ಉನ್ನತ ವಿಚಾರ ಆಸ್ವಾದಿಸಿ : ವಿವೇಕ್ ಆಳ್ವ
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಭಾವನಾತ್ಮಕ ಸ್ವಾತಂತ್ರ್ಯದ ತಂತ್ರಗಳು’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಈ ಜಗತ್ತು ಇರುವುದು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವವರಿಗೆ. ಯಾವುದೇ ಕೆಲಸವನ್ನು ತೀವ್ರ ಸ್ಪಂದನೆ ಹಾಗೂ ತುಡಿತದಿಂದ ಮಾಡಿದಾಗ ಮಾತ್ರ ನ್ಯಾಯ ನೀಡಲು ಸಾಧ್ಯ. ಬೇಕಾಬಿಟ್ಟಿ ಕಾರ್ಯಗಳು ಅವಸಾನಕ್ಕೆ ಕಾರಣವಾಗುತ್ತವೆ ಎಂದರು.
ಎಲ್ಲರೂ ತೃಪ್ತಿ ಹಾಗೂ ಗೌರವನ್ನು ಬಯಸುತ್ತಾರೆ. ಗೌರವದ ನಿರೀಕ್ಷೆ ಶಾಲಾ ದಿನಗಳಿಂದಲೇ ಆರಂಭವಾಗುತ್ತದೆ.ರ‍್ಯಾಂಕ್, ಬಹುಮಾನ ಇತ್ಯಾದಿಗಳು ಪಡೆಯುವ ಮೂಲಕ ಬಾಲ್ಯದಲ್ಲೇ ಗೌರವದ ನಿರೀಕ್ಷೆಗಳನ್ನು ಬೆಳೆಸಲಾಗುತ್ತಿದೆ ಎಂದರು.
ಸಂತ ಆಗ್ನೆಸ್ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ. ಪ್ರೇಮಾನಂದ ಮಾತನಾಡಿ, ‘ಪ್ರತಿ ವ್ಯಕ್ತಿಯ ದೇಹದಲ್ಲಿ ಶಕ್ತಿ ಸಂಚಲನದ ಬಿಂದುಗಳಿರುತ್ತವೆ. ಈ ಪೈಕಿ ಕರಗಳ ಕರಾಟೆ ಹೊಡೆತದ ಬಿಂದು, ಕಣ್ಣ ರೆಪ್ಪೆ, ಕಣ್ಣ ರೆಪ್ಪೆಯ ಬದಿ, ಕಣ್ಣಿನ ಕೆಳಭಾಗ, ಮೂಗಿನ ಕೆಳಭಾಗ, ಗಲ್ಲ, ಪಕ್ಕೆಲುಬು, ಕಂಕುಳ, ಶಿರೋಬಿಂದು’ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಬದುಕಿನಲ್ಲಿ ಭಾವನೆ ಬೇಕು. ಆದರೆ, ಭಾವನಾತ್ಮಕತೆ ನಿಯಂತ್ರಣದಲ್ಲಿ ಇರಬೇಕು ಎಂದರು.
ಕಾಲೇಜು ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗದ ಮುಖ್ಯಸ್ಥೆ ಆಡ್ರೇ ಪಿಂಟೊ ಇದ್ದರು. ವಿದ್ಯಾರ್ಥಿನಿ ಫಾತಿಮಾ ರೋಸ್ಲಿ ನಿರೂಪಿಸಿದರು. ಅನುಶ್ರೀ ಪರಿಚಯ ಮಾಡಿದರು. ಅನಘಪ್ರಭ ಸ್ವಾಗತಿಸಿ, ಅನಶ್ವರ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ