ಪುತ್ತೂರು: ಮುಳಿಯ ಜ್ಯುವೆಲ್ಸ್‌ನ ಡೈಮಂಡ್ ಫೆಸ್ಟ್‌ನ ಭಾಗವಾಗಿ ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ಆಭರಣಗಳ ಫ್ಯಾಶನ್ ಶೋ ಜ.28ರಂದು ನಡೆಯಿತು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜು ಉಪನ್ಯಾಸಕರು ಮತ್ತು ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾರ್ಯದರ್ಶಿ ರಾಜೇಶ್ವರಿ ಚೇತನ್ ಮತ್ತು ಯುವ ನಟಿ ಸಿಂಚನಾ ರಾವ್ ಅವರು ಮುಳಿಯ ಜ್ಯುವೆಲ್ಸ್ ಫ್ರಾಶನ್ ಶೋವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣ ನಾರಾಯಣ ಮುಳಿಯ, ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮಾ, ಕಿಸ್ನ ಡೈಮಂಡ್‌ನ ಪ್ರಕಾಶ್ ಶಿಂತ್ರೆ ಮತ್ತು ಬೆಳ್ತಂಗಡಿ ಶೋರೂಂ ಮ್ಯಾನೇಜರ್ ಅಶೋಕ್ ಡಿ ಬಂಗೇರ ಉಪಸ್ಥಿತರಿದ್ದರು.
ಮುಳಿಯ ಜ್ಯುವೆಲ್ಸ್ ಡೈಮಂಡ್ ಫೆಸ್ಟಿವಲ್ ಫೆ. 5ರ ವರೆಗೆ ವಿಸ್ತರಣೆಗೊಂಡಿದ್ದು, ಅತ್ಯುತ್ತಮ ಗುಣಮಟ್ಟದ ವಜ್ರಾಭರಣಗಳನ್ನು ಖರೀದಿಸಬಯಸುವ ಗ್ರಾಹಕರಿಗೆ ಇನ್ನಷ್ಟು ದಿನ ಸುವರ್ಣಾವಕಾಶ ಕಾದಿದೆ.
ಈಗಾಗಲೇ ಸಾವಿರಾರು ಗ್ರಾಹಕರ ಈ ವಿಶೇಷ ವಜ್ರಾಭರಣಗಳ ಉತ್ಸವಕ್ಕೆ ಹಾಜರಾಗಿದ್ದು, ತಮ್ಮ ಮನಸಿಗೊಪ್ಪುವ ವಜ್ರಾಭರಣಗಳನ್ನು ಖರೀದಿ ಮಾಡಿದ್ದಾರೆ. ಕೊನೆಯ ದಿನಗಳಲ್ಲಿ ಜನಸಂದಣಿ ಹೆಚ್ಚಾಗಿದ್ದು, ಇನ್ನಷ್ಟು ಬೇಡಿಕೆ ಇರುವ ಹಿನ್ನೆಲೆಯಲ್ಲಿ ಡೈಮಂಡ್ ಫೆಸ್ಟ್ ಅನ್ನು ಫೆ.5ರ ವರೆಗೆ ವಿಸ್ತರಿಸಲಾಗಿದೆ ಎಂದು7 ಪ್ರಕಟಣೆ ತಿಳಿಸಿದೆ.
ಕೇವಲ 4,850 ರೂ.ಗಳ ಕೈಗೆಟುಕುವ ಬೆಲೆಗಳಿಂದ ಪ್ರಾರಂಭವಾಗುವ ವಿವಿಧ ಶ್ರೇಣಿಗಳ ಅಮೂಲ್ಯ ಡೈಮಂಡ್ಸ್ ಮತ್ತು ಕಿಸ್ನ ಗೋಲ್ಡ್ ಅಂಡ್ ಡೈಮಂಡ್ ಜ್ಯುವೆಲ್ಲರಿಗಳು ಲಭ್ಯವಿರುತ್ತವೆ. ಕಿಸ್ನ ಶ್ರೇಣಿಯ ಪುರುಷರ ಉಂಗುರಗಳು 9,225 ರೂ.ಗಳಿಂದ, ಮಹಿಳೆಯರ ಉಂಗುರಗಳು 4,700 ರೂ.ಗಳಿಂದ ನೆಕ್ಲೇಸ್‌ಗಳು 48.400 ರೂ.ಗಳಿಂದ, ಮೂಗುತಿ- 2,800 ರೂ.ಗಳಿಂದ, ಸನ್‌ಶೈನ್ ಸೆಟ್‌ಗಳು 23,100 ರೂ.ಗಳಿಂದ, ಕಿವಿಯ ರಿಂಗ್‌ಗಳು 5,300 ರೂ.ಗಳಿಂದ, ಪೆಂಡೆಂಟ್‌ಗಳು 3,400 ರೂ.ಗಳಿಂದ ಹಾಗೂ ಬಳಗೆಳು 22,500 ರೂ.ಗಳಿಂದ ಪ್ರಾರಂಭವಾಗುತ್ತವೆ.
ವಜ್ರದ ಆಭರಣಗಳ ಮೇಲೆ ಶೇ 95ರಷ್ಟು ವಿನಿಮಯ ಮೌಲ್ಯ ಹಾಗೂ ಶೇ 90ರಷ್ಟು ಬೈಬ್ಯಾಕ್ ಮೌಲ್ಯಗಳನ್ನು ನೀಡುವುದಾಗಿ ಮುಳಿಯ ಜ್ಯುವೆಲ್ಸ್ ಪ್ರಕಟಿಸಿದೆ. ಜ.9ರಿಂದ ಪ್ರಾರಂಭವಾಗಿರುವ ಡೈಮಂಡ್ ಫೆಸ್ಟ್‌ಗೆ ಪ್ರತಿದಿನ ನೂರಾರು ಗ್ರಾಹಕರು ಆಗಮಿಸುತ್ತಿದ್ದು, ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಗುಣಮಟ್ಟದ ವಜ್ರಾಭರಣಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ವಿಶ್ವಾಸಾರ್ಹತೆ ಮತ್ತು ಗುಣಮಟ್ಟಕ್ಕೆ ಹೆಸರಾಗಿರುವ ಮುಳಿಯ ಜ್ಯುವೆಲ್ಸ್ ಮಳಿಗೆಗಳಿಗೆ ಭೇಟಿ ನೀಡುತ್ತಿರುವ ಗ್ರಾಹಕರ ಸಂಖ್ಯೆಯೇ 'ಯುನಿಕ್ ಡೈಮಂಡ್ ಫೆಸ್ಟ್‌ನ ಜನಪ್ರಿಯತೆಯನ್ನು ಸಾರುವಂತಿದೆ. ಮುಳಿಯ ಜ್ಯುವೆಲ್ಸ್‌ನ ಪುತ್ತೂರು ಮತ್ತು ಬೆಳ್ತಂಗಡಿ ಮಳಿಗೆಗಳಲ್ಲಿ ಈ ಯುನಿಕ್ ಡೈಮಂಡ್ ಫೆಸ್ಟ್ ನಡೆಯುತ್ತಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ