ಮಂಗಳೂರು: ಸುರತ್ಕಲ್-ಮುಕ್ಕ ಶ್ರೀನಿವಾಸ ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ವಿಶ್ವ ಸಂಸ್ಕೃತ ಸಮ್ಮೇಳನದ ಪೂರ್ವಭಾವಿಯಾಗಿ ಇಂದು ಸಂಜೆ 5 ಗಂಟೆಗೆ ವಿಶೇಷ ವಸ್ತುಪ್ರದರ್ಶನ ಉದ್ಘಾಟನೆಗೊಳ್ಳಲಿದೆ.
ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿ.ಎ ರಾಘವೇಂದ್ರ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಲೋಕಭಾಷಾ ಪ್ರಚಾರ ಪರಿಷತ್ ನ ಅಂತಾರಾಷ್ಟ್ರೀಯ ಅಧ್ಯಕ್ರಾದ ಪ್ರೊ. ಸದಾನಂದ ದೀಕ್ಷಿತ್ ಭಾಗವಹಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಸಹ ಕುಲಪತಿ ಡಾ. ಎ. ಶ್ರೀನಿವಾಸ ರಾವ್, ದೆಹಲಿ ಸಂಸ್ಕೃತ ಭಾರತಿಯ ಅಖಿಲ ಭಾರತ ಕಾರ್ಯದರ್ಶಿ ಡಾ. ನಂದಕುಮಾರ್, ಹುಬ್ಬಳ್ಳಿಯ ಆಚಾರ್ಯ ವೇದಪಾಠಶಾಲಾ ಸಂಸ್ಥಾಪಕ ಅಧ್ಯಕ್ಷರಾದ ವಿದ್ವಾನ್ ಶ್ರೀ ರವಿ ಆಚಾರ್ಯ, ಮುಂಬಯಿಯ ಉದ್ಯಮಿ ಡಾ. ವಿರಾರ್ ಶಂಕರ್ ಬಿ. ಶೆಟ್ಟಿ, ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಟ್ರಸ್ಟಿ- ಸದಸ್ಯರಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್ ರಾವ್, ಪ್ರೊ. ಶ್ರೀಮತಿ ಎ. ಮಿತ್ರಾ ಎಸ್. ರಾವ್, ಶ್ರೀಮತಿ ಪದ್ಮಿನಿ ಕುಮಾರ್ ಮತ್ತು ಉಪ ಕುಲಪತಿ ಡಾ. ಪಿ.ಎಸ್ ಐತಾಳ್ ಅವರು ಪಾಲ್ಗೊಳ್ಳಲಿದ್ದಾರೆ.
ಶ್ರೀನಿವಾಸ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ. ಶ್ರೀನಿವಾಸ ಮಯ್ಯ ಡಿ, ರಿಜಿಸ್ಟ್ರಾರ್ (ಅಭಿವೃದ್ಧಿ) ಡಾ. ಅಜಯ್ ಕುಮಾರ್, ಶೈಕ್ಷಣಿಕ ವಿಭಾಗದ ರಿಜಿಸ್ಟ್ರಾರ್ ಆದಿತ್ಯ ಕುಮಾರ್ ಮಯ್ಯ, ಡಾ. ಅನಿಲ್ ಕುಮಾರ್, ಸಂಚಾಲಕರಾದ ಡಾ. ಶಾಂತಲಾ ವಿಶ್ವಾಸ ಮತ್ತು ಸಹ ಸಂಚಾಲಕರಾದ ಡಾ. ಬಿ. ಗೋಪಾಲಾಚಾರ್ ಉಪಸ್ಥಿತರಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


