ಕನಕ ಕೀರ್ತನ ಗಂಗೋತ್ರಿಯಲ್ಲಿ ಮೊದಲ ಬಾರಿಗೆ ಕುಣಿತ ಭಜನೆಗೆ ವಿವಿ ವೇದಿಕೆ | ಸಾರ್ವಜನಿಕರಿಂದ ಮೆಚ್ಚುಗೆ | 200 ಕ್ಕೂ ಹೆಚ್ಚು ಗಾಯಕರ ಪಾಲ್ಗೊಳ್ಳುವಿಕೆ | ಮಾ. 3 ಕನಕ ಸ್ಮೃತಿಯಲ್ಲಿ ಪುರಸ್ಕಾರ ಪ್ರದಾನ
ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರವು ನ.14 ರಂದು ಏರ್ಪಡಿಸಿದ ಕನಕ ಕೀರ್ತನ ಗಂಗೋತ್ರಿ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಿಂದ ಒಟ್ಟು 18 ಗಾಯಕರು ಮತ್ತು ಕನಕ ಕುಣಿತ ಭಜನೆ ಸಾರ್ವಜನಿಕ ವಿಭಾಗದಲ್ಲಿ 4 ತಂಡಗಳನ್ನು 2022-23 ನೇ ಸಾಲಿನ ಕನಕ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪುರಸ್ಕಾರವನ್ನು ಮಾ. 3 ರಂದು ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಕನಕಸ್ಮೃತಿ ಕಾರ್ಯಕ್ರಮದಲ್ಲಿ ನೀಡಲಾಗುವುದು.
ಪ್ರೌಢಶಾಲಾ ವಿಭಾಗ:
ಮೇಧಾ ಉಡುಪ 10ನೇ ತರಗತಿ ಕೆನರಾ ಪ್ರೌಢಶಾಲೆ, ಮಂಗಳೂರು,
ಪಂಚಮಿ ಕೆ. 9ನೇ ತರಗತಿ ಎಸ್‌ಎಲ್‌ಎನ್‌ಪಿ ವಿದ್ಯಾಲಯ, ಪಾಣೆಮಂಗಳೂರು, ತನ್ವಿ ಕಾವೂರು, 9ನೇ ತರಗತಿ, ಕೇಂದ್ರೀಯ ವಿದ್ಯಾಲಯ, ಪಣಂಬೂರು, ಅನ್ವಿತ ಟಿ. 9ನೇ ತರಗತಿ, ನೀರ್ಚಾಲ್
ಪದವಿ ಪೂರ್ವ ವಿಭಾಗ: ಕೀರ್ತನ ನಾಯ್ಗ ಕೋಟೆಕಾರು, ದ್ವಿತೀಯ ಪಿ.ಯು.ಸಿ. ಸೈಂಟ್ ಅಲೋಶಿಯಸ್ ಪಿ.ಯು ಕಾಲೇಜು, ಮಂಗಳೂರು, ಸುಧೀಕ್ಷ ಆರ್ ಪ್ರಥಮ ಪಿ.ಯುಸಿ ಗೋವಿಂದಾಸ ಪಿಯು ಕಾಲೇಜು, ಸುರತ್ಕಲ್, ಶ್ರೀರಕ್ಷ ಎಸ್.ಎಚ್. ಪ್ರಥಮ ಪಿ.ಯುಸಿ ಸೈಂಟ್ ಆಗ್ನೇಸ್ ಪಿ.ಯು ಕಾಲೇಜು, ಮಂಗಳೂರು
ಪದವಿ ವಿಭಾಗ: ಶರಣ್ಯ ಕೆ.ಎನ್ ಅಂತಿಮ ಇಂಜಿನಿಯರಿಂಗ್ ಎನ್.ಎಮ್.ಎ.ಎಮ್. ಐ.ಟಿ. ನಿಟ್ಟೆ, ವಿಭಾಶ್ರೀ ಎಂ.ಎಸ್. ತೃತೀಯ ಬಿ.ಸಿ.ಎ. ವಿವೇಕಾನಂದ ಡಿಗ್ರಿ ಕಾಲೇಜು, ಪುತ್ತೂರು, ಸುಶಾನ್ ಸಾಲಿಯಾನ್ ಪಣಂಬೂರು, ಅಂತಿಮ ಇಂಜಿನಿಯರಿಂಗ್, ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ಮಂಗಳೂರು, ರೋಹಿತ್ ಕಾಮತ್, ದ್ವಿತೀಯ ಇಂಜಿನಿಯರಿಂಗ್ ಎನ್.ಎಮ್.ಎ.ಎಮ್. ಐ.ಟಿ. ನಿಟ್ಟೆ
ಸ್ನಾತಕೋತ್ತರ ವಿಭಾಗ: ಶರಣ್ಯ ಪ್ರಥಮ ಎಂ.ಎಸ್ಸಿ ಪ್ರಾಣಿಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ, ಅಭಿರಾಮ್ ಎನ್.ಜಿ. ಎಂ.ಎಸ್ಸಿ. ಮೈಕ್ರೋಬಯೋಲಾಜಿ, ಮಂಗಳೂರು ವಿಶ್ವವಿದ್ಯಾನಿಲಯ; ಶ್ರಾವ್ಯ ಬಿ. ದ್ವಿತೀಯ ಎಂ.ಎಸ್ಸಿ ಗಣಿತಶಾಸ್ತ್ರ, ವಿವೇಕಾನಂದ ಕಾಲೇಜು, ಪುತ್ತೂರು, ಶ್ರೀವರದಾ ಪಿ ಪ್ರಥಮ ಎಂ.ಎಸ್ಸಿ ಗಣಿತಶಾಸ್ತ್ರ, ಮಂಗಳೂರು ವಿಶ್ವವಿದ್ಯಾನಿಲಯ.
ಅಧ್ಯಾಪಕ-ಅಧ್ಯಾಪಕೇತರ ವಿಭಾಗ: ಡಾ. ಅನಿತ ಎಸ್. ಸಹಾಯಕ ಪ್ರಾಧ್ಯಾಪಕರು, ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು & ಹಾಸ್ಪಿಟಲ್ ಸುಳ್ಯ, ಯಶವಂತ, ವಾಹನ ಚಾಲಕರು, ಮಂಗಳೂರು ವಿಶ್ವವಿದ್ಯಾನಿಲಯ, ಸವಿತ, ಗ್ರಂಥಪಾಲಕಿ, ಮಂಗಳೂರು ವಿಶ್ವವಿದ್ಯಾನಿಲಯ
ಸಾರ್ವಜನಿಕ ವಿಭಾಗ (ಕನಕ ಸಮೂಹ ನೃತ್ಯ ಭಜನೆ):
ಗೆಳೆಯರ ಬಳಗ, ಗ್ರಂಥಾಲಯ, ಮಂಗಳೂರು ವಿಶ್ವವಿದ್ಯಾನಿಲಯ,
ಶ್ರೀ ರಾಮಾಂಜನೇಯ ಭಜನಾ ತಂಡ, ಗುಡ್ಡುಪಾಲ್, ಕೊಣಾಜೆ, ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು, ಬಾಲಿನಿ ಮತ್ತು ತಂಡ, ಮಂಗಳೂರು ವಿಶ್ವವಿದ್ಯಾನಿಲಯ.
ಆಯ್ಕೆಗೊಂಡ ಅಭ್ಯರ್ಥಿಗಳಿಗೆ ನಗದು, ಕನಕ ಪುರಸ್ಕಾರ, ಪ್ರಮಾಣಪತ್ರವನ್ನು ನೀಡಲಾಗುವುದು.
ಕನಕ ಕೀರ್ತನ ಗಾಯನ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ವಿದುಷಿ ಮಂಜುಳಾ ಜಿ. ರಾವ್ ಇರಾ, ಸುಮನ ನೂಡುಬಿದಿರೆ, ಡಾ. ಅರುಣ್ ಉಳ್ಳಾಲ್, ಶ್ರೀದೇವಿ ಕಲ್ಲಡ್ಕ, ದೀವಿತ್ ಎಸ್ ಕೋಟ್ಯಾನ್ ಮಂಗಳೂರು, ಶ್ರೀವಾಣಿ ಕಾಕುಂಜೆ ಸಹಕರಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

