ಸಾಹಿತ್ಯ ಸಂಭ್ರಮದಲ್ಲಿ ರಸಮಂಜರಿ ಕಾರ್ಯಕ್ರಮ

Upayuktha
0


ಉಜಿರೆ : ದಕ್ಷಿಣ ಕನ್ನಡ ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಗೀತಲಹರಿ’ ಸಂಗೀತ ಕಾರ್ಯಕ್ರಮವನ್ನು ಗಾಯಕಿ ಅನಸೂಯ ದೇವಸ್ಥಳಿ ಅವರು ನಡೆಸಿಕೊಟ್ಟರು.


“ಮನವನ್ನು ತಣಿಸುವ ಮೋಹನಸೂತ್ರ”, “ಅವಳಿಲ್ಲಿಗೆ ಬಂದಾಗ”, “ಮಣ್ಣಿನಲಿ ಮಾಡಿರಲಿ ತನುವಿನಲಿ ನೀ ಕುಳಿತು”, “ಬಾರೋ ವಸಂತ”, “ಶೂದಷಚೈತ್ರದ ಸುಂದರಿ ನೀನು” ಹಾಡುಗಳಿಗೆ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆಗೈದರು.


ತಬಲಾದಲ್ಲಿ ಗೌರವ್ ಪ್ರಸಾದ್, ಹಾರ್ಮೋನಿಯಂನಲ್ಲಿ ರವಿಶಂಕರ್‌ ತಾಮಣ್ಕರ್‌ ಸಾಥ್ ನೀಡಿದರು. ಅನಸೂಯ ದೇವಸ್ಥಳಿ ಅವರಿಗೆ ಎಸ್.ಡಿ.ಎಂ. ರೆಸಿಡೆನ್ಶಿಯಲ್ ಕಾಲೇಜಿನ ಪ್ರಾಚಾರ್ಯ ಡಾ. ಕೃಷ್ಣಮೂರ್ತಿ ಟಿ. ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಮುರಳಿಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.


ವರದಿ: ಚೆಲುವಮ್ಮ, ವಿಜಯಕುಮಾರ ಹಿರೇಮಠ

ಪ್ರಥಮ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

ಚಿತ್ರ: ಶಶಿಧರ ನಾಯ್ಕ, ದ್ವಿತೀಯ ವರ್ಷ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top