವೆ. ಕಂಬಳ ದಕ್ಷಿಣ ಕನ್ನಡ, ಉಡುಪಿಯ ವಿವಿಧ ಭಾಗಗಳಲ್ಲಿ ಕಂಬಳ ನಡೆಯುತ್ತದೆ. ಇಂತಹ ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಕಂಬಳದ ಕೋಣಗಳು ಮನೆಯಿಂದ ಕಂಬಳದ ಸ್ಪರ್ಧೆಗೆ ಹೊರಡುವಾಗ ಒಂದಿಷ್ಟು ಕ್ರಮಗಳನ್ನು ಪಾಲಿಸುತ್ತಾರೆ.


ಹೌದು ಬೆಳಗ್ಗಿನ ಜಾವ ಕೋಣಗಳನ್ನು ತೊಳೆದು ನಂತರ ಅದಕ್ಕೆ ಎಣ್ಣೆ ಮಸಾಜ್ ಮಾಡಲಾಗುತ್ತದೆ ಹಾಗೂ ಕಂಬಳಕ್ಕೆ ಬೇಕಾದಂತಹ ನೊಗ ಹಗ್ಗ, ಬೆತ್ತ, ಹೀಗೆ ಎಲ್ಲಾ ಪರಿಕರಗಳನ್ನು ಜೋಡಿಸಿ ತುಳಸಿ ಕಟ್ಟೆಯ ಮುಂದೆ ಇಡಲಾಗುತ್ತದೆ. ಅದಾದ ಬಳಿಕ  ಬೇಕಾದ ಅಡುಗೆ ಸಾಮಗ್ರಿ, ಹುರುಳಿ ಹೀಗೆ ಅಗತ್ಯ ವಸ್ತುಗಳನ್ನು ಜೋಡಿಸುತ್ತಾರೆ. ಕೋಣಗಳನ್ನು ಯಜಮಾನ ದೈವದೇವರಿಗೆ ಕೈಮುಗಿದು ಕಂಬಳದಲ್ಲಿ ಒಳಿತಾಗಲಿ ಎನ್ನುವ ಹಾರೈಕೆಯೊಂದಿಗೆ ಕೋಣದ ಹಗ್ಗವನ್ನು ಬಿಚ್ಚಿ ಕೆಲಸಗಾರರ ಕೈಯಲ್ಲಿ ಕೊಡುತ್ತಾನೆ. ತುಳಸಿ ಕಟ್ಟೆಗೆ ಸುತ್ತು ಬಂದು ಮನೆಯ ಯಜಮಾನ ದೈವ ದೇವರಿಗೆ ಗ್ರಾಮ ದೇವರಿಗೆ ಹಾಗೂ ನಂಬಿದ ಎಲ್ಲ ಶಕ್ತಿಗಳಿಗೆ ಕೈಮುಗಿದು ಪ್ರಸಾದವನ್ನು ಕೋಣಗಳಿಗೆ ಹಾಕುತ್ತಾನೆ. ನಂತರ ದೃಷ್ಟಿಗೆ ಸುಣ್ಣ ಮತ್ತು ಕುಂಕುಮವನ್ನು ಹಾಕಲಾಗುತ್ತದೆ ಅದಾದ ಬಳಿಕ ಕಂಬಳಕ್ಕೆ ಹೊರಡಲು ಸಿದ್ದರಾಗುತ್ತಾರೆ.


ಕಂಬಳ ನಡೆಯುವ ಜಾಗದಲ್ಲಿ ಎಲ್ಲಾ ರೀತಿಯ ಅನುಕೂಲವಿರುವ ಒಂದು ಸ್ಥಳವನ್ನು ಆರಿಸಿ ಅಲ್ಲಿ ಟೆಂಟ್ ಹಾಕಲಾಗುತ್ತದೆ. ಕಅಡುಗೆ ಸಾಮಾಗ್ರಿ ಎಲ್ಲವನ್ನು ಅಲ್ಲಿ ಜೋಡಿಸಿ ಕಂಬಳದ ಸ್ಪರ್ಧೆಗೆ ಸಿದ್ದರಾಗುತ್ತಾರೆ. ಕಂಬಳ ನಡೆಯುವ ಸ್ಥಳಕ್ಕೆ ಹೋದಾಗ ಅಲ್ಲಿ ಮೊದಲಿಗೆ ಕೋಣಗಳನ್ನು ತೊಳೆದು ಯಜಮಾನ ಎರಡು ಕೋಣಗಳಿಗೆ ನುಗ ಇಡುತ್ತಾರೆ ನೊಗವನ್ನು ಇಟ್ಟ ಬಳಿಕ ಓಡಿಸುವವರಿಗೆ ದೈವ ದೇವರಲ್ಲಿ ಬೇಡಿ ಭಕ್ತಿಯಿಂದ ಕೋಣ ಓಡಿಸುವ ಹಗ್ಗವನ್ನು ನೀಡಲಾಗುತ್ತದೆ. ಅನಂತರ ಕಂಬಳದ ಆಯೋಜಕರ ನಿಯಮದಂತೆ ಕೋಣಗಳನ್ನು ಕರೆಗೆ ಇಳಿಸುತ್ತಾರೆ. ಕರೆಗೆ ಇಳಿಸಿ ಮೊದಲ ಸುತ್ತನ್ನು ಜತ್ತಿ ಸುತ್ತು ಎಂದು ಕರೆಯುತ್ತಾರೆ.


ಅದಾದ ಬಳಿಕ ಚಾನ್ಸಿ ಎಂದು ಕರೆಯುತ್ತಾರೆ. ಚಾನ್ಸ್‌ನಲ್ಲಿ ಬಂದ ವೇಗದ ಆಧಾರದ ಮೇಲೆ ಕೋಣಗಳಿಗೆ ಯಾವ ಕೋಣ ಸ್ಪರ್ಧೆಗೆ ಬೀಳುತ್ತದೆ ಎಂದು ನಿರ್ಧಾರ ಮಾಡಲಾಗುತ್ತದೆ. ಕರೆಯಲ್ಲಿ ಓಡಿ ಬಂದ ಕೋಣಗಳಿಗೆ ನೀರು ಹಾಕಿ ತದನಂತರ ಆ ಅವರವರ ಟೆಂಟ್ ಗಳಲ್ಲಿ ಕಟ್ಟಲಾಗುತ್ತದೆ. ಹೀಗೆ ದಿನಪೂರ್ತಿ ನಡೆಯುವ ಕಂಬಳದಲ್ಲಿ ಕೋಣಗಳು ಭಾಗವಹಿಸುತ್ತವೆ. ಕಂಬಳದ ಹಿಂದೆ ಧಾರ್ಮಿಕವಾದ ನಂಬಿಕೆ ಇದೆ ಯಜಮಾನ ದೈವ ದೇವರ ಆಶೀರ್ವಾದದೊಂದಿಗೆ ಕೋಣಗಳನ್ನು ಕಂಬಳದ ಸ್ಪರ್ಧೆಗೆ ಕೊಂಡೊಯ್ಯುತ್ತಾರೆ.

-ಪ್ರಖ್ಯಾತ್ ಬೆಳುವಾಯಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top