ನಿಟ್ಟೆ ಕ್ರಾಸ್ ಕಂಟ್ರಿ ತಂಡಕ್ಕೆ ರಾಜ್ಯಮಟ್ಟದ ಚ್ಯಾಂಪಿಯನ್‌ಶಿಪ್ ಪ್ರಶಸ್ತಿ

Upayuktha
0


ನಿಟ್ಟೆ:
ಬೆಂಗಳೂರಿನ ಸಾಯಿರಾಮ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಜ.28 ರಂದು ನಡೆದ ವಿ.ಟಿ.ಯು ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ ಚ್ಯಾಂಪಿಯನ್‌ಶಿಪ್ ನ ಪುರು‌ಷರ ವಿಭಾಗದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಿಟ್ಟೆ ತಾಂತ್ರಿಕ ಕಾಲೇಜು ಸತತ 9ನೇ ಬಾರಿಗೆ ಈ ರಾಜ್ಯಮಟ್ಟದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ನಿಟ್ಟೆ ತಾಂತ್ರಿಕ ಕಾಲೇಜಿನ ಮಹಿಳಾ ತಂಡವು ಈ ಕ್ರೀಡಾಕೂಟದಲ್ಲಿ ೪ನೇ ಸ್ಥಾನವನ್ನು ಸಾಧಿಸಿಕೊಂಡಿದೆ.

ನಿಟ್ಟೆ ತಾಂತ್ರಿಕ ಕಾಲೇಜಿನ ಕ್ರಾಸ್ ಕಂಟ್ರಿ ಪುರು‌ಷರ ವಿಭಾಗದ ವಿದ್ಯಾರ್ಥಿ ದೀಕ್ಷಿತ್ ಅವರು ಬೆಂಗಳೂರಿನ ಪ್ರೆಸಿಡೆನ್ಸಿ ಯುನಿವರ್ಸಿಟಿಯಲ್ಲಿ ಫೆ.12 ರಂದು ನಡೆಯಲಿರುವ ರಾ‌ಷ್ಟ್ರಮಟ್ಟದ ಇಂಟರ್ ಯುನಿವರ್ಸಿಟಿ ಕ್ರಾಸ್ ಕಂಟ್ರಿ ಚ್ಯಾಂಪಿಯನ್ಶಿಪ್ ನಲ್ಲಿ ವಿ.ಟಿ.ಯು ಕ್ರಾಸ್ ಕಂಟ್ರಿ ಪುರು‌ಷರ ತಂಡವನ್ನು ಪ್ರತಿನಿಧಿಸಲಿರುವರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top