ಸಿಎ ಪ್ರವೇಶ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತೇರ್ಗಡೆ

Upayuktha
0

ಪುತ್ತೂರು : ಭಾರತೀಯ ಚಾರ್ಟಡ್‍ ಅಕೌಂಟೆಂಟ್ಸ್ ಸಂಸ್ಥೆ ಕಳೆದ ಡಿಸೆಂಬರ್‍‌ನಲ್ಲಿ ನಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ 2020-22ನೇ ಸಾಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತೇರ್ಗಡೆಯಾಗುವುದರ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ದೀಪ್ನ ಜೆ (ಕಾಸರಗೋಡಿನ ಮುಂಡಿತ್ತಡ್ಕದ ಎಸ್. ನಾರಾಯಣ ಮತ್ತು ಪುಷ್ಪ ಕೆ ದಂಪತಿ ಪುತ್ರಿ) ಮತ್ತು ಪೂರ್ವಿಕ್ ಸಿ ಎಸ್ (ಕೊಡಗಿನ ಸೋಮವಾರ ಪೇಟೆಯ ಸುಬ್ರಹ್ಮಣ್ಯ ಸಿ ಕೆ ಮತ್ತು ವೀಣಾ ಸಿ ಎಸ್‍ದಂಪತಿ ಪುತ್ರ) ತೇರ್ಗಡೆಯಾಗುವುದರ ಮೂಲಕ ಮುಂದಿನ ಹಂತದ ಸಿ ಎ ಇಂಟರ್ ಮಿಡಿಯೆಟ್ ಪರೀಕ್ಷೆಯನ್ನು ಬರೆಯಲು ಅರ್ಹತೆ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.


ಕಳೆದ ಹತ್ತು ವರ್ಷಗಳಿಂದ ಸಿಎ ಆಕಾಂಕ್ಷಿಗಳಿಗೆ ವಿಶೇಷ ತರಬೇತಿ ವ್ಯವಸ್ಥೆಯನ್ನುಕಾಲೇಜಿನ ವತಿಯಿಂದ ಕಲ್ಪಿಸಿಕೊಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಷಯದಜೊತೆಗೆ ಸಿಎ ಪರೀಕ್ಷೆಗೆ ಬೇಕಾದ ಸಕಲ ತರಬೇತಿಕಾರ್ಯವನ್ನೂ ವಿವೇಕಾನಂದ ಪದವಿಪೂರ್ವಕಾಲೇಜಿನಲ್ಲಿನಡೆಸಿಕೊಂಡು ಬರಲಾಗುತ್ತಿದೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
To Top