ನೆಲ್ಯಾಡಿ: ಮುಳಿಯ ಸಿಲ್ವರಿಯಾದಿಂದ ಗೋಲ್ಡ್‌ ಚೈನ್‌ ಅಂಡ್‌ ಬ್ಯಾಂಗಲ್‌ ಫೆಸ್ಟ್‌ ಫೆ.18ರಿಂದ 25ರ ವರೆಗೆ

Upayuktha
0



ಪುತ್ತೂರು: ನೆಲ್ಯಾಡಿಯ ಮುಳಿಯ ಸಿಲ್ವರಿಯಾ ಪ್ರಸ್ತುತಪಡಿಸುವ ಗೋಲ್ಡ್‌ ಚೈನ್‌ ಅಂಡ್‌ ಬ್ಯಾಂಗಲ್‌ ಫೆಸ್ಟ್‌ ಫೆಬ್ರವರಿ 18ರಿಂದ 25ರ ವರೆಗೆ ನಡೆಯಲಿದೆ.


ಗ್ರಾಹಕರ ನೆಚ್ಚಿನ ನಿತ್ಯ ಬಳಕೆಯ ಆಭರಣಗಳನ್ನು ಕೇವಲ 48 ಗಂಟೆಗಳಲ್ಲಿ ತಯಾರಿಸಿ ಕೊಡಲಾಗುವುದು ಎಂದು ಮುಳಿಯ ಜ್ಯುವೆಲ್ಸ್‌ ಪ್ರಕಟಣೆ ತಿಳಿಸಿದೆ.


ಈ ಉತ್ಸವದಲ್ಲಿ ಗ್ರಾಹಕರು ವಿನಿಮಯ ಮಾಡಿಕೊಳ್ಳುವ ಆಭರಣಗಳಿಗೆ ಅತ್ಯುತ್ತಮ ಬೆಲೆ ನೀಡಲಾಗುತ್ತದೆ. ಬಳೆಗಳ ಮೇಲೆ VA ಶೇ 8ರಿಂದ ಹಾಗೂ ಚೈನ್‌ಗಳ ಮೇಲೆ VA ಶೇ 6ರಿಂದ ಪ್ರಾರಂಭವಾಗುತ್ತದೆ.


ವೆರೈಟಿ ವಿನ್ಯಾಸದ ಆಕರ್ಷಕ ಚೈನ್‌ಗಳು ಮತ್ತು ನಿತ್ಯ ಬಳಕೆಯ 18 ಕ್ಯಾರೆಟ್‌ ಬಳೆಗಳ ಅತ್ಯುತ್ತಮ ಸಂಗ್ರಹ ಮುಳಿಯ ಜ್ಯುವೆಲ್ಸ್‌ನ ನೆಲ್ಯಾಡಿಯ ಸಿಲ್ವರಿಯಾ ಮಳಿಗೆಯಲ್ಲಿ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ 9945032916 ಸಂಪರ್ಕಿಸಬಹುದು.


ಮುಳಿಯ ಸಿಲ್ವರಿಯಾದ ಗೋಲ್ಡ್‌ ಚೈನ್‌ ಅಂಡ್ ಬ್ಯಾಂಗಲ್ ಫೆಸ್ಟ್‌ ಅನ್ನು ರಾಮನಗರದ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಆಶಾ ಜೋಗಿತ್ತಾಯ ದೀಪೋಜ್ವಲದ ಮೂಲಕ ನಾಳೆ (ಫೆ.18) ಬೆಳಗ್ಗೆ 10:30ಕ್ಕೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನೆಲ್ಯಾಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜೇಸಿಐ ನೆಲ್ಯಾಡಿಯ ಅಧ್ಯಕ್ಷರಾದ ದಯಾಕರ್‍‌ ರೈ ಕೆ.ಎಂ ಭಾಗವಹಿಸಲಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top