ನಮಾಮಿ ಗಂಗೆ ಕಾರ್ಯಕಾರಿ ಸಮಿತಿ ಸಭೆ: 1,200 ಕೋಟಿ ರೂ.ಗಳ 9 ಯೋಜನೆಗಳಿಗೆ ಅನುಮೋದನೆ

Upayuktha
0

 

ಹೊಸದಿಲ್ಲಿ : ನಮಾಮಿ ಗಂಗೆ ಕಾರ್ಯಕಾರಿ ಸಮಿತಿಯು ಗಂಗಾ ಜಲಾನಯನ ಪ್ರದೇಶದಲ್ಲಿನ ಮಾಲಿನ್ಯ ನಿವಾರಣೆ ಮತ್ತು ಘಾಟ್ ಅಭಿವೃದ್ಧಿಗಾಗಿ 1,200 ಕೋಟಿ ರೂಪಾಯಿಗಳ 9 ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳಲ್ಲಿ ಏಳು ಗಂಗಾ ಜಲಾನಯನ ಪ್ರದೇಶದಲ್ಲಿನ ಮಾಲಿನ್ಯವನ್ನು ತಗ್ಗಿಸಲು ಮತ್ತು ಎರಡು ಘಾಟ್ ಅಭಿವೃದ್ಧಿಗೆ ಸಂಬಂಧಿಸಿದೆ. ಎನ್‌ಎಂಸಿಜಿ ಮಹಾನಿರ್ದೇಶಕ ಜಿ. ಅಶೋಕ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್‌ಎಂಸಿಜಿ) ಕಾರ್ಯಕಾರಿ ಸಮಿತಿಯ 47 ನೇ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.


ಅನುಮೋದಿತ ಯೋಜನೆಗಳ ಅಡಿಯಲ್ಲಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಗಂಗಾ ನದಿಯನ್ನು ಸ್ವಚ್ಛಗೊಳಿಸಲು ವಿವಿಧ ಒಳಚರಂಡಿ ಸಂಸ್ಕರಣಾ ಘಟಕಗಳು ಮತ್ತು ಇತರ ಕೆಲಸಗಳನ್ನು ಮಾಡಲಾಗುವುದು ಎಂದು ಜಲಶಕ್ತಿ ಸಚಿವಾಲಯ ತಿಳಿಸಿದೆ. ಬಿಹಾರದ ಘಾಟ್ ಅಭಿವೃದ್ಧಿ, ಅಟಲ್ ಘಾಟ್ ಮಾಂಝಿ, ಸರನ್, ಬಿಹಾರದ ಅಭಿವೃದ್ಧಿಗೆ ಒಂದು ಯೋಜನೆಗೆ 10 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಅದು ಹೇಳಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top