ಉಜಿರೆ : ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯ, ಆಜಾದಿಕ ಅಮೃತ್ ಮಹೋತ್ಸವ ಹಾಗೂ ಜಿ-20 ಶೃಂಗಸಭೆಯ ಅಂಗವಾಗಿ ಏಕ್ ಭಾರತ್ ಶ್ರೇಷ್ಠ ಭಾರತ ಯೋಜನೆ ಅಡಿಯಲ್ಲಿ ಇಪ್ಪತ್ತರಿಂದ ರಿಂದ ಮೂವತ್ತು ವರ್ಷದ ಯುವಕರಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಆಯೋಜಿಸಿರುವ " ರಾಷ್ಟ್ರೀಯ ಯುವ -ಸಂಗಮ" ಕಾರ್ಯಕ್ರಮಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಪ್ರಥಮ ವರ್ಷದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ಶಾಮಪ್ರಸಾದ್ ಆಯ್ಕೆ ಆಗಿದ್ದಾರೆ.
ಇವರು ಫೆಬ್ರವರಿ 24 ರಿಂದ ಮಾರ್ಚ್ 4 ರವರೆಗೆ ಅಸ್ಸಾಂ ರಾಜ್ಯದ ಗುವಾಹಟಿಯ 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' ಯಲ್ಲಿ ನಡೆಯಲಿರುವ ಒಂದು ವಾರದ ವಿಭಿನ್ನ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಈಶಾನ್ಯ ಭಾರತದ ರಾಜ್ಯಗಳು ಮತ್ತು ಇತರ ರಾಜ್ಯಗಳ ನಡುವಿನ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಬೆಸುಗೆ ಕಾರ್ಯಕ್ರಮ ಜೊತೆಗೆ ಅಸ್ಸಾಂ ರಾಜ್ಯದ ರಾಜ್ಯಪಾಲ ರೊಂದಿಗಿನ ಸಂವಾದ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.ಇವರು ಉಜಿರೆಯ ರತ್ನ ಮಾನಸ ಮತ್ತು ಶ್ರೀ ಸಿದ್ಧವನ ಗುರುಕುಲದ ಹಳೆ ವಿದ್ಯಾರ್ಥಿಯಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


