ಜೀವನ ಎಷ್ಟು ವಿಚಿತ್ರವಲ್ಲವೇ. ನಾವು ಅಂದುಕೊಳ್ಳುವುದೇ ಒಂದು, ಕೊನೆಗೆ ಆಗುವುದೇ ಇನ್ನೊಂದು. ಹೈಸ್ಕೂಲ್ ಜೀವನವನ್ನು ಮುಗಿಸಿ ಮುಂದೇನು? ಯಾವ ಕಾಲೇಜು? ಎಂಬ ಪ್ರಶ್ನೆ ಬಂದಾಗ ಎಲ್ಲರ ಮನಸ್ಸಿನಲ್ಲಿ ತಂದೆಯೇ ಕಾಲೇಜು ಆಯ್ಕೆ ಮಾಡಿ ಮನೆಯ ಹತ್ತಿರವೇ ಕಳುಹಿಸುತ್ತಾರೆ ಎಂದು ಭಾಸವಾಗುತ್ತದೆ. ಆದರೆ ಅವಳ ಜೀವನದಲ್ಲಿ ಹಾಗಾಗಿರುವುದಿಲ್ಲ.
ತಂದೆಯೇ ಅವಳ ಜೊತೆ ಪುತ್ತೂರಿನಿಂದ ಮಡಿಕೇರಿ ಒಳಗಿನ ಮೂರು ನಾಲ್ಕು ಕಾಲೇಜಿನ ಹೆಸರು ಹೇಳಿ ನಿನಗೆ ಯಾವ ಕಾಲೇಜು ಆಗಬಹುದು ಎಂದು ಕೇಳಿದರು. ಅದರಲ್ಲಿ ಅವಳು ಪುತ್ತೂರಿನ ಒಂದು ಕಾಲೇಜನ್ನು ಆಯ್ಕೆ ಮಾಡಿಕೊಂಡಳು. ಅಲ್ಲಿಗೆ ಬಂದ ಬಳಿಕ, ಯಾರೂ ಇಲ್ಲದ ಊರಿನಲ್ಲಿ ಅವಳೊಬ್ಬಳೇ ಇರುವಾಗ ಅವಳು ಒಳ್ಳೆಯವಳಾಗಿರಲು ಒಂದಷ್ಟು ನಿಯಮಗಳನ್ನು ಹಾಕಿಕೊಂಡಳು.
ನಂತರ ಹೊಸ ಗೆಳೆಯ ಗೆಳತಿಯರು ಪರಿಚಯವಾದರು, ಅವರ ಜೊತೆ ಸೇರಿಕೊಂಡು ಒಂದಷ್ಟು ವಿಷಯಗಳನ್ನು ಕಲಿತುಕೊಂಡಳು. ಅದು ಹೇಗೋ ಅವಳ ಪಿಯುಸಿ ಜೀವನ ಮುಗಿದು ಪುತ್ತೂರಿನ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಯುತ್ತದೆ. ನಂತರ ಅಲ್ಲಿ ಪದವಿ ಜೀವನ ಮುಗಿಸಿದ ಬಳಿಕ ಮುಂದಿನ ಶಿಕ್ಷಣಕ್ಕಾಗಿ ಅವಳೇ ತಂದೆ ಬಳಿ ಕೇಳುತ್ತಾಳೆ. ತಂದೆ ಯಾವ ಕಾಲೇಜು ಎಂದು ಕೇಳಿದಾಗ ಉಜಿರೆ ಕಾಲೇಜು ಅಥವಾ ಮೂಡಬಿದರೆಯ ಕಾಲೇಜು ಎಂದು ಹೇಳಿದಳು. ಕೊನೆಗೆ ಮೂಡಬಿದಿರೆಯ ಕಾಲೇಜನ್ನು ಆಯ್ಕೆ ಮಾಡಿಕೊಂಡಳು. ಅದಕ್ಕೆ ಆ ಕಾಲೇಜ್ ತುಂಬಾ ದೂರ ಆಯ್ತಲ್ಲ ಎಂದು ಅವಳ ತಂದೆ ಹೇಳಿದಾಗ, ಅವಳು ದೂರ ಆದರೂ ಅಲ್ಲಿನ ಶಿಕ್ಷಣ ಚೆನ್ನಾಗಿದೆ ಎಂದಳು. ಅವಳೇ ತಂದೆಯನ್ನು ಒಪ್ಪಿಸಿ ಮೂಡುಬಿದಿರೆಯ ಕಾಲೇಜಿಗೆ ಸೇರಿದರೂ ಅವಳ ಮನಸ್ಸಿನಲ್ಲಿ ಒಂದು ತರಹದ ಭಯ ಇತ್ತು. ಅವಳಿಗೆ ಅವಳೇ ಧೈರ್ಯ ಹೇಳಿಕೊಂಡು ಉನ್ನತ ಶಿಕ್ಷಣ ಮುಂದುವರಿಸುತ್ತಾಳೆ. ಮೂಡುಬಿದಿರೆ ಕಾಲೇಜಿಗೆ ಏನನ್ನು ಬಯಸಿ ಬಂದಿದ್ದಳೋ ಅದಕ್ಕಿಂತ ಹೆಚ್ಚಿನ ಶಿಕ್ಷಣ ದೊರೆಯಿತು. ಅವಳು ಆಯ್ಕೆ ಮಾಡಿಕೊಂಡ ಕಾಲೇಜುಗಳು ಇದುವರೆಗೆ ಅವಳಿಗೆ ತಪ್ಪಾಯಿತು ಎಂದು ಅನಿಸಿರಲಿಲ್ಲ. ಅವಳು ಓದಿಕೊಂಡು ಬಂದ ಕಾಲೇಜ್ ಅವಳಿಗೆ ಬಹಳ ಸವಿನೆನಪುಗಳನ್ನು ನೀಡಿದೆ ಹಾಗೂ ಒಳ್ಳೆಯ ಶಿಕ್ಷಣವನ್ನು ಕೊಟ್ಟಿದೆ. ಈ ಕಾಲೇಜಿನಲ್ಲಿಯೂ ಅದೇ ತರಹದ ವಾತಾವರಣವನ್ನು ಕಂಡುಕೊಂಡಿದ್ದಾಳೆ.
ಬಹಶಃ ಅವಳ ತಂದೆ ಕಾಲೇಜ್ ಆಯ್ಕೆ ಮಾಡಲು ಬಿಡದೆ ಇದ್ದಿದ್ದರೆ ಅವಳ ಜೀವನದಲ್ಲಿ ಬಹಳಷ್ಟು ಪಾಠಗಳನ್ನು ಅವಳು ಕಳೆದುಕೊಳ್ಳುತ್ತಿದ್ದಳು ಎಂದೆನಿಸುತ್ತದೆ.
- ಯಶ್ವಿತ ಪೂಜಾರಿಗದ್ದೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ